ಶಿವಮೊಗ್ಗ, ಜನವರಿ 10 : ನಗರದ ಸವಳಂಗ ರಸ್ತೆಯ ರೈಲ್ವೇ ಗೇಟ್ ಓವರ್‍ಬ್ರಿಡ್ಜ್ ಕಾಮಗಾರಿ ನಡೆಯುತ್ತಿರುವುದರಿಂದ ಸುಗಮ ಸಂಚಾರದ ದೃಷ್ಠಿಯಿಂದ ಈ ಭಾಗದಲ್ಲಿ ಸಂಚರಿಸುವ ವಾಹನಗಳ ಚಾಲಕರು/ಪ್ರಯಾಣಿಕರು ತಾತ್ಕಾಲಿಕ ಅವಧಿಗೆ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸೂಚಿಸಲಾಗಿರುವ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದ್ದಾರೆ.
ಪರ್ಯಾಯ ಮಾರ್ಗಗಳು :
ಶಿವಮೊಗ್ಗದಿಂದ ಸವಳಂಗ ಕಡೆಗೆ ಸಂಚರಿಸುವ ಬಸ್ ಮತ್ತು ಶಾಲಾ ವಾಹನಗಳು ಶಿವಮೊಗ್ಗ ಬಸ್ಟ್ಯಾಂಡ್ – ಸಾಗರ ರಸ್ತೆ – ಆಲ್ಕೊಳ ಸರ್ಕಲ್ – ಪೊಲೀಸ್ ಚೌಕಿ – ಮೇದಾರ್‍ಕೇರಿ -ಬೊಮ್ಮನಕಟ್ಟೆ ರೈಲ್ವೇಗೇಟ್ – ಬಸವನಗಂಗೂರು – ಹುಣಸೋಡು – ಅಬ್ಬಲಗೆರೆ ಎಡಕ್ಕೆ ತಿರುಗಿ ಸವಳಂಗ ರಸ್ತೆಗೆ ಸೇರುವುದು. ಸವಳಂಗ ಕಡೆಯಿಂದ ಶಿವಮೊಗ್ಗ ನಗರಕ್ಕೆ ಬರುವ ಬಸ್ ಮತ್ತು ಶಾಲಾ ವಾಹನಗಳು ನವುಲೆ ಗಣಪತಿ ದೇವಸ್ತಾನದ ಎಡಕ್ಕೆ ತಿರುಗಿ – ತ್ರಿಮೂರ್ತಿ ನಗರ – ರಾಗಿಗುಡ್ಡ ಚಾನಲ್ ಬಲಗಡೆ ಏರಿ ಮೇಲ – ಮಲ್ಲಿಕಾರ್ಜುನ ನಗರ – ನೆಕ್ಸಾ ಶೋ ರೂಂ ಹತ್ತಿರ ಬಲಗಡೆ – ಹೊನ್ನಾಳಿ ರಸ್ತೆ – ಸಂಗೊಳ್ಳಿ ರಾಯಣ್ಣ ಸರ್ಕಲ್ – ಕೆ.ಇ.ಬಿ. ಸರ್ಕಲ್ – ಶಂಕರಮಥ ಸರ್ಕಲ್ ಮುಖಾಂತರ ಚಲಿಸಲು ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಶಿವಮೊಗ್ಗದಿಂದ ಸವಳಂಗ ಕಡೆಗೆ ಸಂಚರಿಸುವ ಲಘು ವಾಹನಗಳು ಶಿವಮೊಗ್ಗ ಬಸ್ಟ್ಯಾಂಡ್ – ಉಷಾ ನರ್ಸಿಂಗ್ ಹೋಂ ಕಡೆಯಿಂದ ಬರುವ ವಾಹನಗಳು – ರಾಜಕುಮಾರ್ ಸರ್ಕಲ್(ಮೇದಾರಕೇರಿ) – ಬೊಮ್ಮನಕಟ್ಟೆ ರೈಲ್ವೇ ಗೇಟ್ ಬಲಗಡೆಯಿಂದ –ಕೀರ್ತಿನಗರ-ಅಶ್ವಥ್‍ನಗರ-ಎಲ್.ಬಿ.ಎಸ್.ನಗರ 2ನೇ ಕ್ರಾಸ್ ಮೂಲಕ ಸವಳಂಗ ರಸ್ತೆ ಸೇರಬೇಕು. ಸವಳಂಗ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಲಘು ವಾಹನಗಳು ನವುಲೆ ಗಣಪತಿ ದೇವಸ್ತಾನದಿಂದ ತ್ರಿಮೂರ್ತಿನಗರ-ರಾಗಿಗುಡ್ಡ ಚಾನಲ್ ಹತ್ತಿರ ಬಲಕ್ಕೆ ತಿರುಗಿ-ಚಾನಲ್ ಏರಿ ಮೇಲೆಯಿಂದ ಮಲ್ಲಿಕಾರ್ಜುನ ನಗರ, ನೆಕ್ಸಾ ಶೋ ರೂಂ ಹತ್ತಿರ ಬಲಗಡೆ – ಹೊನ್ನಾಳಿ ರಸ್ತೆ-ಸಂಗೊಳ್ಳಿ ರಾಯಣ್ಣ ಸರ್ಕಲ್-ಕೆ.ಇ.ಬಿ. ಸರ್ಕಲ್, ಶಂಕರಮಠ ಸರ್ಕಲ್ ಮುಖಾಂತರ ಚಲಿಸಲು ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಶಿವಮೊಗ್ಗದಿಂದ ಸವಳಂಗ ಕಡೆಗೆ ಹೊರ ಹೋಗುವ ಲಾರಿ ಮತ್ತು ಭಾರೀ ವಾಹನಗಳು ಶಿವಮೊಗ್ಗ ಬಸ್ಟ್ಯಾಂಡ್ – ಆಲ್ಕೊಳ ಸರ್ಕಲ್- ಆಯನೂರು -ಹಾರ್ನಳ್ಳಿ-ಸವಳಂಗ ಮಾರ್ಗವಾಗಿ ಸಂಚರಿಸಬೇಕು. ಎಂ.ಆರ್.ಎಸ್. ಸರ್ಕಲ್ – ಸಂದೇಶ ಮೋಟಾರ್ಸ್ ಸರ್ಕಲ್ – ಗೋಪಾಳ – ಆಲ್ಕೊಳ ಸರ್ಕಲ್-ಆಯನೂರು -ಹಾರ್ನಳ್ಳಿ-ಸವಳಂಗ ಮಾರ್ಗವಾಗಿ ಸಂಚರಿಸಬೇಕು. ಸವಳಂಗದಿಂದ ಶಿವಮೊಗ್ಗ ಕಡೆಗೆ ಬರುವ ಲಾರಿ ಮತ್ತು ಭಾರೀ ವಾಹನಗಳು ಸವಳಂಗ -ಹಾರ್ನಳ್ಳಿ-ಆಯನೂರು-ಆಲ್ಕೊಳ ಸರ್ಕಲ್-ಗೋಪಾಳ-ಸಂದೇಶ ಮೋಟಾರ್ಸ್ ಸರ್ಕಲ್ ಮೂಲಕ ಸಂಚರಿಸಲು ಅನುಕೂಲವಾಗುವಂತೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.