ಶಿವಮೊಗ್ಗ, ಮಾ.5 : ಅಸಂಘಟಿತ ಕಾರ್ಮಿಕರ ಪಿಂಚಣಿ ಯೋಜನೆ ಪ್ರಧಾನಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆ (ಪಿಎಂ-ಎಸ್‍ವೈಎಂ) ಗೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಮಂಗಳವಾರ ಚಾಲನೆ ನೀಡಿದರು.
ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಮಂಗಳವಾರ ಪಿ.ಎಮ್-ಎಸ್.ವೈ.ಎಂ ಯೋಜನೆಯ ಕುರಿತು ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಯೋಜನೆಯಡಿ ಅಸಂಘಟಿತ ವಲಯದ ಕಾರ್ಮಿಕರು ಖಾತೆಯನ್ನು ತೆರೆದು ಪ್ರತಿ ತಿಂಗಳು ತಮ್ಮ ವಯಸ್ಸಿನ ಆಧಾರದ ಮೇಲೆ 55ರಿಂದ 200 ರೂಗಳ ವರೆಗೆ ಜಮಾ ಮಾಡಬೇಕಾಗುತ್ತದೆ. ಈ ರೀತಿ ಜಮಾ ಮಾಡಿದ ಹಣವು 60 ವರ್ಷ ವಯಸ್ಸಿನ ನಂತರ ಪ್ರತಿ ತಿಂಗಳು 3ಸಾವಿರ ರೂ.ಗಳನ್ನು ಕೇಂದ್ರ ಸರ್ಕಾರ ಪಿಂಚಣಿಯ ರೂಪದಲ್ಲಿ ನೀಡುª ಯೋಜನೆ ಇದಾಗಿದೆ ಎಂದರು.
ರಿಕ್ಷಾ ಎಳೆಯುವವರು, ಬೀದಿ ವ್ಯಾಪಾರಿಗಳು, ಅಡುಗೆ ಕೆಲಸದವರು, ಕೂಲಿಗಳು, ಇಟ್ಟಿಗೆ ಗೂಡು ಕೆಲಸ ಮಾಡುವವರು, ಕೃಷಿ ಕಾರ್ಮಿಕರು, ಮನೆ ಕೆಲಸದವರು ಸೇರಿದಂತೆ ಎಲ್ಲಾ ಅಸಂಘಟಿತ ವಲಯದ ಕಾರ್ಮಿಕರು ಈ ಯೋಜನೆ ವ್ಯಾಪ್ತಿಗೆ ಬರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯೋಜನೆಯಡಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ವಿಧಾನ ಪರಿಷತ್ ಸದಸ್ಯ ರುದ್ರೇಗೌಡ್ರು ಮಾತನಾಡಿ ಪಿ.ಎಮ್-ಎಸ್.ವೈ.ಎಂ ಯೋಜನೆಯು ದೇಶದಲ್ಲಿರುವ ಕೋಟ್ಯಾಂತರ ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಯೋಜನೆಯಿಂದ ಲಾಭವಾಗಲಿದ್ದು, ಇದರ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಪಿಎಂ-ಎಸ್‍ವೈಎಂ ಯೋಜನೆ: ದೇಶದ ಅಸಂಘಟಿತ ಕಾರ್ಮಿಕರಾದ ಬೀಡಿ ಸುತ್ತುವ ಕೆಲಸ ಮಾಡುವವರು, ಕೈಮಗ್ಗ ಕಾರ್ಮಿಕರು, ಮರಗೆಲಸ, ಪೈಂಟಿಂಗ್, ಬೆಳಕು ಮತ್ತು ದ್ವನಿವರ್ಧಕ ಕೆಲಸಗಾರರು ಸೇರಿದಂತೆ ಇಂತಹ ವಲಯಗಳಲ್ಲಿ ಕೆಲಸ ಮಾಡುತ್ತಿರುವ ತಿಂಗಳಿಗೆ 15ಸಾವಿರ ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವ ಕಾರ್ಮಿಕರು ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿರುತ್ತಾರೆ. ಅವರು ತಮ್ಮ ಬ್ಯಾಂಕ್ ಖಾತೆ ಅಥವಾ ಜನ್‍ಧನ್ ಖಾತೆಯ ಆಧಾರದಲ್ಲಿ ಈ ಯೋಜನೆಯಡಿ ಹೆಸರು ನೊಂದಾಯಿಸಬೇಕು. ಬಳಿಕ 18-40ವರ್ಷ ವಯಸ್ಸಿನವರೆಗೆ ತಮ್ಮ ವಯೋಮಾನದ ಆಧಾರದ ಮೇಲೆ ಪ್ರತಿ ತಿಂಗಳು ರೂ. 55ರಿಂದ 200ರ ವರೆಗೆ ಹಣ ಜಮಾ ಮಾಡಬೇಕಾಗುತ್ತದೆ. ಈ ಹಣಕ್ಕೆ ಕೇಂದ್ರ ಸರ್ಕಾರ ಸಹ ಸವi ಪ್ರಮಾಣದ ಹಣವನ್ನು ಪ್ರತಿ ತಿಂಗಳು ಖಾತೆಗೆ ಜಮಾ ಮಾಡುತ್ತದೆ. ಅಸಂಘಟಿತ ಕಾರ್ಮಿಕನಿಗೆ 60ವರ್ಷ ವಯಸ್ಸಾದ ನಂತರ ಪ್ರತಿ ತಿಂಗಳು 3000 ಹಣವನ್ನು ಪಿಂಚಣಿಯಾಗಿ ನೀಡಲಾಗುತ್ತದೆ.
ಜಿಲ್ಲಾ ಕಾರ್ಮಿಕ ಅಧಿಕಾರಿ ವಿಶ್ವನಾಥ, ಪಿಎಫ್ ಇಲಾಖೆ ಲೆಕ್ಕಾಧಿಕಾರಿ ಅಸ್ಲಮ್ ಮತ್ತಿತರರು ಉಪಸ್ಥಿತಿದ್ದರು.

error: Content is protected !!