ಶಿವಮೊಗ್ಗ, ಜ.18: ವಿದ್ಯಾರ್ಥಿಗಳ ಮೇಲಿನ ಪರೀಕ್ಷೆಯ ಒತ್ತಡವನ್ನು ನಿವಾರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಆರಂಭಿಸಿರುವ ಪರೀಕ್ಷಾ ಪೇ ಚರ್ಚಾ ಅಂಗವಾಗಿ ಕೇಂದ್ರೀಯ ವಿದ್ಯಾಲಯದಲ್ಲಿ ಸಿಬಿಎಸ್‌ಸಿ ಶಾಲೆಗಳ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಪರೀಕ್ಷಾ ಪೇ ಚರ್ಚಾ ಕುರಿತು ಪ್ರಧಾನಿ ಅವರು ನೀಡಿರುವ ಅಂಶಗಳನ್ನು ಇಟ್ಟುಕೊಂಡು ಚಿತ್ರ ರಚಿಸಬೇಕು. ಶಿವಮೊಗ್ಗ ನಗರದ ಎಲ್ಲಾ ಸಿಬಿಎಸ್‌ಸಿ ಶಾಲೆಗಳ 9ರಿಂದ 12ನೇ ತರಗತಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯು ಜನವರಿ 23ರಂದು ಬೆಳಿಗ್ಗೆ 10ರಿಂದ 12ರವರೆಗೆ ನಡೆಯಲಿದೆ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಯು.ಪಿ.ಬಿನೋಯ್ ತಿಳಿಸಿದ್ದಾರೆ.
