ಶಿವಮೊಗ್ಗ ಡಿಸೆಂಬರ್ 17 ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಡೇ-ನಲ್ಮ್ ಯೋಜನೆಯಡಿ ಪಿ.ಎಂ. ಸ್ವಾನಿಧಿ ಮಹೋತ್ಸವ ಕಾರ್ಯಕ್ರಮವನ್ನು ಡಾ|| ಬಿ.ಆರ್.ಅಂಬೇಡ್ಕರ್ ಭವನ ಆವರಣದಲ್ಲಿ ಡಿ.19 ರಿಂದ ಡಿ.24 ರವರೆಗೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಬೀದಿ ಬದಿ ವ್ಯಾಪಾರಿಗಳು ಮತ್ತು ಅವರ ಕುಟುಂಬದ ಸದಸ್ಯರುಗಳಿಗೆ ವಿವಿಧ ಸಾಂಸ್ಕøತಿಕ ಸ್ಪರ್ಧೆ ಹಾಗೂ ಕ್ರೀಡಾ ಕೂಟವನ್ನು ಏರ್ಪಸಿದೆ.
ಡಿ.19 ರಂದು ಬೆಳಗ್ಗೆ 9.00 ರಿಂದ ಮಹಿಳೆ ಮತ್ತು ಪುರುಷರಿಗೆ ವಿವಿಧ ಕ್ರೀಡೆಗಳಾದ ಹಗ್ಗಜಗ್ಗಾಟ, ರಂಗೋಲಿ ಸ್ಪರ್ಧೆ, ಸಂಗೀತ ಕುರ್ಚಿ. ಪುರುಷರಿಗೆ ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಫಾಸ್ಟ್ವಾಕ್. ವ್ಯಾಪಾರಸ್ಥರ ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಚಿತ್ರಕಲೆ ಮತ್ತು ಕಪ್ಪೆಜಿಗಿತ ಸ್ಪರ್ಧೆಗಳು. ಪ್ರೌಢಶಾಲೆ ಮಕ್ಕಳಿಗೆ ರಾಷ್ಟ್ರ ನಾಯಕರ ಛದ್ಮವೇಷ ಸ್ಪರ್ಧೆ, 100 ಮೀ ಓಟ. ಪಿಯುಸಿ, ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 100 ಮೀ ಓಟ ಸ್ಪರ್ಧೆಗಳು.
ಡಿ.20 ರಂದು ಬೆಳಗ್ಗೆ 9.00ಕ್ಕೆ ಮಹಿಳೆಯರು ಮತ್ತು ಪುರುಷರು ಹಾಗೂ ಮಕ್ಕಳಿಗೆ ದೇಶಭಕ್ತಿ ಗಾಯನ ಸ್ಪರ್ಧೆ.
ಈ ಕ್ರೀಡೆಗಳಲ್ಲಿ ಭಾಗವಹಿಸಲು ಬೀದಿಬದಿ ಗುರುತಿನ ಚೀಟಿ/ಮಾರಾಟ ಪ್ರಮಾಣ ಪತ್ರ/ ಸಾಲ ಪಡೆದಿರುವ ಬ್ಯಾಂಕ್ ಪಾಸ್ ಪುಸ್ತಕ/ಎಲ್ಓಆರ್ ಪತ್ರ ಮತ್ತು ಮಕ್ಕಳ ಶಾಲಾ ವ್ಯಾಸಂಗ ದೃಢೀಕರಣ ಪತ್ರಗಳನ್ನು ಕಡ್ಡಾಯವಾಗಿ ತರಕ್ಕದ್ದು.
ಬೀದಿಬದಿ ವ್ಯಾಪಾರಿಗಳಿಗೆ ಉಚಿತ ಸ್ಟಾಲ್: ದಿ:24/12/2022 ರಂದು ಬೆಳಗ್ಗೆ 9.00 ರಿಂದ ಸಂ.6.00ರವರೆಗೆ ನಡೆಯುವ ಸಮಾರೋಪ ಸಮಾರಂಭದ ಕಾರ್ಯಕ್ರಮದಲ್ಲಿ ಮೊದಲು ಬಂದ 15 ಬೀದಿಬದಿ ವ್ಯಾಪಾರಿಗಳಿಗೆ ಉಚಿತ ಸ್ಟಾಲ್ ನೀಡಲಾಗುವುದು.