ಬೆಂಗಳೂರು, ಜನವರಿ ೦೬

ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾಗೂ ಜೀವರಕ್ಷಣೆಯ ಜವಾಬ್ದಾರಿ ಹೊತ್ತಿರುವ, ಪೊಲೀಸ್ ಇಲಾಖೆ, ಮತ್ತಷ್ಟು ಜನಸ್ನೇಹಿ ಯಾಗಿ, ಹೊರ ಹೊಮ್ಮಬೇಕಾಗಿದೆ, ಎಂದು ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು, ಹೇಳಿದ್ದಾರೆ.

ಸಚಿವರು, ಇಲಾಖೆಯ ಹಿರಿಯ ಅಧಿಕಾರಿಗಳನ್ನುದ್ದೇಶಿಸಿl ಮಾತನಾಡುತ್ತಾ COVID ಮಹಾಮಾರಿ ಸೋಂಕು, ಅನಾವೃಷ್ಟಿ ಯಂಥ ಸಮಸ್ಯೆಗಳ ನಡುವೆ ೨೦೨೧ ನೆಯ ವರ್ಷ ಕಳೆದು ೨೦೨೨ ಕ್ಕೆ ಮುನ್ನಡೆ ಯುತ್ತಿದ್ದೇವೆ, ಹೊಸ ಹೊಸ ಸವಾಲುಗಳನ್ನೂ ಎದುರಿಸಲು ಸಜ್ಜಾಗಬೇಕು, ಎಂದು ಸಚಿವರು, ಹೇಳಿದರು.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವನ್ನು ಯಶಸ್ವಿಯಾಗಿ ನಡೆಸಲು ಪೊಲೀಸ್ ಸಿಬ್ಬಂದಿ ಶ್ರಮಿಸಿದ್ದಾರೆ. ಕನ್ನಡ ಚಲನಚಿತ್ರ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ಸಮಯದಲ್ಲಿ ಅಚ್ಚುಕಟ್ಟಾದ ಬಂದೋಬಸ್ತ್ ವ್ಯವಸ್ಥೆ ನಡೆಸಿದ್ದಾರೆ, ಎಂದೂ ಸಚಿವರು, ಪ್ರಶಂಸಿಸಿದರು.
ಇದಕ್ಕೂ ಮೊದಲು, ಇಲಾಖೆಯ ಹಿರಿಯ ಅಧಿಕಾರಿ ಗಳು, ಸಚಿವರೊಂದಿಗೆ ನೂತನ ವರ್ಷದ ಶುಭಾಶಯ ಗಳನ್ನು ಹಂಚಿಕೊಂಡರು.

ರಾಜ್ಯ ಪೊಲೀಸ್ ಮುಖ್ಯಸ್ಥ ಶ್ರೀ ಪ್ರವೀಣ್ ಕುಮಾರ್ ಸೂದ್, ಬೆಂಗಳೂರು ನಗರ ಆಯುಕ್ತ ಶ್ರೀ ಕಮಲ್ ಪಂತ್, ಅಮರ್ ಕುಮಾರ್ ಪಾಂಡೆ , ಅಲೋಕ್ ಮೋಹನ್, Dr ರವೀಂದ್ರ ನಾಥ್ ಹಾಗೂ ಇಲಾಖೆಯ ಇತರ ಅಧಿಕಾರಿಗಳೂ ಹಾಜರಿದ್ದರು.

error: Content is protected !!