ಮಕ್ಕಳ ಹಕ್ಕುಗಳನ್ನು ಕಸಿದುಕೊಳ್ಳುವ ಹಲವಾರು ಅನಿಷ್ಟ ಪದ್ಧತಿಗಳ ಪೈಕಿ ‘ಬಾಲ್ಯವಿವಾಹ’ವೂ ಒಂದು. ಇದು ಪ್ರಮುಖವಾಗಿ ಹೆಣ್ಣು ಮಕ್ಕಳ ಬದುಕಿಗೆ ಮಾರಕವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು ಬಾಲ್ಯವನ್ನು ಕಸಿದುಕೊಳ್ಳುವ ‘ಬಾಲ್ಯವಿವಾಹ’ ಹಲವಾರು ದಶಕಗಳಿಂದ ವಿಶ್ವದಾದ್ಯಂತ ಕೇಳಿ ಬರುತ್ತಿದೆ. ಬಾಲ್ಯ ವಿವಾಹ ಎಂಬುದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು. ಅಪ್ರಾಪ್ತ ವಯಸ್ಸಿನ ಮಕ್ಕಳು ಇದರಿಂದ ಪರಿತಪಿಸುವಂತಾಗಿದೆ. ಈಗಲೂ ಕೆಲವು ಕಡೆಗಳಲ್ಲಿ ಈ ಪದ್ಧತಿಗಳು ಆಚರಣೆಯಲ್ಲಿ ಇವೆ. ತಮ್ಮ ಭಾರವನ್ನು ಕಳೆದುಕೊಳ್ಳವ ಧಾವಂತದಲ್ಲಿ ಪೋಷಕರು ತಮ್ಮ ಮಕ್ಕಳ ಬದುಕನ್ನೇ ಅಪಾಯದ ಅಂಚಿಗೆ ತಳ್ಳ್ಳುತ್ತಿದ್ದಾರೆ.
“ಅಪ್ರಾಪ್ತ ವಯಸ್ಸಿನ ಮಕ್ಕಳು ಹಸಿ ಮಡಿಕೆ ಇದ್ದ ಹಾಗೆ. ಈ ಹಸಿ ಮಡಿಕೆಗೆ ನೀರು ತುಂಬಿಡುವುದು ಸಾಧ್ಯವಿಲ್ಲವೋ ಹಾಗೆಯೇ ಚಿಕ್ಕ ವಯಸ್ಸಿನಲ್ಲಿ ಮದುವೆ ಮಾಡುವ ನಿಮ್ಮ ಮಕ್ಕಳ ಭವಿಷ್ಯ ಕೂಡ.”
ನಮ್ಮ ದೇಶ ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದಿದ್ದರೂ ಬಾಲ್ಯವಿವಾಹಗಳು ಇಂದಿಗೂ ನಡೆಯುತ್ತಲೇ ಇರುವುದು ಸಾಮಾಜಿಕ ದುರಂತ. ಹೆಣ್ಣು ಮಗುವನ್ನು ತೊಟ್ಟಿಲೊಳಗೆ ಹಾಕುವ ಮೊದಲೇ ಪತಿಯನ್ನು ನಿಶ್ಚಯಿಸಿ 18 ವರ್ಷ ತುಂಬುವ ಮೊದಲೇ ಮದುವೆ ಮಾಡುತ್ತಾರೆ. ಇದರಿಂದ ಹೆಣ್ಣು ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗುವುದಿಲ್ಲ.
ಜಿಲ್ಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ರಕ್ಷಣಾ ಇಲಾಖೆಯ ಸಹಕಾರದೊಂದಿಗೆ 2017ರ ಅಕ್ಟೋಬರ್ ನಿಂದ 2018ರ ಏಪ್ರಿಲ್ ಮಾಹೆಯವರೆಗೆ ಸುಮಾರು ‘36’ ಬಾಲ್ಯವಿವಾಹ ಪ್ರಕರಣಗಳನ್ನು ತಡೆಹಿಡಿಯಲಾಗಿದೆ. ಜನವರಿ ಮತ್ತು ಡಿಸೆಂಬರ್ 2019ರಲ್ಲಿ ಒಟ್ಟು ‘69’ ಬಾಲ್ಯ ವಿವಾಹ ಪ್ರಕರಣಗಳನ್ನು ತಡೆಹಿಡಿಯಲಾಗಿದೆ. ಆ ಪೈಕಿ 24ಪ್ರಕರಣಗಳಲ್ಲಿ ಎಫ್.ಐ.ಆರ್ ದಾಖಲಾಗಿವೆ ಅಲ್ಲದೆ ಬಾಲ್ಯವಿವಾಹ ನಡೆಯದಂತೆ 45 ಪ್ರಕರಣಗಳನ್ನು ನಿಯಂತ್ರಿಸಲಾಗಿದೆ.
ಬಾಲ್ಯವಿವಾಹ ಪ್ರಕರಣಗಳಿಗೆ ಸಂಬಂಧಿಸಿದಂತೆ 18 ವರ್ಷದೊಳಗೆ ನಡೆಯುವ ವಿವಾಹ ಸ್ಧಳಗಳಿಗೆ ಭೇಟಿ ನೀಡಿ ವಧು-ವರರ ವಯಸ್ಸಿನ ಬಗ್ಗೆ ಶಾಲಾ ದಾಖಲೆಯನ್ನು ಪರಿಶೀಲಿಸಿ ವಿವಾಹಕ್ಕೆ ಅರ್ಹ ವಯಸ್ಸು ಆಗದಿದ್ದಲ್ಲಿ ಅವರಿಂದ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು ಮಕ್ಕಳ ಸಮಿತಿಗೆ ಹಾಜರಾಗುವಂತೆ ನಿರ್ದೇಶಿಸಲಾಗುತ್ತದೆ.
ಬಾಲ್ಯವಿವಾಹ ಪ್ರಾಚೀನ ಕಾಲದಿಂದ ನಡೆದು ಬಂದ ಒಂದು ಅನಿಷ್ಟ ಪದ್ಧತಿ ಹಾಗೂ ಸಾಮಾಜಿಕ ಪಿಡುಗು ಎಂದು ಗುರುತಿಸಿದ್ದು, ಅದರ ನಿಯಂತ್ರಣಕ್ಕಾಗಿ ಜಾರಿಗೆ ತಂದ ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಪ್ರಕಾರ 18 ವರ್ಷದೊಳಗಿನ ಹೆಣ್ಣು ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳ ಮದುವೆ ಶಿಕ್ಷಾರ್ಹ ಅಪರಾಧವಾಗಿದೆ.
ಬಾಲ್ಯವಿವಾಹವನ್ನು ಸರ್ಕಾರ ನಿಷೇಧಿಸಲು ಹಲವಾರು ಕಾರಣಗಳಿವೆ. ಸಾಮಾಜಿಕವಾಗಿ ಅಪ್ರಾಪ್ತ ಹೆಣ್ಣಿನ ಬದುಕು ಕಸಿದುಕೊಳ್ಳವುದು ಅಲ್ಲದೇ ವಿಕಲಚೇತನ ಮಕ್ಕಳ ಜನನ, ಮಾನಸಿಕ ದೌರ್ಬಲ್ಯ, ಶಿಶು ಮರಣ, ಖಿನ್ನತೆ, ಲೈಂಗಿಕ ದೌರ್ಜನ್ಯ ಮತ್ತು ಅನÀಕ್ಷರತೆ ಹಾಗೂ ಎಳೆ ವಯಸ್ಸಿನಲ್ಲೇ ವಿದುವೆ ಇಷ್ಟೆಲ್ಲಾ ಸಮಸ್ಯೆಗಳು ಈ ಒಂದು ವಿವಾಹದಿಂದ ನಡೆಯುತ್ತದೆ.
ಬಾಲ್ಯವಿವಾಹ ಮಾಡಿಕೊಳ್ಳುವ ವಯಸ್ಕ ಪುರುಷನ ವಿರುದ್ಧ ಮತ್ತು ಬಾಲ್ಯವಿವಾಹವನ್ನು ನಡೆಸುವ, ನಿರ್ದೇಶಿಸುವ ಹಾಗೂ ಪ್ರೇರೇಪಿಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆ, ಮಗುವು ಬಾಲ್ಯ ವಿವಾಹಕ್ಕೆ ಒಳಪಟ್ಟರೆ ಮಗುವಿನ ಹೊಣೆ ಹೊತ್ತಿರುವ ಪೋಷಕರು ಮತ್ತು ಬಾಲ್ಯವಿವಾಹದಲ್ಲಿ ಹಾಜರಿದ್ದವರು ಅಥವಾ ತಡೆಯಲು ನಿರ್ಲಕ್ಷ್ಯ ತೋರಿದವರು ಎಲ್ಲರೂ ತಪ್ಪಿತಸ್ಥರಾಗಿರುತ್ತಾರೆ. ಹೀಗೆ ಪ್ರತಿಯೊಬ್ಬರಿಗೂ ಈ ರೀತಿಯ ಅಪರಾಧದಲ್ಲಿ ತೊಡಗಿದ್ದರೆ 2ವರ್ಷ ಜೈಲು ಮತ್ತು 1ಲಕ್ಷ ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಬಾಲ್ಯವಿವಾಹ ತಡೆಗೆ ಶಿಕ್ಷಣವೇ ಮದ್ದು. ಗ್ರಾಮೀಣ ಭಾಗದಲ್ಲಿ ಶಿಕ್ಷಿತರ ಪ್ರಮಾಣ ಹೆಚ್ಚಳವಾದರೆ ಈ ರೀತಿಯ ಆಚರಣೆಗಳನ್ನು ತಡೆಹಿಡಿಯುವುದಕ್ಕೆ ಸಾಧ್ಯವಾಗಲಿದೆ. ಶಾಲಾ ಮತ್ತು ಕಾಲೇಜುಗಳಲ್ಲಿ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸುಧಾರಣೆ ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ಶಿಕ್ಷಣ ಪಡೆದುಕೊಳ್ಳುವುದರ ಮೂಲಕ ಜಾಗೃತರಾಗಬೇಕು. ಎಚ್ಚೆತ್ತುಕೊಳ್ಳಬೇಕು.
ಬಾಲ್ಯವಿವಾಹವು ಒಂದು ಅಪರಾಧ ಎಂಬ ಅಂಶಗಳ ಬಗ್ಗೆ ಜನತೆಗೆ ಜಾಗೃತಿ ಮೂಡಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಬಾಲ್ಯ ವಿವಾಹ ತಡೆಯುವ ಉದ್ದೇಶದಿಂದ ಮಕ್ಕಳಿಗೆ ಕಾನೂನು ಅರಿವು, ವಿಚಾರ ಸಂಕಿರಣ ಮತ್ತು ಮಕ್ಕಳ ಹಕ್ಕುಗಳ ಕಾರ್ಯಗಾರ ಈ ರೀತಿಯ ಕೆಲವು ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಮಕ್ಕಳ ರಕ್ಷಣೆಯನ್ನು ಮಾಡುತ್ತಿದೆ.
ಬಾಲ್ಯವಿವಾಹ, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ, ಮಹಿಳೆಯರ ಮೇಲಾಗುವ ಲೈಂಗಿಕ ಹಾಗೂ ಕೌಟುಂಬಿಕ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ 1098 ಸಂಖ್ಯೆಗೆ ಕರೆ ಮಾಡಿ ದೂರನ್ನು ನೀಡಬಹುದಾಗಿದೆ. ಹೆಣ್ಣು ಮಕ್ಕಳ ಸುರಕ್ಷತೆಗಾಗಿಯೇ ಸರ್ಕಾರ ಹಲವು ಕಾನೂನುಗಳನ್ನು ಜಾರಿಗೆ ತಂದಿದೆ.

ಇಂದಿನ ಮಕ್ಕಳೆ ನಾಳಿನ ಪ್ರಜೆಗಳು, ಆದ್ದÀರಿಂದ ಸರ್ಕಾರವು ಮಗುವಿನ ಪಾಲನೆ, ಪೋಷಣೆ ಹಾಗೂ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಪ್ರತಿ ಮಗುವಿಗೆ ತನ್ನ ಸ್ವತಂತ್ರ್ಯಕ್ಕೆ ಹಾಗೂ ಘನತೆಗೆ ಧಕ್ಕೆ ಬಾರದ ಹಾಗೆ ಸಾಮಾನ್ಯ ಪರಿಸರದಲ್ಲಿ ಮಾನಸಿಕ ಹಾಗೂ ದೈಹಿಕ ಬೆಳವಣೆಗೆಗೆ ಕುಂದುಬಾರದ ಹಾಗೆ ಬೆಳೆಯುವ ಹಕ್ಕಿದೆ. ಬಾಲಕಾರ್ಮಿಕತೆ, ಬಾಲ್ಯವಿವಾಹ, ಭಿಕ್ಷಾಟನೆ, ಲೈಂಗಿಕ ದೌರ್ಜನ್ಯ, ಸಾಗಾಣಿಕೆ, ಮಾರಾಟದಂತಹ ಪ್ರಕರಣಗಳಿಗೆ ಸಿಲುಕಿ ಮಕ್ಕಳು ಬಾಲ್ಯದಲ್ಲಿ ತಮ್ಮ ಹಕ್ಕನ್ನು ಅನುಭವಿಸಲಾಗದಂತಹ ಸನ್ನಿವೇಶ ಏರ್ಪಟ್ಟಿದೆ. ಮಕ್ಕಳ ಹಕ್ಕುಗಳಿಗೆ ಚ್ಯುತಿಯಾಗದ ಹಾಗೆ ಸರ್ವತೋಮುಖ ಬೆಳವಣಿಗೆಗೆ ಭದ್ರ ಬುನಾದಿ ಒದಗಿಸಲು ನಮ್ಮ ಜಿಲ್ಲಾ ಮಕ್ಕಳ ರಕ್ಷಣಾ ಫಟಕ ಕಾರ್ಯನಿರ್ವಹಿಸುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಜಿ.ಜಿ. ಸುರೇಶ್ ರವರ ಅಭಿಮತವಾಗಿದೆ.

error: Content is protected !!