6ಇಂಚು ದಪ್ಪ, 6ಅಡಿ ಎತ್ತರದ ಸಿಮೆಂಟ್ ಅಥವಾ ಮಣ್ಣಿನ ಪ್ಲಾಸ್ಟಿಕ್‍ನ್ನು ಒಂದೂವರೆ ಅಡಿ ಆಳದಲ್ಲಿ ನೆಡಬೇಕು. ಪೈಪ್ ಒಳಗೆ ಕಸ ಹಾಕುವ ಕೆಲಸ 1ಕೆ.ಜಿ.ಬೆಲ್ಲ ಮತ್ತು ಸಗಣಿ ನೀರನ್ನು ಕದಡಿ ಹಾಕಬೇಕು. ಇದರಿಂದಾಗಿ ಜೈವಿಕ ಹುಳುಗಳು ಉತ್ಪತ್ತಿಯಾಗುತ್ತವೆ. ನಂತರ ಮನೆಯಲ್ಲಿ ನಿತ್ಯ ಉತ್ಪತ್ತಿಯಾಗುವ ಬೇಡವಾದ ಜೈವಿಕ ಕಸವನ್ನು ಹಾಕಬೇಕು. ಭೂಮಿಯಲ್ಲಿ ಕರಗದ ಯಾವುದೇ ವಸ್ತುಗಳನ್ನು ಪೈಪ್‍ನೊಳಗೆ ಹಾಕಬಾರದು. ವಾರಕ್ಕೊಮ್ಮೆ ಅರ್ಧ ಮಗ್ ನೀರು ಮತ್ತು ಒಂದು ಹಿಡಿ ಮಣ್ಣನ್ನು ಒಳಗೆ ಹಾಕಬೇಕು. ಪೈಪ್ ಮೇಲ್ಭಾಗವನ್ನು ಮರದತುಂಡ ಅಥವಾ ಹಂಚಿನಿಂದ ಮುಚ್ಚಬೇಕು.
ಪೈಪ್ ಕಾಂಪೋಸ್ಟ್ ಉಪಯೋಗ : ತ್ಯಾಜ್ಯವನ್ನು ಮೂಲದಲ್ಲಿಯೇ ನಿರ್ವಹಿಸಬೇಕು. ಕಡಿಮೆ ಜಾಗ, ಕಡಿಮೆ ಖರ್ಚು, ಸರಳ ರೀತಿಯಲ್ಲಿ ಕಸನಿರ್ವಹಣೆ ಸಾಧ್ಯ. ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಬಳಸಬಹುದಾಗಿದೆ. ಇದರಿಂದಾಗಿ ಸಹಜವಾಗಿ ಆರೋಗ್ಯಪೂರ್ಣ ಪರಿಸರ ನಿರ್ಮಾಣ ಸಾಧ್ಯವಾಗಲಿದೆ ಅಲ್ಲದೇ ಮಾಲಿನ್ಯ ನಿಯಂತ್ರಣ ಸಾಧ್ಯವಾಗಲಿದೆ. ಅತ್ಯಂತ ಸರಳ ಮತ್ತು ಕಡಿಮೆ ವೆಚ್ಚದ ಯೋಜನೆ ಇದಾಗಿದ್ದು, ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಕಸ ವಿಲೇವಾರಿ ಸಮಸ್ಯೆಯನ್ನು ಬಹುತೇಕವಾಗಿ ಪರಿಹರಿಸಬಹುದಾಗಿದೆ. ಅಲ್ಲದೇ ಉತ್ತಮ ಗುಣಮಟ್ಟದ ಸುವಾಸಿತ ಸಾವಯವ ಗೊಬ್ಬರವನ್ನು ಪಡೆದು ಕೈತೋಟಗಳಿಗೆ ಬಳಸಬಹುದಾಗಿದೆ.

  • ಮಾಹಿತಿಗಾಗಿ : ಟಿ.ಎಸ್.ಮಹದೇವಸ್ವಾಮಿ, ಪರಿಸರಪ್ರೇಮಿಗಳು, ಶಿವಮೊಗ್ಗ. ಮೊ.9448844380
error: Content is protected !!