ಕೃಷಿ ವಿಶ್ವ ವಿದ್ಯಾಲಯ ಧಾರವಾಡ ಬಿಡುಗಡೆಗೊಳಿಸಿದ ಡಿ.ಎಸ್.ಬಿ-21 ನೂತನ ತಳಿಯಲು ತುಕ್ಕುರೋಗ, ತಾಮ್ರರೋಗ ನಿರೋಧಕ ತಳಿಯಾಗಿದ್ದು ಕರ್ನಾಟಕ ರಾಜ್ಯ ನಿಗಮ ಬೀದರ್, ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ ಮತ್ತು ಕೃಷಿ ವಿಶ್ವವಿದ್ಯಾಲಯ ರಾಯಚೂರು ವತಿಯಿಂದ ಪ್ರಾತ್ಯಕ್ಷಿಕೆ ಮಾಡಲಾಯಿತು. ಮುಂಗಾರು ಕೊನೆಯ ಹಂತದಲ್ಲಿ ವಿಪರೀತ ಮಳೆಯಾಗಿದ್ದು, ನೆತ್ತಿಸುಡುವ ರೋಗ ಹಾಗು ಎಲೆ ಅಂಗಮಾರಿ ರೋಗದಿಂದ ಇಳುವರಿ ಕುಂಠಿತವಾಗದಂತೆ ಆಳಂದ ತಾಲ್ಲೂಕಿನ ಕಿನ್ನಿಸುಲ್ತಾನ್ ರೈತ ಶ್ರೀ. ಗಣೇಶ್ ವಿದ್ಯಾಸಾಗರ ಮುನ್ನಳ್ಳಿ 3 ಎಕ್ರೆಯಲ್ಲಿ ಸೋಯಾಬೇನ್ ಉತ್ತಮ ಇಳುವರಿ ದೊರಕಿದೆ.
ಅಳವಡಿಸಿದ ತಂತ್ರಜ್ಞಾನಗಳು
• ಮಣ್ಣು ಪರೀಕ್ಷೆ ಆಧಾರಿತ ಮೇಲೆ ರಸಗೊಬ್ಬರ ಬಳಕೆ
• ಹೊಸ ರೋಗ ನಿರೋಧಕ ತಳಿ ವಿಜ್ಞಾನಿಗಳಿಂದ ಮಾಹಿತಿ
• ಬೀಜೋಪಚಾರಕ್ಕೆ ಟ್ರ್ಯಕೋಡರ್ಮಾ ಜೈವಿಕ ಉಪಯೋಗ
• ಅತಿಯಾದ ಮಳೆಯ ನಂತರ ನೀರಿನಲ್ಲಿ ಕರಗುವ ಎನ್.ಪಿ.ಕೆ ಸಿಂಪಡಣೆ.
• ಹೂ ಹಂತ, ಕಾಯಿ ಹಂತದಲ್ಲಿ ಪಲ್ಸ ಮ್ಯಾಜಿಕ ಸಿಂಪಡಣೆ
• ಕೊಯ್ಲು ನಂತರ ಬೀಜ ಶೇಖರಣೆಗೆ ಬ್ಯಾಗ ಉಪಯೋಗ.
ಸೋಯಾ, ಅವರೆ ಈ ವರ್ಷ ಉತ್ತಮ ಇಳುವರಿಗೆ ಸೂಕ್ತ ಹವಾಮಾನ ದೊರಕಿದ್ದು, ಎಕರೆಗೆ 10 ಕ್ವಿಂಟಾಲ್ ಇಳುವರಿ ದೊರಕಿದೆ. ಉತ್ತಮ ತಳಿ ಆಯ್ಕೆಯಿಂದ ಹುಳ ರೋಗಗಳಿಗೆ ಕಡಿಮೆ ಸಿಂಪಡಣೆ ಮಾಡಿ ಖರ್ಚು ವೆಚ್ಚ ಕಡಿಮೆಗೊಳಿಸಬಹುದು. ಹೂ ಮತ್ತು ಮೊಗ್ಗು ಉದರದಂತೆ ಪಲ್ಸ ಮ್ಯಾಜಿಕ ಸಿಂಪರಣೆ ಮಾಡಿರುತ್ತಾರೆ ಎಂದು ಕೆ.ವಿ.ಕೆ ಯ ಮುಖ್ಯಸ್ಥರಾದ ಡಾ| ರಾಜು ತೆಗ್ಗಳ್ಳಿ ಹಾಗೂ ಸಸ್ಯರೋಗ ತಜ್ಞರಾದ ಝಹೀರ ಅಹಮ್ಮದ್ ತಿಳಿಸಿದ್ದಾರೆ.