ಪಶು ವೈದ್ಯಕೀಯ ಮಹಾ ವಿದ್ಯಾಲಯ ಶಿವಮೊಗ್ಗದಲ್ಲಿ ದಿನಾಂಕ:26.06.2019 ಮತ್ತು ದಿನಾಂಕ:27.06.2019 ರಂದು “ವೈಜ್ಞಾನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ” ಕುರಿತು ಎರಡು ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆಯ ಪ್ರಾಯೋಜನೆಯಡಿಯಲ್ಲಿ ಆಯೋಜಿಸಲಾಗಿದೆ. ಈ ತರಬೇತಿಯಲ್ಲಿ ಕುರಿ ಮತ್ತು ಮೇಕೆಗಳ ಪಾಲನೆ, ಪೋಷಣೆ, ನಿರ್ವಹಣೆ ಹಾಗೂ ರೋಗಗಳ ರಕ್ಷಣೆ ಬಗ್ಗೆ ಸಮಗ್ರ ಮಾಹಿತಿ ನೀಡಲಾಗುವುದು.25 ಜನರಿಗೆ ಸೀಮಿತಗೊಳಿಸಲಾದ ಈ ತರಬೇತಿ ಕಾರ್ಯಕ್ರಮಕ್ಕೆ ದಿ:24.06.2019ರ ಒಳಗೆ ನೋಂದಣಿ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ: ಡಾ. ವೆಂಕಟೇಶ್.ಎಮ್. ಎಮ್, ತರಬೇತಿ ನಿರ್ದೇಶಕರು ಮತ್ತು ಸಹಾಯಕ ಪ್ರಾಧ್ಯಾಪಕರು, 94823 73685 ಮತ್ತು ಡಾ. ಸತೀಶ್. ಜಿ.ಎಮ್. ಸಹಾಯಕ ಪ್ರಾಧ್ಯಾಪಕರು, 9448224595 ಇವರನ್ನು ಸಂಪರ್ಕಿಸಿ.