ಶಿವಮೊಗ್ಗದಲ್ಲಿ ಶಿವಮೊಗ್ಗ ತಾಲ್ಲೂಕು ವ್ಯಾಪ್ತಿಯ #ಬಗರ್_ಹುಕ್ಕುಂ ಸಮಿತಿ ಸಭೆಯನ್ನು ಶಾಸಕರಾದ  ಕೆ.ಬಿ.ಅಶೋಕ ನಾಯ್ಕ ರವರ ಅಧ್ಯಕ್ಷತೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ನಡೆಸಿ 14 ಜನ ಬಗರ್ ಹುಕ್ಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿ ವಿತರಿಸಿದರು.

ಸಾಗುವಳಿ ಚೀಟಿ ವಿತರಿಸದ ಶಾಸಕರು ಮುಂದಿನ ದಿನಗಳಲ್ಲಿ ಮತ್ತಷ್ಟು ಬಗರ್ ಹುಕ್ಕುಂ ಸಾಗುವಳಿದಾರರಿಗೆ ಸಾಗುವಳಿ ಚೀಟಿಯನ್ನು ವಿತರಸಲಾಗುವುದು.ಇದರ ಸಲುವಾಗಿ ಅರಣ್ಯ ಮತ್ತು ಕಂದಾಯ ಇಲಾಖೆ ದಿನ ನಿತ್ಯ ತಮ್ಮ ಕರ್ತವ್ಯದಲ್ಲಿ ತೋಡಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ತಹಶಿಲ್ದಾರ್ ನಾಗರಾಜ್ ರವರು, ಸಮಿತಿ ಸದಸ್ಯರುಗಳಾದ ಸುಧಾಕರ್, ಮತ್ತು ಗಣೇಶ್ ರವರುಗಳು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಜರಿದ್ದರು…

error: Content is protected !!