ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದಲ್ಲಿ “ ಸಂಶೋಧನೆಯಲ್ಲಿ ಪ್ರಯೋಗ ಪ್ರಾಣಿಗಳ ಸಮಯೋಚಿತ ಬಳಕೆ ” ಈ ವಿಷಯದ ಬಗ್ಗೆ ಮೂರು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಪ್ರಾಣಿಗಳ ಮೇಲೆ ನಡೆಸುವ ಪ್ರಯೋಗಗಳಲ್ಲಿ ನೈತಿಕತೆ ಮತ್ತು ಅವುಗಳ ಸಮಯೋಚಿತ ಬಳಕೆಯ ಬಗ್ಗೆ ತಿಳಿಸಿಕೊಡಲಾಯಿತು. ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರದ ಕುಲಪತಿಗಳಾದ ಪ್ರೊ:ಹೆಚ್.ಡಿ.ನಾರಾಯಣಸ್ವಾಮಿ ಇವರು ಮಾತನಾಡಿ, ಜೀವ ವೈದ್ಯಕೀಯ ಸಂಶೋಧನೆಯಲ್ಲಿ ಪ್ರಾಣಿಗಳನ್ನು ಬಳಸಬೇಕಾದ ಔಚಿತ್ಯವನ್ನು ವಿವರಿಸಿ, ಈ ಪ್ರಾಣಿಗಳನ್ನು ಜತನದಿಂದ ನೀಡಿಕೊಳ್ಳಬೇಕೆಂದು ಕರೆಯಿತ್ತರು. ಕುಲಸಚಿವರಾದ ಡಾ: ಕೆ.ಸಿ.ವೀರಣ್ಣರವರು ಪ್ರಯೋಗಶಾಲಾ ಪ್ರಾಣಿಗಳು ಮಾನವನ ಆರೋಗ್ಯದ ಕುರಿತಾಗಿ ಇರುವ ಔಷಧ ಪತ್ತೆಗೆ ಇರುತ್ತಿದ್ದು, ಅವುಗಳ ಮೇಲೆ ಪ್ರಯೋಗ ಮಾಡುವಾಗ ಭಾರತ ಸರ್ಕಾರದ ನಿಯಮಗಳನ್ನು ಪಾಲಿಸಬೇಕೆಂದರು. ಡಾ: ಹೆಚ್.ಆರ್.ವಿ.ರೆಡ್ಡಿ, ಕುಲಪತಿಗಳ ತಾಂತ್ರಿಕ ಸಲಹೆಗಾರರು ಮಾತನಾಡಿ, ಮೀನೂ ಸಹ ಒಂದು ಪ್ರಯೋಗ ಪ್ರಾಣಿಯಾಗಿದ್ದು ಅದರ ಸೂಕ್ತ ಬಳಕೆಯ ಬಗ್ಗೆಯೂ ಸಹ ಗಮನ ನೀಡಬೇಕೆಂದರು.
ಡಾ: ಪ್ರಕಾಶ್ ನಡೂರ್, ಡೀನ್, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರು ಆಧುನಿಕ ಸಂಶೋಧನೆಗಳಲ್ಲಿ ಪ್ರಾಣಿಗಳನ್ನು ಸೂಕ್ತವಾಗಿ ಬಳಸಿಕೊಂಡರೆ ಉತ್ತಮ ಪರಿಣಾಮವನ್ನು ಪಡೆಯಬಹುದೆಂದರು.
ಕಾರ್ಯಾಗಾರದ ಸಂಘಟನಾ ಕಾರ್ಯದರ್ಶಿಗಳಾದ ಡಾ: ಎನ್.ಬಿ.ಶ್ರೀಧರ್, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಔಷಧಶಾಸ್ತ್ರ ವಿಭಾಗ ಇವರು ಮೂರು ದಿನಗಳ ಈ ಕಾರ್ಯಕ್ರಮವನ್ನು ಸಂಘಟಿಸಿ, ಉಧ್ಯಮ ಮತ್ತು ಶಿಕ್ಷಣ ಕ್ಷೇತ್ರಗಳಿಂದ ವಿಷಯ ತಜ್ಞರುಗಳು ಈ ಕಾರ್ಯಾಗಾರದಲ್ಲಿ ಭಾಗವಹಿಸುತ್ತಿದ್ದು, ಈ ಕಾರ್ಯಕ್ರಮದ ಪ್ರಯೋಜನವನ್ನು ಪಡೆಯಬೇಕೆಂದು ಕರೆಯಿತ್ತರು.
ಡಾ: ಸುನಿಲಚಂದ್ರ, ಡಾ: ಪ್ರಕಾಶ್ ಮತ್ತು ಇತರರು ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿದರು.