ನೆಲಮೂಲದ ಜಲ ಪಾತಾಳ ಸೇರಿರುವಾಗ ನೀರು ಇನ್ನೊಬ್ಬರಿಗೆ ನೀಡುವುದಾದರೂ ಹೇಗೆ? ಶರಾವತಿಯನ್ನು ಬಗೆಯುವ ದುಸ್ಸಾಹಸ ಒಳಿತಲ್ಲ.

ಒಂದನ್ನು ಪಡೆಯ ಬೇಕಾದರೆ ಒಂದನ್ನು ಕಳೆದುಕೊಳ್ಳಬೇಕೆಂಬ ನಾಣ್ಣುಡಿಯಂತೆ ಒಂದು ಯೋಜನೆ sಸಿದ್ದವಾಗಬೇಕಾದರೆ ಕೆಲವನ್ನು ತ್ಯಾಗ ಮಾಡಲೇಬೇಕಾಗುತ್ತದೆ ನಿಜ.ಆದರೆ ಅದು ಅಂತಿಂಥ ತ್ಯಾಗವಲ್ಲ. ಭೂಮಿ-ಬದುಕು-ಸಂಸ್ಕøತಿಯನ್ನೇ ಕತ್ತರಿಸಿಕೊಂಡು ಜೀವನ ಸಾಗಿಸಬೇಕಾದ ಅತ್ಯಂತ ದುರಂತದ ಸ್ಥಿತಿಗೆ ಈ ಪ್ರದೇಶದ ಜನ ಬಂದು ತಲುಪುತ್ತಾರೆ.
1965ರ ಕಾಲದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆ ಮಾಡಬಹುದು. ಎಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಲಿಂಗನಮಕ್ಕಿಯಲ್ಲಿ ಅಣೆಕಟ್ಟು ನಿಮಿ೯ಸುವ ಕಾಯ೯ಕ್ಕೆ ಮುಂದಾದರು. ಮಲೆನಾಡಿನ ಅರಣ್ಯ ಮತ್ತು ಸಂಸ್ಕøತಿಯನ್ನೇ ನಾಶ ಮಾಡಿ ಲಿಂಗನಮಕ್ಕಿ ಅಣೆಕಟ್ಟನ್ನು ರಲ್ಲಿ ಕಟ್ಟಲಾಯಿತು.

1965ರಲ್ಲಿ ಲಿಂಗನಮಕ್ಕಿ ಡ್ಯಾಂ ಕಟ್ಟುವುದಕ್ಕಾಗಿ ಶರಾವತಿ ಹಿನ್ನೀರಿನ 30 ಸಾವಿರ ಎಕರೆ ಕೃಷಿಭೂಮಿ ಜಲಾವೃತವಾಯಿತು. ಅದಲ್ಲದೆ ಅರಣ್ಯಸಂಪತ್ತು, ಬೆಟ್ಟ, ಕಾನು, ನಡುಗಡ್ಡೆ, ಶಾಲೆ, ಜನವಸತಿ ಅಷ್ಟೇ ಏಕೆ ಪ್ರಾಚೀನ ವಾಸ್ತುಶಿಲ್ಪಗಳನ್ನೊಳಗೊಂಡಿದ್ದ ಅಪರೂಪದ ದೇವಾಲಯಗಳು ನೀರು ಸೇರಿದವು. ದಡ ಹತ್ತಲಾಗದ ಜನ ನೀರಿನೊಳಗೆ ಮುಳುಗಿದರು. ಆ ಪ್ರದೆಶದ ಜನರೂ ಸಾಕಷ್ಟು ತೊಂದರೆಗೆ ಒಳಗಾದರು.
ಒಟ್ಟು 50 ಸಾವಿರಕ್ಕೂ ಹೆಚ್ಚಿನವರು ಲಿಂಗನಮಕ್ಕಿ ಅಣೆಕಟ್ಟು ಪ್ರದೇಶದಿಂದ ನಿರಾಶ್ರಿತರಾಗಿದ್ದಾರೆ. ಇದರ ಜೊತೆಯಲ್ಲಿ ಶರಾವತಿ ನದಿಗೆ ಅಣೆಕಟ್ಟು ಕಟ್ಟಿದ ಸಾವೆಹಕ್ಲು, ಮುಳುಗಿನ ಮಡೆನೂರು, ಮಾಣಿ, ಚಕ್ರ, ವರಾಹಿ; ಒಂದಾದ ಮೇಲೊಂದು ಪ್ರಹಾರ ನಮ್ಮ ಜನರ ಜೀವನವನ್ನೇ ಅಲ್ಲಾಡಿಸಿತು. ಯಾವುದೇ ಪೂರ್ವಭಾವಿಯಾದ ಸಮಾಲೋಚನಾ ಸಭೆಗಳನ್ನು ನಡೆಸದೇ, ಇದ್ದಕ್ಕಿದ್ದ ಹಾಗೆ ರಾತ್ರೋರಾತ್ರಿ ನೀರು ಮನೆ ಆವರಿಸಿತು.
ಲಿಂಗನಮಕ್ಕಿ ಮುಳುಗಡೆ ಸಂದರ್ಭದಲ್ಲಿ ಈ ಪ್ರದೇಶದ ಜನರಿಗೆ ಲಕ್ಕವಳ್ಳಿ, ಶೆಟ್ಟಿಹಳ್ಳಿ, ಗೋಪಾಲ ಕಾಲೊನಿ ಮುಂತಾದ ಕಡೆಗಳಿಂದ ಕೊಂಡೊಯ್ದು ಈ ಜಾಗ ನೀವು ಉಪಯೋಗ ಮಾಡಿಕೊಳ್ಳಿ ಎಂದು ತೋರಿಸಲಾಯಿತಂತೆ. ಅಧಿಕಾರಿಗಳಿಗೆ ಹಿನ್ನೀರಿನ ಪ್ರದೇಶದ ಜನರನ್ನು ಒಕ್ಕಲೆಬ್ಬಿಸಿ ಅಣೆಕಟ್ಟು ಕಟ್ಟಿದರೆ ಸಾಕಾಗಿತ್ತು. ಇಲ್ಲಿ ಕೆಲವರು ಬದುಕು ಆರಂಭಿಸಿದರು, ಮತ್ತೆ ಕೆಲವರು ಬದುಕಿಗಾಗಿ ಮಲೆನಾಡನ್ನೇ ಬಿಟ್ಟು ಚೆಲ್ಲಾಪಿಲ್ಲಿಯಾದರು. ಭೂಮಿ ಪಡೆದ ಸಾವಿರಾರು ಕುಟುಂಬಗಳಿಗೆ ದಾಖಲೆಯೇ ಇರಲಿಲ್ಲ. ಕ್ರಮೇಣ ಅರಣ್ಯ ಇಲಾಖೆಯವರು ಈ ಜಾಗ ನಮ್ಮದು ಎಂದು ಕಿರುಕುಳ ಕೊಡಲಾರಂಭಿಸಿದರು. ಮದನಗೋಪಾಲ್ ಅರಣ್ಯ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾಗಿದ್ದ ಸಂದರ್ಭದಲ್ಲಿ 4,800 ಕುಟುಂಬಗಳಿಗೆ ಕೇಂದ್ರದ ಅನುಮತಿ ಪಡೆದು ಜಿಲ್ಲೆಯಲ್ಲಿ ಕಂದಾಯ ಭೂಮಿಯನ್ನಾಗಿ ಪರಿವರ್ತಿಸಿ ಹಕ್ಕುಪತ್ರ ಕೊಡಿಸಿದ್ದು ಬಿಟ್ಟರೆ ಮತ್ತೇನೂ ಅನುಕೂಲವಾಗಲಿಲ್ಲ. ಇಂದಿಗೂ ಇವರು ತಾವು ಕಂಡುಕೊಂಡ ನೆಲೆಯಲ್ಲಿ ನಿರಾಶ್ರಿತರಾಗಿಯೇ ಬಂದಿದ್ದಾರೆ.
ಭೂಮಿ ಕಳೆದುಕೊಂಡು ನೇರ ಸಂತ್ರಸ್ತರಾದವರದು ಒಂದು ಕಥೆಯಾದರೆ, ಮುಳುಗದೇ ಉಳಿದು ತಾಲ್ಲೂಕು ಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಂಡು ಬಾಧಿತರಾದವರದ್ದು ಮತ್ತೊಂದು ಕಥೆ. ಅಂದು ಮುಳುಗಡೆಯಿಂದ ಉಳಿದ ನಾಲ್ಕು ಗ್ರಾಮಪಂಚಾಯ್ತಿಗಳಾದ ತುಮರಿ, ಕುದರೂರು, ಎಸ್‍ಎಸ್‍ಭೋಗ್, ಚನ್ನಗೊಂಡ ಇವುಗಳು ಎಲ್ಲವನ್ನೂ ಕಳೆದುಕೊಂಡಿದ್ದವು. ಈ ಪ್ರದೇಶದ ಸಂತ್ರಸ್ತರು ಮತ್ತು ಬಾಧಿತರು ಇಬ್ಬರ ಕುಟುಂಬಗಳಿಗೆ ಸರ್ಕಾರಿ ಕೆಲಸ ಕೊಡುತ್ತೇವೆ, ಉಚಿತ ವಿದ್ಯುತ್ ನೀಡುತ್ತೇವೆ ಎಂದೆಲ್ಲಾ ಆಸೆ ಹುಟ್ಟಿಸಿ ದಿನಾ ಕಛೇರಿಗಳಿಗೆ ಅರ್ಜಿ ಹಿಡಿದು ತಿರುಗುವುದೇ ಇವರ ಬದುಕಾಗಿಬಿಟ್ಟಿತು. ಪರಿಹಾರಕ್ಕಿಂತ ಪ್ರಹಾರವೇ ಹೆಚ್ಚಾಯಿತು.

1965ರಲ್ಲಿ ಲಿಂಗನಮಕ್ಕಿ ಅಣೆಕಟ್ಟು ಕಟ್ಟುವಾಗ 126 ಚದರಮೈಲು ಪ್ರದೇಶ, 124 ಹಳ್ಳಿಗಳು ಮುಳುಗಡೆಯಾಗುತ್ತವೆ. ಇದರಲ್ಲಿ 15,165 ಎಕರೆ ಕೃಷಿಭೂಮಿ, 63,833 ಎಕರೆ ಅರಣ್ಯಭೂಮಿ ನೀರಿನಿಂದ ಆವೃತವಾಗುತ್ತದೆ. ಅಂದು ಸಾಗರ ತಾಲ್ಲೂಕಿನ ತಲಕಳಲೆ, ಕರುಮನೆ, ಬಣ್ಣುಮನೆ, ಹೆಬ್ಬೈಲು, ಹಿಂಗೆರೆ, ಅರಳಗೋಡು, ಬಾಳೆಗೆರೆ, ಲಿಂಗನಮಕ್ಕಿ, ಬೆಳ್ಳೆಣ್ಣೆ, ಹೆಗ್ಗಟ್ಟು, ಗೀಜಗ, ಹೆಬ್ಬರಿಗೆ ಹೀಗೆ ಜನವಸತಿ ಇದ್ದ ಊರುಗಳೆಲ್ಲಾ ನೀರುಪಾಲಾದವು. ಅವಶ್ಯವಿರುವ ಎಷ್ಟೋ ಭೂಮಿಯನ್ನು ಅಂದು ಕೆಪಿಸಿಗೆ ನೀಡಲಾಯಿತು. ಈಗ ಕೆಲವು ಪ್ರದೇಶಗಳಲ್ಲಿ ಬಹಳ ಹಿಂದಿನಿಂದ ಜನ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಆದರೆ ಅವರಿಗೆ ಯಾವುದೇ ಹಕ್ಕುಪತ್ರಗಳಿಲ್ಲ. ಬದುಕಿನ್ನೂ ಅನಾಥವಾಗಿಯೇ ಇದೆ. ಅಷ್ಟೇ ಏಕೆ, ಸಾಗರದ ಸುತ್ತಮುತ್ತ ಲಿಂಗನಮಕ್ಕಿ ಸಂತ್ರಸ್ತರಿಗಾಗಿಯೇ ಭೂಮಿ ಮೀಸಲಿಡಲಾಗಿತ್ತು. ಈಗ ಅದು ಬಲಾಢ್ಯರ ಕೈ ಸೇರಿ ನಿವೇಶನಗಳಾಗಿವೆ. ಜನವಸತಿ ಇರುವ ಮುಳುಗಡೆ ಹೊಂದಿದ ಪ್ರದೇಶಗಳಲ್ಲಿ ಶರಾವತಿ ಕೊಳ್ಳದ ಅಭಯಾರಣ್ಯ ಎಂದು ಘೋಷಿಸಿದ್ದು ಜನರು ಭೂಮಿ ಸಾಗುವಳಿ ಇರಲಿ, ಓಡಾಡಲೂ ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ. 
error: Content is protected !!