ಶಿವಮೊಗ್ಗ, ಏ.03:ಕರ್ನಾಟಕ ಪತ್ರಿಕಾ ಸಂಪಾದಕರ ಸಂಘ (ರಿ)ವು ಪದಾಧಿಕಾರಿಗಳನ್ನು ಪುನರ್ನವೀಕರಿಸಿದ್ದು, ಸಂಘದ ನೂತನ ಅಧ್ಯಕ್ಷರಾಗಿ ಶಿವಮೊಗ್ಗ ಸಿಂಹ ಸಂಪಾದಕ ಜಿ.ಚಂದ್ರಶೇಖರ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತುಂಗಾತರಂಗದಿನಪತ್ರಿಕೆಯ ಸಂಪಾದಕ ಎಸ್ ಕೆ ಗಜೇಂದ್ರ ಸ್ವಾಮಿ ಅವರನ್ನು ಆಯ್ಕೆಮಾಡಲಾಗಿದೆ.

ಶಿವಮೊಗ್ಗ ಸೂರ್ಯ ಕಂಪಟ್ರ್ಸ್ ಎಡಿಟರ್ಸ್ ಕ್ಲಬ್ ನಲ್ಲಿ ನಡೆದ ಸಂಪಾದಕರ ಸಂಘದಸಭೆಯಲ್ಲಿ ನೂತನ ಸಮಿತಿ ಆಯ್ಕೆಯಾಗಿದ್ದು, ಸಂಘದ ಖಜಾಂಚಿಯಾಗಿ ರಘುರಾಜ್ಹೆಚ್. ಕೆ. ಅವರನ್ನು ಆಯ್ಕೆ ಮಾಡಲಾಗಿದೆ.ಗೌರವಾಧ್ಯಕ್ಷರಾಗಿ ವಾಯ್ಸ್ ಆಫ್ ಶಿವಮೊಗ್ಗದ ಬಂಡಿಗಡಿ ನಂಜುಂಡಪ್ಪ ಅವರನ್ನುಆಯ್ಕೆ ಮಾಡಲಾಗಿದೆ. ಸಂಘದ ಉಪಾಧ್ಯಕ್ಷರುಗಳಾಗಿ ಈ ಪತ್ರಿಕೆಯ ನಾಗೇಶ್ನಾಯ್ಕ್, ಉಷಾಮಹಿ ಪತ್ರಿಕೆಯ ಕಣ್ಣಪ್ಪ ಅವರನ್ನು ನೇಮಿಸಲಾಗಿದ್ದ, ಸಹಕಾರ್ಯದರ್ಶಿಯಾಗಿ ಕ್ಷಿತಿಜ ಪತ್ರಿಕೆಯ ಕೃಷ್ಣಬನಾರಿ, ಸಂಘಟನಾಕಾರ್ಯದರ್ಶಿಗಳಾಗಿ ಸಹ್ಯಾದ್ರಿ ಪತ್ರಿಕೆಯ ಎನ್ ಮಂಜುನಾಥ್ ಅವರನ್ನು ನೇಮಕಮಾಡಲಾಗಿದೆ.ನಿರ್ದೇಶಕರಾಗಿ ಛಲದಂಕಲ್ಲ ದಿನಪತ್ರಿಕೆಯ ಜಿ. ಪದ್ಮನಾಬ್, ಕಂಠೀರವಪತ್ರಿಕೆಯ ಎನ್‍ಎಂ ಶಶಿಕುಮಾರ್, ಅಜೇಯ ಪತ್ರಿಕೆಯ ಶ್ರೀನಿವಾಸನ್, ನಾವಿಕಪತ್ರಿಕೆಯ ರಂಜಿತ್, ಎಸ.ಆರ್., ಮಲೆನಾಡು ಎಕ್ಸ್ ಪ್ರೆಸ್ ನ ಶಿ.ಜು. ಪಾಶಾ, ರಾಜರುಷಿಯಾಎ. ಭರತೇಶ್, ಸೂರ್ಯ ಗಗನದ ಗಾ.ರಾ.ಶ್ರೀನಿವಾಸ್, ನುಡಿ ಗಿಡಪತ್ರಿಕೆಯ ಹೆಚ್‍ಎನ್ಮಂಜುನಾಥ್ , ಬೆಳಗಿನ ಛಲಗಾರದ ಜಿ.ನಿಶಾಂತ್, ಭದ್ರಾವಾಹಿನಿಯ ಸುಭಾಷ್ ರಾವ್ ಸಿಂದ್ಯಾ,ಜೈ ಕರುನಾಡು ಪತ್ರಿಕೆಯ ನಾಗರಾಜ್ ಕಲ್ಲುಕೊಪ್ಪ, ಹೊಸ ವಿಚಾರಪತ್ರಿಕೆಯ ಹಾಲೇಶ್ ಆರ್., ಆಜ್ ಕಾ ಇನ್ ಕ್ಯೂಲ್ಯಾಬ್ ಪತ್ರಿಕೆಯ ಲಿಯಾಖತ್, ಸತ್ಯಸಂಗತಿ ಪತ್ರಿಕೆಯ ಎಸ್. ಎಲ್. ವಿನೋದ್, ಭುವನವಾರ್ತೆಯ ಕೆ ಎ ಪ್ರಶಾಂತ್,ಶಿವಮೊಗ್ಗ ಸಂಚಲನದ ಆನಂದ್ ಅವರನ್ನು ನೇಮಕ ಮಾಡಲಾಗಿದೆ.ಪತ್ರಿಕಾ ಸಂಪಾದಕರ ಹಿತಾಕಾಂಕ್ಷೆಗಾಗಿ ರೂಪಿತವಾಗಿರುವ ಈ ಸಂಸ್ಥೆ ರಾಜ್ಯ ವ್ಯಾಪಿಸಂಘಟನೆ ಮೂಲಕ ಸ್ಥಳೀಯ ಪತ್ರಿಕೆಗಳ ಹಿತ ಕಾಪಾಡಲುಸಂಘಟನಾತ್ಮಕವಾದ ಧ್ವನಿ ಎತ್ತಲು ಹಾಗೂ ಸಂಪಾದಕರನ್ನು ಗುರುತಿಸಿಗೌರವಿಸುವ ಕಾರ್ಯ ಮಾಡಲು, ಸಮಾಜಮುಖಿ ಚಟುವಟಿಗಳಲ್ಲಿ ತೊಡಗಿಸಿಕೊಳ್ಳಲುಈ ಸಂಘ ಕಟ್ಟಿಬದ್ಧವಾದ ಕಾರ್ಯ ಮುಂದುವರೆಸಲು ನಿರ್ಧರಿಸಿತು.

error: Content is protected !!