ಬೋರ್ಡೋ ದ್ರಾವಣವು ಅಡಿಕೆ ಬೆಳೆ ಸಸ್ಯ ಸಂರಕ್ಷಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆÉ. ಬೋರ್ಡೋ ದ್ರಾವಣವನ್ನು ವೈಜ್ಞಾನಿಕ ರೀತಿಯಲ್ಲಿ ತಯಾರಿಸುವುದರಿಂದ ಹೆಚ್ಚಿನ ಪರಿಣಾಮವನ್ನು ನಿರೀಕ್ಷಿಸಬಹುದು. ರೋಗಾಣುಗಳಿಗೆ ಶೇ.1 ರ ಬೋರ್ಡೋ ದ್ರಾವಣವನ್ನು ಶಿಫಾರಸ್ಸು ಮಾಡಲಾಗಿದೆ. ಶೇ.1 ರ ಬೋರ್ಡೋ ದ್ರಾವಣವನ್ನು ತಯಾರಿಸಲು 1 ಕೆ.ಜಿ ಮೈಲುತುತ್ತವನ್ನು 100 ಲೀಟರ್ ನೀರಿಗೆ ಬೆರೆಸುವುದು. ಮೈಲು ತುತ್ತ ಹರಳು ರೂಪದಲ್ಲಿ ಲಭ್ಯವಿದ್ದು, ಇದು ಕರಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ದ್ರಾವಣ ಸಿಂಪಡಿಸುವ ಹಿಂದಿನ ದಿನ ರಾತ್ರಿ ಮೈಲುತುತ್ತವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ನೀರಿಗೆ ತಾಕುವಂತೆ ಇಳಿ ಬಿಡಬೇಕು. ಇದರಿಂದ ಬೆಳಗ್ಗೆ ಆಗುವುದರೊಳಗೆ ಮೈಲುತುತ್ತ ಕರಗಿರುತ್ತದೆ. ಈ ದ್ರಾವಣವು ಆಮ್ಲೀಯಾವಾಗಿದ್ದು, ಇದು ಗಿಡಗಳಿಗೆ ಹಾನಿಯನ್ನುಂಟು ಮಾಡುತ್ತದೆ, ಆದ್ದರಿಂದ ಇದರ ರಸಸಾರವನ್ನು ತಟಸ್ಥಗೊಳಿಸಲು ಸುಣ್ಣವನ್ನು ಬೆರೆಸಬೇಕು. ಸುಣ್ಣದ ಪ್ರಮಾಣವು ಸುಣ್ಣದ ಗುಣಮಟ್ಟವನ್ನು ಅವಲಂಭಿಸಿದೆ. ಅಂದರೆ ಕಲ್ಲು ಸುಣ್ಣವನ್ನು ಉಪಯೋಗಿಸುವುದಾದರೆ 1 ಕೆ.ಜಿ ಮೈಲುತುತ್ತಕ್ಕೆ 1 ಕೆ.ಜಿ ಸುಣ್ಣವನ್ನು ಹಾಕಬೇಕಾಗುತ್ತದೆ. ಉತ್ಕಷ್ಟ ಗುಣಮಟ್ಟದ ಸುಣ್ಣವಾದರೆ (ಚಿಪ್ಪು ಸುಣ್ಣ) 300-400 ಗ್ರಾಂ ನಷ್ಟು ಸಾಕಾಗುತ್ತದೆ.


ಈ ಬೋರ್ಡೋ ದ್ರಾವಣದ ರಸಸಾರವು 7.0 ಇದ್ದರೆ ಮಾತ್ರ ಪರಿಣಾಮಕಾರಿಯಾಗಿರುತ್ತದೆ. ಬೋರ್ಡೋ ದ್ರಾವಣವನ್ನು ತಯಾರು ಮಾಡುವ ವಿಧಾನವನ್ನು ಈ ಕೆಳಗೆ ವಿವರಿಸÀಲಾಗಿದೆ.
1 ಕಿ.ಗ್ರಾಂ. ಮೈಲುತುತ್ತ 300-400 ಗ್ರಾಂ. ಸುಣ್ಣ(ಚಿಪ್ಪು) 10 ಲೀ. ನೀರಿನಲ್ಲಿ ಕರಗಿಸಿ 10 ಲೀ. ನೀರಿನಲ್ಲಿ ಕರಗಿಸಿ,50 ಲೀ ನೀರಿಗೆ ಸಮಮಾಡಿ50 ಲೀ ನೀರಿಗೆ ಸಮಮಾಡಿ

ಬೋರ್ಡೋ ದ್ರಾವಣದ ಉಪಯೋಗಗಳು
1) ಬೋರ್ಡೋ ದ್ರಾವಣವನ್ನು ಶೇ. 1ರ ಪ್ರಮಾಣದಲ್ಲಿ ಕಾಯಿ ಕೊಳೆ ರೋಗದ ಹತೋಟಿಗೆ ಬಳಸಬಹುದು.
2) ಈ ದ್ರಾವಣವನ್ನು ಅಡಿಕೆಯ ಸುಳಿ ಕೊಳೆ ರೋಗದ ಹತೋಟಿಗೂ ಉಪಯೋಗಿಸಬಹುದು.
3) ಇದಲ್ಲದೆ ಅಡಿಕೆಯ ಅಂತರ ಬೆಳೆಯಾದ ಕೋಕೋ ಬೆಳೆಯ ಕಾಯಿಕೊಳೆ ರೋಗಕ್ಕೂ ಕೂಡ ಬಳಸಬಹುದು.
4) ಅಡಿಕೆಯ ಪ್ರಮುಖ ಅಂತರ ಬೆಳೆಯಾದ ಕಾಳುಮೆಣಸಿನ ಸೊರಗು ರೋಗದ ನಿಯಂತ್ರಣಕ್ಕೆ ಶೇ. 1ರ ಬೋರ್ಡೋ ದ್ರಾವಣವನ್ನು ಬಳ್ಳಿಯ ಬುಡಕ್ಕೆ 5 ಲೀಟರ್ ಸುರಿಯಬೇಕು.
ಸೂಚನೆಗಳು:

  1. ಬೋರ್ಡೋ ದ್ರಾವಣವನ್ನು ತಯಾರಿಸಲು ಪ್ಲಾಸ್ಟಿಕ್ ಪಾತ್ರೆಗಳನ್ನೇ ಬಳಸಬೇಕು.
  2. ಪಿ. ಹೆಚ್. ಹಾಳೆ ಪ್ರಯೋಗಶಾಲಾ ಸಲಕರಣೆಗಳನ್ನು ಮಾರಾಟ ಮಾಡುವ ಅಂಗಡಿಗಳಲ್ಲಿ ದೊರಕುವುದು.
  3. ಬೋರ್ಡೋ ದ್ರಾವಣ ತಯಾರಿಸಲು ಬಳಸುವ ಸುಣ್ಣದಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ಪರೀಕ್ಷಿಸಿ ನೋಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪಕಿ೯ಸಿ

ನಾಗರಾಜಪ್ಪ ಅಡಿವಪ್ಪರ್ ಮತ್ತು ರೇವತಿ, ಆರ್. ಎಮ್
ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗ
ಅಡಿಕೆ ಸಂಶೋಧನಾ ಕೇಂದ್ರ, ನವಿಲೆ, ಶಿವಮೊಗ್ಗ

ಮೊಬೈಲ್:‌ 9535250742

error: Content is protected !!