ಬೆಂಡೆಯು ಪ್ರಮುಖ ತರಕಾರಿ ಬೆಳೆಯಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ, ಇದು ಜೀವಸತ್ವ ‘ಸಿ’ ಅಯೋಡಿನ್ ಮತ್ತು ಸುಣ್ಣದ ಅಂಶವನ್ನು ಪೂರೈಸುತ್ತದೆ. ಇದನ್ನು ಗೊಂಬೊ, ಬಂದಿ, “ಹೆಂಗಸರ: ಬೆರಳುಗಳು” (ಲೇಡಿಸ್ ಫಿಂಗರ್) ಎಂದು ಕಥೆಯಲಾಗುತ್ತದೆ.
ಬೆಂಡೆಯ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳು
ಬೆಂಡೆ ಕಾಯಿಗಳಲ್ಲಿ ವಿಟಮಿನ್ (ಬಿ), ಕ್ಯಾಲ್ಸಿಯಂ, ಕಬ್ಬಿನ ಹಾಗೂ ಪೊಟ್ಯಾಷಿಯಂಗಳು ಹೇರಳವಾಗಿವೆ. ಬಂಡೆ ಕಾಯಿಯನ್ನು ಬ್ಯಾಂಕ್, ಕಣ್ಣಿನ ಪರೆ, ಅಸ್ತಮಾ, ಕ್ಯಾನ್ಸರ್ ಚಿಕಿತ್ಸೆಯಲ್ಲಿ ಯಶಸ್ವಿಯಾಗಿ ಬಳಸಿದ ಪುರಾವೆಗಳಿವೆ. ಅಲ್ಲದೆ ಉರಿಊತ ಮತ್ತು ಮಧುಮೇಹಿ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.
ಮಣ್ಣು
ಬೆಂಡೆಯನ್ನು ಎಲ್ಲಾ ವಿಧವಾದ ಮಣ್ಣಿನಲ್ಲಿ ಬೆಳೆಯಬಹುದಾಗಿದೆ. ಆದರೆ ನೀರು ಬಸಿದು ಹೋಗುವಂತಹ ಮರಳು ಮಿಶ್ರಿತ ಗೋಡು ಮಣ್ಣು ಉತ್ತಮವಾದುದು.
ಬಿತ್ತನೆ ಕಾಲ
ಒಣ ಮೈದಾನ ಪ್ರದೇಶಗಳಲ್ಲಿ ಜೂನ್-ಜುಲೈ ಮತ್ತು ಜನವರಿ ಫೆಬ್ರವರಿ ಬಿತ್ತನೆಗೆ ಸೂಕ್ತ ಕಾಲವಾಗಿದೆ. ಗುಡ್ಡಗಾಡು ಪ್ರದೇಶಗಳಲ್ಲಿ ಜನವರಿ ಫೆಬ್ರವರಿ ಸೂಕ್ತ ಕಾಲ, ಕರಾವಳಿ ಪ್ರದೇಶದಲ್ಲಿ ಜೂನ್-ಜುಲೈ ಸೂಕ್ತ ಕಾಲ.
ತಳಿಗಳು

  1. ಪೂಸಾ ಸವಾನಿ: ಈ ತಳಿಯನ್ನು ಎಲ್ಲಾ ವಲಯಗಳಿಗೆ ಶಿಫಾರಸ್ಸು ಮಾಡಲಾಗಿದ್ದು, ಹಳದಿ ನಂಜುರೋಗಕ್ಕೆ ಸ್ವಲ್ಪ ಮಟ್ಟಿಗೆ ನಿರೋಧಕ ಶಕ್ತಿ
  2. ಅರ್ಕಾ ಅಭಯ್: ಈ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ. ಹಾಗೂ ರೆಂಬೆಗಳನ್ನು ಹೊಂದಿರುತ್ತವೆ. ತರಕಾರಿಯಾಗಿ ಉಪಯೋಗಿಸುವ ಹಂತದಲ್ಲಿ ಕಾಯಿಗಳು ಕಡುಹಸಿರು ಬಣ್ಣದಿಂದ ಕೂಡಿದ್ದು, ಉದ್ದವಾಗಿದ್ದು, ಮೃದುವಾಗಿರುತ್ತವೆ. ಕಾಯಿಗಳು ಒಳ್ಳೆಯ ಶೇಖರಣಾ ಗುಣಮಟ್ಟವನ್ನು ಹೊಂದಿವೆ. ಈ ತಳಿಗೆ ಹಳದಿ ನಂಜು ರೋಗವನ್ನು ತಡೆದುಕೊಳ್ಳುವ ಶಕ್ತಿ ಇದೆ. ಬೆಳೆಯ ಅವಧಿ 120-130 ದಿವಸಗಳು. ಒಂದು ಹೆಕ್ಟೇರಿಗೆ 18 ಟನ್ ಇಳುವರಿ ಪಡೆಯಬಹುದು.
  3. ಅರ್ಕಾ ಅನಾಮಿಕಾ: ಈ ತಳಿಯನ್ನು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಈ ತಳಿಯ ಗಿಡಗಳು ಎತ್ತರವಾಗಿ ಬೆಳೆಯುತ್ತವೆ ಹಾಗೂ ಕವಲು ರೆಂಬೆಗಳನ್ನು ಹೊಂದಿರುತ್ತವೆ. ತರಕಾರಿಯಾಗಿ ಉಪಯೋಗಿಸುವ ಹಂತದಲ್ಲಿ ಕಾಯಿಗಳು ಕಡು ಹಸಿರು ಬಣ್ಣದಿಂದ ಕೂಡಿದ್ದು, ಉದ್ದವಾಗಿ,ಮೃದುವಾಗಿರುತ್ತವೆ. ಕಾಯಿಗಳು ಒಳ್ಳೆಯ ಶೇಖರಣಾ ಹಾಗೂ ಅಡಿಗೆ ಗುಣಗಳನ್ನು ಹೊಂದಿರುತ್ತವೆ. ಈ ತಳಿಗೆ ಹಳದಿ ನಂಜು ರೋಗವನ್ನು ತಡೆದುಕೊಳ್ಳುವ ಶಕ್ತಿ ಇದೆ. ಬೆಳೆಯ ಅವಧಿ 130-135 ದಿವಸಗಳು, ಒಂದು ಹೆಕ್ಟೇರಿಗೆ 20 ಟನ್ ಇಳುವರಿ ಬರುತ್ತದೆ.
  4. ಅರ್ಕಾ ನಿಖಿತಾ: ಇದು ಸಂಕರಣ ತಳಿಯಾಗಿದ್ದು, ಪ್ರತಿ ಹೆಕ್ಟೇರ್ಗೆ 21-24 ಟನ್ ಇಳುವರಿ ಕೊಡುವ ಸಾಮರ್ಥ್ಯ ಹೊಂದಿದೆ. ಬೆಳೆ ಅವಧಿಯು 120-135 ದಿನಗಳು, ಬೇಗ ಹೂವಿಗೆ ಬರುತ್ತದೆ. ನಲವತ್ತೈದನೇ ದಿನದಿಂದ ಕಾಯಿಗಳನ್ನು ಕೀಳಬಹುದಾಗಿದೆ. ಕಾಯಿಗಳು ಕಡುಹಸಿರು ಬಣ್ಣದಾಗಿದ್ದು ಉತ್ತಮ ಗುಣಮಟ್ಟದಾಗಿರುತ್ತದೆ.
  5. ವೈಟ್ ವೆಲ್ವೆಟ್ (ಹಾಲು ಬೆಂಡೆ): ಇದು ಸ್ಥಳೀಯ ತಳಿಯಾಗಿದ್ದು, ರಾಜ್ಯದಲ್ಲಿ ಅತ್ಯಂತ ಜನಪ್ರಿಯತೆ ಪಡೆದುಕೊಂಡಿದೆ.
  6. ಪರ್ಬಾನಿ ಕ್ರಾಂತಿ: ಹಳದಿ ಎಲೆ ನಂಜುರೋಗಕ್ಕೆ ನಿರೋಧಕ ಶಕ್ತಿಯನ್ನು ಹೊಂದಿರುವ ಈ ತಳಿಯು ಹೆಚ್ಚು ಇಳುವರಿಯನ್ನು ಕೊಡುತ್ತದೆ. ಈ ತಳಿಯ ಕಾಯಿಗಳು ದಟ್ಟ ಹಸಿರಾಗಿದ್ದು 10-15 ಸೆಂ.ಮೀ. ಉದ್ದವಿರುತ್ತವೆ. ಇದನ್ನು ಹೆಚ್ಚು ದಿನ ಇಡಬಹುದಾಗಿದ್ದು ಅಡುಗೆಗೆ ತುಂಬಾ ಯೋಗ್ಯವಾಗಿದೆ. ಇಳುವರಿ ಸಾಮರ್ಥ್ಯ ಪ್ರತಿ ಹೆಕ್ಟೇರಿಗೆ 15 ಟನ್ಗಳು ಪಡೆಯಬಹುದು.
    ಬಿತ್ತನೆ
    ಬಿತ್ತನೆ ಮಾಡಲು ಭೂಮಿಯನ್ನು ಸಿದ್ಧಮಾಡಿ 60 `ಅಂತರದಲ್ಲಿ ತಗ್ಗು ಮತ್ತು ದಿನ್ನೆಗಳನ್ನು ಮಾಡಿ ನಂತರ ಪೂರ್ತಿ ಪ್ರಮಾಣದ ಸಾವಯವ ಗೊಬ್ಬರ ಮತ್ತು ಶೇ.50 ರಷ್ಟು ಸಾರಜನಕ ಹಾಗೂ ಪೂರ್ಣ ಸಮಾಣದ ರಂಜಕ ಮತ್ತು ಪೊಟ್ಯಾಷ್ ಅನ್ನು ಮಣ್ಣಿನಲ್ಲಿ ಸೇರಿಸಬೇಕು, ಬೀಜವು ಚೆನ್ನಾಗಿ ಮೊಳಕೆ ಬರಲು ಬಿತ್ತನೆಗೆ ಮುಂಚೆ ಬೀಜವನ್ನು 15 ತಾಸು ನೀರಿನಲ್ಲಿ ನೆನೆಸಬೇಕು. ಬೀಜವನ್ನು 30 ಸೆಂ.ಮೀ. ಅಂತರದಲ್ಲಿ ಬಿತ್ತನೆ ಮಾಡಬೇಕು. ಬಿತ್ತಿದ ನಾಲ್ಕು ವಾರಗಳ ನಂತರ ಉಳಿದ ಶೇ.50 ರಷ್ಟು ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು.

ನೀರಾವರಿ ಮತ್ತು ಅಂತರ ಬೇಸಾಯ
ಭೂಮಿ ಮತ್ತು ವಾತಾವರಣಕ್ಕನುಗುಣವಾಗಿ 5 ರಿಂದ 7 ದಿವಸಗಳಿಗೊಮ್ಮೆ ನೀರನ್ನು ಉಣಿಸಬೇಕು. ಬೆಳೆಯ ಪ್ರದೇಶ ಕಳೆಗಳಿಂದ ಮುಕ್ತವಾಗಿರುವಂತೆ ನೋಡಿಕೊಳ್ಳಬೇಕು.
ಕಳೆ ನಿರ್ವಹಣೆ
ಬಿತ್ತಿದ ದಿವಸ ಅಥವಾ ಮರುದಿವಸ ಹೆಕ್ಟೇರಿಗೆ 30 ಲಿ. ಬೂಟಾಕ್ಲೋರ್ 50 ಇ.ಸಿ. 1000 ಲೀ. ನೀರಿನಲ್ಲಿ ಬೆರೆಸಿ ಮಣ್ಣಿನ ಮೇಲೆ ಸಿಂಪಡಿಸಿದ ಬೀಜದಿಂದ ಹರಡುವ ಕಳೆಗಳನ್ನು ಪರಿಣಾಮಕಾರಿಯಾಗಿ ಹತೋಟಿ ಮಾಡಬಹುದು. ಈರುಳ್ಳಿ, ಮೆಣಸಿನಕಾಯಿ ಅಂತರ ಬೆಳೆ ಪದ್ಧತಿಯಲ್ಲಿ ಬೀಜ ಬಿತ್ತಿದ ಎರಡು ದಿನಗಳೊಳಗಾಗಿ ಪ್ರತಿ ಹೆಕ್ಟೇರಿಗೆ 3.3 ಲೀಟರ್ ಪೆಂಡಿಮಿಥಾಲಿನ್ 30 ಇ.ಸಿ. 1000 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಬಿತ್ತಿದ 40 ದಿನಗಳ ನಂತರ ಕೈಯಿಂದ ಕಳೆ ತೆಗೆಯುವುದರಿಂದ ಕಳೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದು.
ಒಣ ಪ್ರದೇಶಗಳಲ್ಲಿ ಬೇಸಾಯ
ವಾರ್ಷಿಕ ಸರಾಸರಿ 450-650 ಮಿ.ಮೀ ಮಳೆ ಬೀಳುವ ಒ ಪ್ರದೇಶಗಳಲ್ಲಿ ಮುಂಗಾರು ಬೆಂಡಿ ಬೇಸಾಯವನ್ನು ಎರೆ ಭೂಮಿಯಲ್ಲಿ ಲಾಭದಾಯಕವಾಗಿ ಕೈಗೊಳ್ಳಬಹುದು. ಭೂಮಿಯನ್ನು ಹದ ಮಾಡಿ 60 ಸೆಂ.ಮೀ. ಅಂತರದಲ್ಲಿ ಬೋದು(ಕಾಲುವೆಗಳನ್ನು ನಿರ್ಮಿಸಿ ಮಳೆ ಬಿದ್ದ ನಂತರ ದು(ಕಾಲುವುಗಳ ಒಂದು ಬದಿಯಲ್ಲಿ 45 ಸೆಂ.ಮೀ. ಅಂತರದಲ್ಲಿ ಬೀಜಗಳನ್ನು ನಾಟಿ ಮಾಡಬೇಕು. ಬಿತ್ತಿದ 20-30 ದಿವಸಗಳ ನಂತರ ಮಣ್ಣಿಗೆ ದಪ್ಪನೆಯ ಹೊದಿಕೆಯಾಗಿ ಬೆಳೆಗಳ ತ್ಯಾಜ್ಯ ವಸ್ತುಗಳನ್ನು ಹಾಕಬೇಕು. ಅರ್ದತೆ ಸಂರಕ್ಷಣೆಯ ಜೊತೆ (ಬೋದು ಕಾಲುವೆ) ಮಡಿ + ಹೊದಿಕೆ) ಶಿಫಾರಸ್ಸು ಮಾಡಿದ ಪೋಷಕಾಂಶಗಳ ನಿರ್ವಹಣಾ ಕ್ರಮಗಳಿಂದ ಲಾಭದಾಯಕ ಬೆಳೆ ಪಡೆಯಬಹುದಾಗಿದೆ.
ಸಸ್ಯ ಸಂರಕ್ಷಣೆ

ಎಲೆಚುಕ್ಕೆ ರೋಗ: ವೃತ್ತಾಕಾರದ ಮತ್ತು ಉಂಗುರಾಕಾರದ ಚುಕ್ಕೆಗಳು ಕಾಣಿಸುತ್ತವೆ. ಆಮೇಲೆ ಒಂದಕ್ಕೊಂದು ಸೇರಿಕೊಂಡು ಎಲೆಗಳು ಒಣಗುತ್ತವೆ. ಇದರ ನಿರ್ವಹಣೆಗಾಗಿ ಒಂದು ಗ್ರಾಂ ಕಾರ್ಬೆಂಡೈಜಿಮ್ ಪ್ರತಿ ಲಿ, ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 15 ದಿವಸಗಳ ನಂತರ ಇದೇ ಸಿಂಪರಣೆಯನ್ನು ಪುನರಾವರ್ತಿಸಬೇಕು.

ಬೂದಿ ರೋಗ: ಎಲೆಗಳ ಮೇಲೆ ಬಿಳಿ ಶಿಲೀಂಧ್ರ ಬೆಳವಣಿಗೆ ಕಂಡುಬರುತ್ತದೆ. ರೋಗದ ತೀವ್ರತೆ ಹೆಚ್ಚಾದಾಗ ಎಲೆಗಳು ಒಣಗುತ್ತವೆ. ಇದರ ಹತೋಟಿಗಾಗಿ 1 ಮಿ.ಲೀ. ಡೈಪೆನ್ ಕೋನಾಜೋಲ್ ಅನ್ನು ಪ್ರತಿ ಲೀ. ನೀರಿಗೆ ಬೆರೆಸಿ 15 ದಿನಗಳಿಗೊಮ್ಮೆ 3 ಸಲ ಸಿಂಪಡಿಸಬೇಕು,

OLYMPUS DIGITAL CAMERA

3, ಜಿಗಿ ಹುಳು: ಗಿಡಗಳು ಚಿಕ್ಕದಿರುವಾಗ ಜಾಸ್ತಿ ರಸ ಹೀರುವುದರಿಂದ ಎಲೆಗಳು ಅಂಚಿನಿಂದ ಮೇಲಕ್ಕೆ ಮುದುಡುತ್ತವೆ. ಎಲೆಗಳ ಅಂಚು ಕೆಂಪಾಗುತ್ತವೆ, ಇಂತಹ ಎಲೆಗಳು ಕ್ರಮೇಣ ಒಣಗುತ್ತವೆ. ಬಿತ್ತನೆಯಾದ 2 ವಾರಗಳ ನಂತರ ಸಸಿಗಳನ್ನು 1.3 ಮಿ.ಲೀ. ಆಕ್ಸಿಡೆಮಿಟಾನ್ ಮಿಫೈಲ್ 25 ಇ.ಸಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

  1. ಕಾಯಿ ಕೊರಕ ಹುಳು: ಎರಡು ಬಗೆಯ ಕಾಯಿ ಕೊರಕಗಳು ಬೆಳೆಯನ್ನು ಬಾಧಿಸುತ್ತವೆ. ಮೊದಲು ಮರಿಹುಳುಗಳು ಎಳೆದಾದ ರೆಂಬೆಗಳನ್ನು ಕೊರೆದು ತಿನ್ನುವುದರಿಂದ ರೆಂಬೆಗಳು ಒಣಗುತ್ತವೆ. ನಂತರ ಹೂ ಮೊಗ್ಗುಗಳು ಮತ್ತು ಹೊಗಳನ್ನು ತಿನ್ನುವುದರಿಂದ ಕೆಳಗೆ ಬಿದ್ದು ಹಾಳಾಗುತ್ತವೆ. ಕ್ರಮೇಣ ಕಾಯಿಗಳನ್ನು ಕೊರೆದು ಒಳಭಾಗ ಮತ್ತು ಎಳೆದಾದ ಬೀಜಗಳನ್ನು ತಿನ್ನುತ್ತವೆ, ಬಾಧಿತ ಕಾಯಿಗಳು ವಕ್ರವಾಗಿರುತ್ತವೆ. ಇದರ ಹತೋಟಿ ಗಾಗಿ 2 ಮಿ.ಲೀ. ಕ್ವಿನಾಲ್ ಫಾಸ್ 25 ಇ.ಸಿ. ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು.

ಕೊಯ್ದು ಮತ್ತು ಇಳುವರಿ: ಬಿತ್ತಿದ 10 ದಿವಸಗಳ ನಂತರ ಮೊದಲ ಬಾರಿ ಕೊಯ್ದು ಮಾಡಬಹುದು. ಮುಂದೆ 6 ರಿಂದ 8 ವಾರಗಳವರೆಗೆ ಇಳುವರಿ ನಿರೀಕ್ಷಿಸಬಹುದು. ಪ್ರತಿ ಹೆಕ್ಟೇರಿಗೆ 15 ರಿಂದ 20 ಟನ್ ಇಳುವರಿ ಪಡೆಯಬಹುದು.

error: Content is protected !!