ಭಾರತ ಸರ್ಕಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ, ಶಿವಮೊಗ್ಗ ಹಾಗೂ ಸಂಸ್ಕೃತಿ ಕಲಾ ತಂಡ, ಮಾತ್ರಶ್ರೀ ಕಲಾ ತಂಡ, ಶಿವಮೊಗ್ಗ, ಡಾ.ಬಿ.ಆರ್. ಅಂಬೇಡ್ಕರ್ ಜಾನಪದ ಕಲಾ ತಂಡ, ಭದ್ರಾವತಿ ಇವರ ಸಹಯೋಗದೊಂದಿಗೆ ಬೀದಿ ನಾಟಕದ ಮುಖಾಂತರ ಕೋವಿಡ್-19 ಜಾಗೃತಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಶಿವಮೊಗ್ಗ ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಜನಪದ ಗೀತೆಗಳ ಮುಖಾಂತರ ಕರೋನ ಜಾಗೃತಿ ಮೂಡಿಸುವ ಹಾಗೂ ಮಾಸ್ಕ್ ವಿತರಣೆ ಮಾಡುವಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಆದ ಶ್ರೀಮತಿ ಸುನೀತಾ ಅಣ್ಣಪ್ಪ ರವರು ಈ ಕಾರ್ಯ ಕ್ರಮವನ್ನು ಉದ್ಘಾಟಿಸಿದರು.

ರಾಜ್ಯ ರಕ್ಷಣಾ ಸಮಿತಿಯ ಅಧ್ಯಕ್ಷರಾದ ಉಷಾ ಉತ್ತಪ್ಪ, ಖಜಾಂಚಿ ವಿನೋದ್ ಹಾಗೂ ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಉಲ್ಲಾಸ್.ಕೆ.ಟಿ.ಕೆ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಗದೀಶ್, ರಘುನಾಯಕ, ಷಣ್ಮುಖಪ್ಪ ಭಾಗವಹಿಸಿದ್ದರು. ನಂತರ ಸ್ವಚ್ಚ ಭಾರತ ಕಾರ್ಯಕ್ರಮದ ಮೂಲಕ ಸುತ್ತ ಮುತ್ತಲಿನ ಜಾಗವನ್ನು ಸ್ವಚ್ಚಗೊಳಿಸಲಾಯಿತು.

error: Content is protected !!