ಮಳೆಕಾಡು ಸಮೃದ್ಧ ಪ್ರಕೃತಿ ಕೆರೆ ನದಿ ಸರೋವರ ಎಲ್ಲವನ್ನೂ ತನ್ನ ಅಂತರಾಳದಲ್ಲಿ ಇಟ್ಟುಕೊಂಡಿರುವ ಪ್ರಕೃತಿಯ ತಾಣ ಪಶ್ಚಿಮಘಟ್ಟದ ಶ್ರೇಣಿ. ದೇಶದ ಹವಾಮಾನವನ್ನು ನಿಯಂತ್ರಿಸುವ ಪಶ್ಚಿಮಘಟ್ಟದ ಜೀವವೈವಿಧ್ಯತೆ ಬಗ್ಗೆ ನಿರಂತರವಾಗಿ ಅಧ್ಯಯನ ನಡೆಯುತ್ತಿದೆ. ಆದರೆ ಅದರ ಬಗ್ಗೆ ಪರಿಪೂರ್ಣವಾದ ಜ್ಞಾನ ಜನತೆಗೆ ತಲುಪುತ್ತಿಲ್ಲ.
ಭಾರತ ಸರ್ಕಾರ ಕರ್ನಾಟಕದ ಏಳು ಜಿಲ್ಲೆಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಅಳವಡಿಸಿದೆ. ಅದರಲ್ಲಿ ಶಿವಮೊಗ್ಗ ನಗರವೂ ಒಂದು. ತುಂಗಾ ನದಿ ತಟದಲ್ಲಿರುವ ಇಡೀ ಶಿವಮೊಗ್ಗವನ್ನು ಐತಿಹಾಸಿಕವಾಗಿ, ಸಾಂಸ್ಕøತಿಕವಾಗಿ ದೇಶಕ್ಕೆ ಪರಿಚಯಿಸುವ ಯೋಜನೆಗಳನ್ನು ರೂಪಿಸಲಾಗಿದ್ದು ಕೇಂದ್ರದ 500 ಕೋಟಿ ಅನುದಾನದಲ್ಲಿ ರಾಜ್ಯದ ಪಾಲೂ ಸೇರಿದಂತೆ 1000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.


ಈ ಯೋಜನೆಯ ಅಡಿಯಲ್ಲಿ ಶಿವಮೊಗ್ಗದಲ್ಲಿ ತಲೆ ಎತ್ತಲಿದೆ ಪಶ್ಚಿಮಘಟ್ಟದ ಮೊದಲ ಜ್ಞಾನಕಣಜ ‘ವೈಲ್ಡ್ ಲೈಫ್ ಇಂಟರ್‍ಪ್ರಿಟೇಷನ್ ಸೆಂಟರ್’ ಹಾಗೂ ‘ಸೈನ್ಸ್ ಪಾರ್ಕ್’ ನಿರ್ಮಾಣವಾಗಲಿರುವ ಯೋಜನೆಯೂ ಒಂದಾಗಿದೆ. ಶಿವಮೊಗ್ಗದ ಹೃದಯಭಾಗದಲ್ಲಿರುವ ಮಹಾತ್ಮಾಗಾಂಧಿ ಉದ್ಯಾನವನದಲ್ಲಿ ಎರಡು ಎಕರೆ ಜಾಗವನ್ನು ಈ ಯೋಜನೆಗಾಗಿ ಗುರುತಿಸಲಾಗಿದೆ. ಮಾಹಿತಿ ಕೇಂದ್ರಕ್ಕೆ ಈಗಾಗಲೇ ಕೇಂದ್ರ ಸರ್ಕಾರದ ಪರಿಸರ ಶಿಕ್ಷಣ ಕೇಂದ್ರದ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು ಯೋಜನಾ ವರದಿ ತಯಾರಾಗುತ್ತಿದೆ. ಪಶ್ಚಿಮಘಟ್ಟದ ಜ್ಞಾನಕಣಜಕ್ಕೆ ಕೇಂದ್ರ ಹಸಿರು ನಿಶಾನೆ ತೋರಿದೆ.
ಮಾಹಿತಿ ಕೇಂದ್ರವು ಐದು ಸಾವಿರ ಚದರ ಅಡಿಯಲ್ಲಿ ನಿರ್ಮಾಣವಾಗುತ್ತದೆ. ಪಶ್ಚಿಮಘಟ್ಟದ 1,600 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಜೀವವೈವಿಧ್ಯತೆ ಮಾಹಿತಿ ಇಲ್ಲಿ ಲಭ್ಯವಿರುತ್ತದೆ.ಇಲ್ಲಿ ಉತ್ತರದ ಗುಜರಾತ್ ಸೇರಿ ದಕ್ಷಿಣ ಭಾರತದ ಕೇರಳ, ತಮಿಳುನಾಡು, ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಹರಡಿರುವ ಪಶ್ಚಿಮಘಟ್ಟದ ಪ್ರದೇಶದ ಪ್ರತಿಯೊಂದು ಮಾಹಿತಿ ಇಲ್ಲಿ ಲಭ್ಯವಿರುತ್ತದೆ. ಯುವಜನರಿಗಾಗಿಯೇ ಈ ಕೇಂದ್ರ ಆರಂಭಗೊಳ್ಳುತ್ತಿದೆ. ಇದರ ಜೊತೆಯಲ್ಲಿ ಸೈನ್ಸ್ ಪಾರ್ಕ್ ಕೂಡ ನಿರ್ಮಾಣಗೊಳ್ಳುತ್ತದೆ.
ಭಾರತದ ಭೂಪಟದಲ್ಲಿ ಶಿವಮೊಗ್ಗ ಪಶ್ಚಿಮಘಟ್ಟದ ಮಾಹಿತಿ ಕೇಂದ್ರವಾಗಿ ಹೊರಹೊಮ್ಮಲಿದ್ದು ಯುವಜನರು, ಪರಿಸರಾಸಕ್ತರು, ಸಂಶೋಧಕರನ್ನು ಆಕರ್ಷಿಸಲಿದೆ.

ಶಿವಮೊಗ್ಗ ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿದೇ೯ಶಕರಾದ ಚಿದಾನಂದ ವಠಾರೆ, ನ್ಯೂಸ್‌ ನೆಕ್ಷ್ಟ್‌ ನೊಂದಿಗೆ ಮಾತನಾಡಿ ಭಾರತ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಶಿವಮೊಗ್ಗದ ಮಹಾತ್ಮಾಗಾಂಧಿ ಪಾರ್ಕ್‍ನಲ್ಲಿ ಪಶ್ಚಿಮಘಟ್ಟದ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಮಾಹಿತಿ ಕೇಂದ್ರವೊಂದು ಆರಂಭವಾಗುತ್ತಿದೆ. ಇದರಲ್ಲಿ ಈ ಪ್ರದೇಶದ ಸಸ್ಯಪ್ರಭೇದ, ಪ್ರಾಣಿ, ಪಶು-ಪಕ್ಷಿ ಎಲ್ಲ ವಿಚಾರಗಳೂ ಇಲ್ಲಿ ದಾಖಲಾಗಿರುತ್ತವೆ. ಅಧ್ಯಯನಕ್ಕೆ ಅತ್ಯಂತ ಉಪಯುಕ್ತವಾದ ಕೇಂದ್ರವಾಗಿರುತ್ತದೆ. ಎಲ್ಲಾ ಕಾಮಗಾರಿಗಳು 15 ತಿಂಗಳ ಕಾಲಾವಧಿಯಲ್ಲಿ ಮುಕ್ತಾಯಗೊಳ್ಳಲಿದೆ.

ನಾರಾಯಣಮೂರ್ತಿ ಕಾನುಗೋಡು, ಪರಿಸರ ಕಾರ್ಯಕರ್ತ ಮಾತನಾಡಿ ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಜನರಲ್ಲಿ ಪರಿಸರದ ಮಹತ್ವವನ್ನು ತಿಳಿಸುವ ಮತ್ತು ಪಶ್ಚಿಮಘಟ್ಟದ ಬಗ್ಗೆ ಮಾಹಿತಿ ನೀಡುವ ಕೇಂದ್ರವೊಂದನ್ನು ಶಿವಮೊಗ್ಗದಲ್ಲಿ ತೆರೆಯುತ್ತಿರುವುದು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿದ್ದು ಪರಿಸರ ಪ್ರೀತಿ ಬೆಳೆಸುತ್ತದೆ.

ಸಂಜನಾ ಆರ್.ಎಸ್. ವಿದ್ಯಾರ್ಥಿನಿ ಸಂತಸ ಹಂಚಿಕೊಂಡು ನಾವು ಪಶ್ಚಿಮಘಟ್ಟದಲ್ಲಿಯೇ ವಾಸವಾಗಿದ್ದರೂ ಈ ಪ್ರದೇಶದ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಸರ್ಕಾರ ಶಿವಮೊಗ್ಗದಲ್ಲಿ ಮಾಹಿತಿ ಕೇಂದ್ರವನ್ನು ಆರಂಭಿಸುವುದು ನಮ್ಮಂತಹ ವಿಜ್ಞಾನದ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಲಿದೆ.

ವಿನಾಯಕ, ಸಸ್ಯಶಾಸ್ತ್ರ ಉಪನ್ಯಾಸಕರು ನ್ಯೂಸ್‌ ನೆಕ್ಷ್ಟ್‌ನೊಂದಿಗೆ ಮಾತನಾಡಿ ಇಡೀ ಪ್ರಪಂಚಕ್ಕೇ ಈ ಯೋಜನೆ ಮಾರ್ಗಸೂಚಿಯಾಗಿದೆ. ಈ ಬಗ್ಗೆ ಜನರಲ್ಲಿ ಮಾಹಿತಿ ಕೇಂದ್ರದ ಮೂಲಕ ಅರಿವು ಮೂಡಿಸಲಾಗುತ್ತದೆ. ಅಲ್ಲದೆ ಪಶ್ಚಿಮಘಟ್ಟದ ಬಗ್ಗೆ ಅಧ್ಯಯನ ಮಾಡಲು ಇದು ಅವಶ್ಯವಾಗಿದೆ.

ಪ್ರಕಾಶ್, ವಿದ್ಯಾರ್ಥಿ:ಮಾತನಾಡಿ ಪಶ್ಚಿಮಘಟ್ಟ ಎಂದರೆ ಬರೀ ಪರಿಸರ ಮಾತ್ರ ಎಂದುಕೊಂಡಿದ್ದೇವೆ. ಆದರೆ ಇಲ್ಲಿರುವ ಎಲ್ಲಾ ಜೀವಿಗಳ ಬಗ್ಗೆಯೂ ನಾವು ತಿಳಿದುಕೊಂಡಂತಾಗುತ್ತದೆ. ಸರ್ಕಾರ ಆದಷ್ಟು ಬೇಗ ಈ ಕೇಂದ್ರವನ್ನು ಆರಂಭಿಸಲಿ.

error: Content is protected !!