ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದ ಮಳೆ ಬೀಳುತ್ತಿರುವ ಹಿನ್ನೆಲೆ ಕರ್ನಾಟಕದ ಗಡಿ ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕೃಷ್ಣೆಯ ಪ್ರವಾಹಕ್ಕೆ ಚಿಕ್ಕೋಡಿ ವ್ಯಾಪ್ತಿಯ 10 ಸೇತುವೇಗಳು ಜಲಾವೃತವಾಗಿವೆ. ಈಗಾಗಲೆ ಕೃಷ್ಣಾ ನದಿಗೆ 1 ಲಕ್ಷ 90 ಸಾವಿರ ಕ್ಯೂಸೆಕ್ಸ್ ನೀರು ಬರುತ್ತಿದ್ದು ನದಿ ದಡದ ಭಾಗದಲ್ಲಿನ ಜನರಿಗೆ ಜಿಲ್ಲಾಡಳಿತ ಸುರಕ್ಷಿತ ಸ್ಥಳಕ್ಕೆ ಹೋಗಿ ಎಂದು ಎಚ್ಚರಿಕೆ ನೀಡುವುದರ ಜೊತೆಗೆ ಸೇತುವೆ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ
ಹೌದು, ಚಿಕ್ಕೋಡಿ ವಿಭಾಗದಲ್ಲಿ ಈ ವಿಷಯ ಕೇಳಿದರೆ ವಿಚಿತ್ರವಾದರೂ ಸತ್ಯ. ಅದೇನೆಂದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಮಳೆ ಪ್ರಮಾಣ ಕಡಿಮೆ ಆದರೂ ಪ್ರವಾಹದ ಸ್ಥತಿ ಎದುರಿಸಬೇಕಾಗಿದೆ.. ಇದು ಕೇವಲ ಒಂದು ವರ್ಷದ್ದಲ್ಲ. ಪ್ರತಿ ವರ್ಷ ನಡೆದುಕೊಂಡು ಬಂದಿರುವುದು. ಈಗ ಮಹಾರಾಷ್ಟ್ರದಲ್ಲಿ ಮುಂದುವರೆದ ಮಳೆಯ ಪ್ರಮಾಣದಿಂದ ಚಿಕ್ಕೋಡಿ ಭಾಗ ಅಂದರೆ ಚಿಕ್ಕೋಡಿ, ರಾಯಬಾಗ, ಅಥಣಿ ಭಾಗದಲ್ಲಿ ಪ್ರವಾಹ ಎದುರಾಗಿದೆ. ಈ ಪ್ರವಾಹದಿಂದ ಚಿಕ್ಕೋಡಿ ತಾಲೂಕಿನ 8 ಸೇತುವೆಗಳು ಹಾಗೂ ರಾಯಬಾಗ ತಾಲೂಕಿನ 2 ಒಟ್ಟು 10 ಸೇತುವೆಗಳು ಜಲಾವೃತವಾಗಿವೆ.ಇದರಿಂದ ಸಾರ್ವಜನಿಕರು 15 ರಿಂದ 20 ಕಿ.ಮೀ ಸುತ್ತುವರೆದು ಸಂಚರಿಸುತ್ತಿದ್ದಾರೆ. ಸದ್ಯ ಕೃಷ್ಣಾನದಿಯಲ್ಲಿ 1.90 ಲಕ್ಷ ಕ್ಯೂಸೆಕ್ಸ ನೀರು ಹರಿದು ಬರುತ್ತಿದ್ದು, ಇನ್ನೂ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ 2100 ಕ್ಯೂಸೆಕ್ಸ್ ನೀರು ಬರುತ್ತಿದ್ದು ಇನ್ನೂ ಪ್ರವಾಹ ಹೆಚ್ಚುವ ಸಾದ್ಯತೆ ಇದೆ.
ಇನ್ನೂ ಪ್ರವಾಹ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೃಷ್ಣಾ ನದಿ ದಡದಲ್ಲಿ ಕಟ್ಟೆಚ್ಚರ ವಹಿಸಿದೆ. ಇನ್ನೂ ಹೈ ಅಲರ್ಟ ಕೂಡಾ ಘೋಷಿಸಿದ್ದು, ನದಿಯೊಳಗೆ ಇಳಿಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಹಮ್ಮಿಕೊಳ್ಳಲಾಯಿತು. ಇನ್ನೂ ಚಿಕ್ಕೋಡಿ ತಾಲೂಕಿನ. ಕಲ್ಲೋಳ ಗ್ರಾಮದ ತೋಟದ ಸುಮಾರು 8 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಇನ್ನೂ ರಾತೋರಾತ್ರೀ ನೀರು ಏರಿಕೆಯಾಗಿದ್ದರಿಂದ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಸುಮಾರು 40 ಕುಟುಂಭಗಳು ನಡುಗಡ್ಡೆಯಲ್ಲಿವೆ. ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಎಸ್.ಡಿ.ಆರ್.ಎಪ್ ತಂಡ, ಸೇರಿದಂತೆ ಅಧಿಕಾರಿಗಳು ಇಂಗಳಿ ಗ್ರಾಮಕ್ಕೆ ಭೇಟಿ ನೀಡಿ ಆ ತೋಟಪಟ್ಟಿ ವಸತಿ ಕುಟುಂಭಗಳ ಸ್ಥಳಾಂತರಕ್ಕೆ ಜನರ ಮನೆಮನೆಗೆ ಹೋಗಿ ಮನವಿ ಮಾಡುತ್ತಿದ್ದಾರೆ.