ಶಿವಮೊಗ್ಗ, ಆಗಸ್ಟ್ 16 : ಇಡೀ ಜಗತ್ತಿನಲ್ಲಿ ಪ್ರಜಾಪ್ರಭುತ್ವದ ದೊಡ್ಡ ದೇಶ ಭಾರತ. ಇಂದು ಎಲ್ಲರ ಚಿತ್ತ ಭಾರತದತ್ತ ಇದೆ. ಸಮರ್ಪಕ ನಾಯಕತ್ವದಲ್ಲಿ ಭಾರತವು ವಿಶ್ವಗುರು ಆಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದು, ಜಗತ್ತು ಭಾರತದ ನಾಯಕತ್ವವನ್ನು ಬಯಸುತ್ತಿದೆ ಎಂದು ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ರವರು ಹೇಳಿದರು.
ಅವರು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಂದರ್ಭದಲ್ಲಿ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘ, ಜಿಲ್ಲಾ ಕಲಾವಿದರ ವೇದಿಕೆ, ಮಲೆನಾಡು ಕಲಾ ತಂಡ(ರಿ), ಸಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಿವೃತ್ತಿ ನೌಕರರ ಸಂಘದ ಆವರಣ, ಶಿವಮೊಗ್ಗ ಇಲ್ಲಿ ಆಯೋಜಿಸಿದ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣ ನೇರವೇರಿಸಿ ಮಾತನಾಡಿದರು.
ವಿಧಾನ ಪರಿಷತ್ ಶಾಸಕ ರುದ್ರೇಗೌಡರು ಮಾತನಾಡಿ, ತ್ಯಾಗ ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅಂತಹ ಮಹಾತ್ಮರನ್ನು ನೆನೆಯುವುದರ ಮೂಲಕ ದೇಶಕ್ಕೆ ನಮನ ಸಲ್ಲಿಸೋಣ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅದ್ಯಕ್ಷರಾದ ಶ್ರೀ ಡಿ.ಎಂ. ಚಂದ್ರಶೇಖರ್. ಕಲಾವಿದರ ವೇದಿಕೆ ಅಧ್ಯಕ್ಷರಾದ ಗಣೇಶ್ ಕೆಂಚನಾಲ್ ಸೇರಿದಂತೆ ಹಲವರು ಸಾಕ್ಷಿಯಾಗಿದ್ದರು.
  ನಂತರ ಕಲಾವಿದರ ವೇದಿಕೆಯ ವಿದ್ವಾನ್ ಲಲಿತಮ್ಮ ಮತ್ತು ಸಂಗಡಿಗರಿಂದ ದೇಶಭಕ್ತಿಗೀತೆ, ಆಂಜನೇಯ ಜೋಗಿ ಹಾಗೂ ಶ್ರೀನಿವಾಸ ಜೋಗಿ ಅವರಿಂದ ಜೋಗಿ ಜಾನಪದ-ಸ್ವಾತಂತ್ರ್ಯ ಬಂದ ಬಗ್ಗೆ ಗೀತೆಗಳು, ಶಿಕಾರಿಪುರದ ಜ್ಯೋತಿ ಕುಮಾರ್ ಅವರಿಂದ ಸ್ವಾತಂತ್ರ್ಯ ಕುರಿತ ಲಾವಣಿ, ಬಿ ವಿ ತಿಪ್ಪಣ್ಣ. ಮಹಾದೇವನ್, ತ್ರಿವೇಣಿ, ತಿಪ್ಪೆರುದ್ರಪ್ಪ,   ಅವರಿಂದ “ತಿರಂಗ” ಎಂಬ ರೂಪಕ ಎಲ್ಲರ ಮೆಚ್ಚುಗೆ ಗಳಿಸಿತು. ವಾದ್ಯ ಸಹಕಾರದಲ್ಲಿ ರುದ್ರೇಶ್, ರಾಜಶೇಖರ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ಬಸವರಾಜಪ್ಪ ಪರಪ್ಪ ಹಂದಗಲ್, ರಾಮಚಂದ್ರಪ್ಪ, ಪಿ ಹನುಮಂತಪ್ಪ, ಆರ್ ಹೆಚ್ ಗಿರೀಶ್, ಟಿ.ಎ ಶರಣಪ್ಪ, ಎಂ ರಾಮಚಂದ್ರಪ್ಪ, ಭಗವಂತರಾವ್ ಸೇರಿದಂತೆ ನಿವೃತ್ತ ನೌಕರರ ಸಂಘದ ನಿರ್ದೇಶಕರು, ಪದÁಧಿಕಾರಿಗಳು, ಸದಸ್ಯರು, ಹಾಗು ಕಲಾವಿದರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಎಸ್ ಷಣ್ಮುಖಪ್ಪ ಸ್ವಾಗತಿಸಿದರೆ, ಕಲಾವಿದರ ವೇದಿಕೆ ಕಾರ್ಯದರ್ಶಿ ಧನಲಕ್ಷಿ ವಂದಿಸಿದರು.

error: Content is protected !!