
ಶಿವಮೊಗ್ಗ, ಜ ೩೬ನಗರದ ತೋಟಗಾರಿಕೆ ಇಲಾಖೆ ಹಾಗೂ ಅಂಬೇಡ್ಕರ್ ಭವನದ ಆವರಣದಲ್ಲಿ ಇಂದಿನಿಂದ ಜ.೩೯ ರವರೆಗೆ ಆಯೋಜಿಸಲಾಗಿರುವ ಫಲ-ಪುಷ್ಪ ಪ್ರದರ್ಶನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಕೆ.ಸಿ.ನಾರಾಯಣಗೌಡ ಚಾಲನೆ ನೀಡಿದರು.
ರೈತರು ಬೆಳೆದ ವಿವಿಧ ಹಣ್ಣು, ಹೂವು ತರಕಾರಿಗಳು, ಸಸ್ಯಗಳ ಮಳಿಗೆಗಳಿಗೆ ಹಾಗೂ ಕೃಷಿ, ತೋಟಗಾರಿಕೆ, ಮೃಗಾಲಯ ಇತರೆ ಇಲಾಖೆಗಳ ಪ್ರಾತ್ಯಕ್ಷಿಕೆ ಕೇಂದ್ರಗಳಿಗೆ ತೆರಳಿ, ವೀಕ್ಷಿಸಿ ಮಾಹಿತಿ ಪಡೆದರು.
ಗಂಧದ ಗುಡಿ, ವಿಮಾನ ನಿಲ್ದಾಣ, ಮಕ್ಕಳ ಹೂವಿನ ಗೊಂಬೆಗಳನ್ನು ವೀಕ್ಷಿಸಿ, ಕಲಾಕೃತಿಗಳನ್ನು ಕುರಿತು ಶ್ಲಾಘನೆ ವ್ಯಕ್ತಪಡಿಸಿ, ಛಾಯಾಚಿತ್ರ ತೆಗೆಸಿಕೊಂಡರು.
ಅಧಿಕಾರಿಗಳೊಂದಿಗೆ ಫಲ ಪುಷ್ಪ ಪ್ರದರ್ಶನದ ಪ್ರತಿ ಮಳಿಗೆಗಳಿಗೆ ತೆರಳಿ, ವೀಕ್ಷಿಸಿ ಮಾಹಿತಿ ಪಡೆದುಕೊಂಡರು.
ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್ ಜಿ.ಪಂ ಸಿಇಒ ಪ್ರಕಾಶ್ , ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಕಾಶ್ ಇತರೆ ಅಧಿಕಾರಿಗಳು ಇದ್ದರು.