ಭೂಮಿ ಸಂಸ್ಥೆ ಪ್ರತಿ ಚುನಾವಣಾ ಸಂಧರ್ಭದಲ್ಲೂ ಶೇಕಡಾ 100% ಮತದಾನ ಮತ್ತು ಮತದಾನದ ಮಹತ್ವದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ನಿರಂತವಾಗಿ ಮಾಡಿಕೊಂಡು ಬಂದಿದ್ದು. ಈ ಭಾರಿಯೂ ರಾಜ್ಯಾದ್ಯಂತ ಸಂಚರಿಸಿ ಮತದಾನ ಜಾಗೃತಿ ಕಾರ್ಯಕ್ರಮ ಅಭಿಯಾನ ನಡೆಸುತ್ತಿದೆ.
ನನ್ನ ಮತ ಮಾರಾಟಕ್ಕಿಲ್ಲ, ಉತ್ತಮ ಭಾರತಕ್ಕಾಗಿ ಮತ ಚಲಾಯಿಸಿ, ಹಲವು ಜಾಗೃತಿ ಘೋಷಣೆಗಳ ಮೂಲಕ ಶೇಕಡ 100ರಷ್ಟು ಮತದಾನಕ್ಕೆ ಹಾಗೂ ಪ್ರಾಮಾಣಿಕ ಮತದಾನಕ್ಕೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದು ಸ್ವಯಂಸೇವಕರು ಸಂಘ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ.
ಬೀದಿ ನಾಟಕ, ರಸಪ್ರಶ್ನೆ ಕಾರ್ಯಕ್ರಮ, ಮತದಾನದ ಬಗ್ಗೆ ಕಿರುಚಿತ್ರ ಸ್ಪರ್ಧೆ ಮತ್ತು ಸಂಗೀತ ಕಾರ್ಯಕ್ರಮಗಳ ಮೂಲಕ ವಿಶೇಷ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಭೂಮಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ನವೀನ್ ತಲಾರಿ ತಿಳಿಸಿದ್ದಾರೆ.