ಭಾರತ ಸರ್ಕಾರ ಆರೋಗ್ಯದ ಕಾರ್ಯಕ್ರಮಗಳ ಮೇಲೆ ಹೆಚ್ಚಿನ ನಿಗಾ ವಹಿಸುತ್ತಿದೆ. ಅದರಲ್ಲಿಯೂ ಮಕ್ಕಳ ಆರೋಗ್ಯದ ಬಗ್ಗೆ ಯೋಜನೆಗಳನ್ನು ರೂಪಿಸುತ್ತಿದ್ದು ಭಾರತ ಸರ್ಕಾರದ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ ಶಿವಮೊಗ್ಗ ಜಿಲ್ಲೆಯಲ್ಲಿ ಗಮನಾರ್ಹ ಪ್ರಗತಿಯನ್ನು ಕಂಡಿದೆ. ಸಾಗರ ತಾಲ್ಲೂಕು ಈ ಯೋಜನೆಯಲ್ಲಿ ಮುಂಚೂಣಿಯಲ್ಲಿದೆ.
ಈ ಯೋಜನೆಯಲ್ಲಿ ಮಕ್ಕಳಲ್ಲಿರುವ ಹೃದಯಸಂಬಂಧೀ ಕಾಯಿಲೆ, ಕಾಲು ಊನಗೊಳ್ಳುವ ಸ್ಥಿತಿ, ಥೆಲಸೀಮಿಯಾ, ರಕ್ತಹೀನತೆ, ಸೀಳುತುಟಿ ಇಂತಹ ಸಮಸ್ಯೆಗಳಿಗೆ ಸರ್ಕಾರವೇ ಶಸ್ತ್ರಚಿಕಿತ್ಸೆಯ ವೆಚ್ಚ ಭರಿಸಿ ಗುಣಮುಖಗೊಳ್ಳುವಂತೆ ಕಾಳಜಿ ವಹಿಸುತ್ತದೆ. ಹುಟ್ಟಿದ ಮಗುವಿನಿಂದ 18 ವರ್ಷದ ಮಕ್ಕಳವರೆಗೆ ಎಲ್ಲಾ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ತೆರಳಿ ವೈದ್ಯರ ತಂಡವೇ ತಪಾಸಣೆ ನಡೆಸುತ್ತದೆ.
ಬೆಳಕಿಗೇ ಬಾರದ ಎಷ್ಟೋ ರೋಗಿಗಳಿಗೆ ಶಸ್ತ್ರಚಿಕಿತ್ಸೆಯನ್ನು ನಡೆಸಿ ಅವರ ಆರೋಗ್ಯ ಹಸನುಗೊಳ್ಳುವಂತೆ ಮಾಡಲಾಗಿದೆ. ವೈದ್ಯರ ತಂಡಗಳು ಕುಗ್ರಾಮಗಳಿಗೆ ಭೇಟಿ ನೀಡಿ ಮಕ್ಕಳಿಗೆ ನೀಡುವ ಮೊಟ್ಟೆ, ಕಾಳು, ಪೌಷ್ಟಿಕ ಆಹಾರಗಳ ಗುಣಮಟ್ಟವನ್ನು ಗಮನಿಸಿ ಪೌಷ್ಟಿಕಾಂಶದ ಕೊರತೆ ಇರುವ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತಿದೆ.

ಫಲಾನುಭವಿ, ಗೀತಾ ನ್ಯೂಸ್ ನೆಕ್ಷ್ಟ್ ನೊಂದಿಗೆ ಮಾತನಾಡಿ ನಾವು ಆನಂದಪುರ ಮತ್ತು ಶಿಕಾರಿಪುರ ಅಂಚಿನಲ್ಲಿರುವ ನರಸೀಪುರ ಊರಿನವರು. ನನ್ನ ಮಗಳು ಹಂಸಿಕಾ ಕಾಲು ಊನವಾಗಿ ನಡೆಯಲು ಸಾಧ್ಯವಿರದೇ ಇರುವ ಸ್ಥಿತಿಗೆ ತಲುಪಿದ್ದಳು. ಕೇಂದ್ರ ಸರ್ಕಾರದ ರಾಷ್ಟ್ರೀಯ ಬಾಲಸ್ವಾಸ್ಥ್ಯ ಯೋಜನೆ ಅಡಿ ಆಕೆಗೆ ಶುಶ್ರೂಷೆ ನಡೆಸಿ ಈಗ ನಡೆಯುವಂತೆ ಮಾಡಿಕೊಟ್ಟಿದ್ದಾರೆ. ನನಗೆ ತುಂಬಾ ಖಷಿಯಾಗಿದೆ ಹಾಗು ಈ ತರಹದ ಯೋಜನೆಗಳು ಜನ ಸಾಮಾನ್ಯರಿಗೆ ದೊರಕುವಂತಾಗಲಿ ಎಂದು ಹೇಳಿದರು.

ಫಲಾನುಭವಿ, ಅಜಯಕುಮಾರ್ ತ್ಯಾಗರ್ತಿ ನ್ಯೂಸ್ ನೆಕ್ಷ್ಟ್ ನೊಂದಿಗೆ ಮಾತನಾಡಿ ನನಗೆ ಹೃದಯದ ಕಾಯಿಲೆ ಇತ್ತು. ನನಗೆ ವೈದ್ಯರುಗಳು ಪ್ರೀತಿಯಿಂದ ಔಷಧಿ ಕೊಡಿಸಿ ಕಾಯಿಲೆ ವಾಸಿ ಮಾಡಿಕೊಟ್ಟಿದ್ದಾರೆ. ಈಗ ಶಾಲೆಗೆ ಹೋಗುತ್ತಿದ್ದೇನೆ. ಈಗ ನನ್ನ ಆರೋಗ್ಯದಲ್ಲಿ ಸುಧಾರಣೆ ಯಾಗಿದ್ದು ನಾನು ಎಲ್ಲರಂತೆ ಇರಲು ಸಾಧ್ಯವಾಗಿದೆ ಎನ್ನುತ್ತಾರೆ.

.
ದಿನೇಶ, ಶಾಲಾ ಮುಖ್ಯೋಪಾಧ್ಯಾಯರು,ಸಾಗರ: ಮಾತನಾಡಿ ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಯೋಜನೆ ಅಡಿಯಲ್ಲಿ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆಯ ಕಾರ್ಯಕ್ರಮ ನಡೆಯುತ್ತಿದ್ದು ಬಡಮಕ್ಕಳಿಗೆ ಈ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ. ಕೇಂದ್ರ ಸರ್ಕಾರದ ಈ ಯೋಜನೆ ಮಕ್ಕಳ ಬದುಕಿಗೆ ವರದಾನವಾಗಿವೆ.

ಡಾ|| ಮುನಿವೆಂಕಟರಾಜು, ವೈದ್ಯಾಧಿಕಾರಿ:ಮಾತನಾಡಿ ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುತ್ತಿದ್ದು ವೈದ್ಯರ ತಂಡ ತಪಾಸಣೆ ನಡೆಸಿ ಶುಶ್ರೂಷೆ ನೀಡುವ ಜೊತೆಯಲ್ಲಿ ಸಮಸ್ಯೆ ಇರುವ ಮಕ್ಕಳಿಗೆ ಚಿಕಿತ್ಸೆ ಕೊಡಿಸಿ ಗುಣಮುಖಗೊಳಿಸುವ ಕೆಲಸ ಮಾಡುತ್ತಿದೆ.

ಡಾ|| ಶರ್ಮದಾ, ವೈದ್ಯರು, ರಾಷ್ಟ್ರೀಯ ಬಾಲಸ್ವಾಸ್ಥ್ಯ ಯೋಜನೆ: ಮಾತನಾಡಿ ಕೇಂದ್ರ ಸರ್ಕಾರದ ಈ ಯೋಜನೆಯಲ್ಲಿ ಮಕ್ಕಳ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಹೆಚ್ಚಿನ ನಿಗಾ ವಹಿಸಲಾಗುತ್ತಿದ್ದು ಶಸ್ತ್ರಚಿಕಿತ್ಸೆಗಳನ್ನೂ ಮಾಡಿಸಿ ಅವರು ಮತ್ತೆ ಎಂದಿನಂತೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

ಹಂಸಿಕಾ, ಫಲಾನುಭವಿ:ಮಾತನಾಡಿ ನನ್ನ ಕಾಲು ನಡೆಯಲು ಸಾಧ್ಯವೇ ಇರಲಿಲ್ಲ. ಸರ್ಕಾರದ ಯೋಜನೆಯಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿ ನಡೆಯುವಂತೆ ಮಾಡಿಕೊಟ್ಟಿದ್ದಾರೆ. ಈಗ ಶಾಲೆಗೆ ಹೋಗುತ್ತಿದ್ದೇನೆ.

ಭಾರತ ಸರ್ಕಾರದ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮ ಮಕ್ಕಳ ಆರೋಗ್ಯಕ್ಕೆ ಸಂಬಂಧಪಟ್ಟ ಅತ್ಯಂತ ಉತ್ತಮ ಯೋಜನೆಯಾಗಿದ್ದು ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು. 
error: Content is protected !!