ಭದ್ರಾವತಿ: ರೈತರು ಮತ್ತು ಬ್ಯಾಂಕ್ ಅಧಿಕಾರಗಳ ನಡುವೆ ಉತ್ತಮ ಭಾಂದವ್ಯವಿರಬೇಕು. ಹಾಗೆಯೆ ಅಧಿಕಾರಿಗಳು ರೈತರೊಂದಿಗೆ ಉತ್ತಮ ಸ್ನೇಹ ಸಂಬಂಧ ಹೊಂದಿದರೆ ರೈತರು ಬ್ಯಾಂಕ್ ಗೆ ಹತ್ತಿರ ಇರುತ್ತಾರೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಕೆ.ಬಿ ಪವಿತ್ರರಾಮಯ್ಯ ಅವರು ತಿಳಿಸಿದರು.

ಅವರು ಗುರುವಾರ, ತಾಲ್ಲೂಕಿನ ಪಿಎಲ್ ಡಿ ಬ್ಯಾಂಕ್ ಮೇಲ್ಭಾಗದ ಆವರಣದಲ್ಲಿ 2021-22 ನೇ ಸಾಲಿನ “ವಾರ್ಷಿಕ ಮಹಾಸಭೆ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬ್ಯಾಂಕ್ ಗಳು ರೈತರ ಕಷ್ಟಗಳಿಗೆ ಸ್ಪಂದಿಸಿ, ಅವರ ಆರ್ಥಿಕ ಸ್ಥಿತಿಯನ್ನು ಸಮತೋಲನದಲ್ಲಿಡಲು ಸಾಲ ಸೌಲಭ್ಯದ ವ್ಯವಸ್ಥೆಗೆ ಅನುವುಮಾಡಿಕೊಡಲು ಸಹಕಾರಿಯಾಗಿವೆ, ಅದೇ ರೀತಿ ರೈತರು ಕೂಡ ಬ್ಯಾಂಕುಗಳ ಸವಾಲುಗಳನ್ನು ಅರಿತುಕೊಂಡು, ನಿಮ್ಮದೇ ಬ್ಯಾಂಕ್ ಎಂದು ಪರಿಗಣಿಸಿ, ನಿಗದಿತ ಸಮಯದೊಳಗೆ ಸಾಲ ಮರುಪಾವತಿ ಮಾಡಬೇಕು, ಆಗ ಮಾತ್ರ ಬ್ಯಾಂಕುಗಳು ರೈತರ ಪರ ಮುಂದಿನ ಹೆಜ್ಜೆ ಇಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ, ಪಿಎಲ್ ಡಿ ಬ್ಯಾಂಕ್ ಮಾನ್ಯಅಧ್ಯಕ್ಷರು ಶ್ರೀ ಎಸ್. ವಿರುಪಾಕ್ಷಪ್ಪ ರವರು, ಪ್ರಭಾರ ವ್ಯಸ್ಥಾಪಕರು ಶ್ರೀ ಕೃಷ್ಣೆಗೌಡ ರವರು, ಕಾರ್ಯಕಾರಿ ಸಮಿತಿ ಸದಸ್ಯರುಗಳು, ಮತ್ತು ಬ್ಯಾಂಕ್ ಸಿಬ್ಬಂದಿ ವರ್ಗದವರು, ರೈತ ಮುಖಂಡರು ಹಾಜರಿದ್ದರು.

error: Content is protected !!