ಶಿವಮೊಗ್ಗ, ಜೂನ್- 06 : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಪರಿಸರ ಅಧ್ಯಯನ ಕೇಂದ್ರ ಹಾಗೂ ಆದಿಚುಂಚನಗಿರಿ ಶಾಲೆ ಇವರುಗಳ ಸಹಯೋಗದಲ್ಲಿ ಜೂ. 7ರ ಬೆಳಗ್ಗೆ 10 ಗಂಟೆಗೆ ನಗರದ ಶರಾವತಿ ನಗರ ಆದಿಚುಂಚನಗಿರಿ ಪ್ರೌಢಶಾಲೆ ಸಭಾಭವನದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಥಾ ಚಾಲನೆ ಮೂಲಕ ಪರಿಸರ ಮಿತ್ರ ಶಾಲಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಶ್ರೀಮತಿ ಪ್ರಭಾವತಿ ಮೃತ್ಯುಂಜಯ್ ಹಿರೇಮಠ್ ನೆರವೇರಿಸಲಿರುವರು. ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೋ|| ಎ.ಎಸ್.ಚಂದ್ರಶೇಖರ್ ಅಧ್ಯಕ್ಷತೆ ವಹಿಸುವರು. ಪರಿಸರ ಮಿತ್ರ ಶಾಲೆ 2019-20ರ ಕೈಪಿಡಿಯನ್ನು ಸಾಶಿಇ ಉಪನಿರ್ದೇಶಕಿ ಶ್ರೀಮತಿ ಸುಮಂಗಲ ಪಿ.ಕುಚಿನಾಡ ಬಿಡುಗಡೆಗೊಳಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶೆ ಶ್ರೀಮತಿ ಸರಸ್ವತಿ ಕೆ.ಎನ್. ವಿಶ್ವ ಪರಿಸರ ದಿನಾಚರಣೆಯ ಘೋಷವಾಕ್ಯ ಬಿಡುಗಡೆಗೊಳಿಸುವರು. ಹಿರಿಯ ಪರಿಸರ ಅಧಿಕಾರಿ ಮುರುಳೀಧರ್ ಬಿ.ಎಸ್., ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಮಧು, ಡಯಟ್ನ ಹಿರಿಯ ಉಪನ್ಯಾಸಕ ಹರಿಪ್ರಸಾದ್ ಜಿ.ವಿ., ಆದಿಚುಂಚನಗಿರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯ ಆದರ್ಶ್ ಇವರುಗಳು ಉಪಸ್ಥಿತರಿರುವರು.