ಶಿವಮೊಗ್ಗ. ಜೂನ್.18 : ಕೇಂದ್ರ ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವ ಕಿಸಾನ್ ಸಮ್ಮಾನ್ ಯೋಜನೆ ರಾಜ್ಯದಲ್ಲಿ ಜಾರಿಗೊಳಿಸಲಾಗಿದ್ದು, ಈ ಯೋಜನೆಯ ಸೌಲಭ್ಯ ಪಡೆಯಲು ನೋಂದಾವಣಿ ಮಾಡಿಸಿಕೊಳ್ಳವಂತೆ ತಿಳಿಸಲಾಗಿದೆ.
ರೈತರು ಗ್ರಾಮ ಪಂಚಾಯ್ತಿ, ಗ್ರಾಹಕರ ಸೇವಾಕೇಂದ್ರ, ಬಾಪೂಜಿ ಸೇವಾ ಕೇಂದ್ರಗಳು, ಅಟಲ್ ಜಿ ಜನಸ್ನೇಹಿ ಕೇಂದ್ರ, ರೈತ ಸಂಪರ್ಕ ಕೇಂದ್ರ ಅಥವಾ ತೋಟಗಾರಿಕೆ ಇಲಾಖೆಯಲ್ಲಿ ನಿಗಧಿತ ನಮೂನೆಯ ಅರ್ಜಿಯಲ್ಲಿ ಜಮೀನಿನ ಖಾತೆ, ಸರ್ವೆ ನಂ, ಆಧಾರ್ ಸಂಖ್ಯೆ, ಬ್ಯಾಂಕ್ ವಿವರ ಹಾಗೂ ಇನ್ನಿತರೆ ಮಾಹಿತಿಯನ್ನು ಭರ್ತಿಮಾಡಿ ನೀಡಲು ಸೂಚಿಸಲಾಗಿದೆ. ಜೂನ್ 30 ರೊಳಗಾಗಿ ಅರ್ಜಿ ಸಲ್ಲಿಸಿದ ರೈತರು ಶೀಘ್ರವಾಗಿ ಸೌಲಭ್ಯ ಪಡೆಯಬಹುದಾಗಿದೆ. ಯೋಜನೆಯು ವರ್ಷಕ್ಕೆ 6000 ರೂಗಳನ್ನು ರೈತರಿಗೆ ಮೂರು ಕಂತುಗಳಲ್ಲಿ ನೀಡುವುದಾಗಿದೆ.

error: Content is protected !!