ಇಂದು ದೆಹಲಿಯಲ್ಲಿ ಜಿ,ಪಲ್ಲವಿ.ವಕ್ತಾರೆ, ಜಿಲ್ಲಾ ಕಾಂಗ್ರೆಸ್ ಶಿವಮೊಗ್ಗರವರು ನೂತನ AICC ಅಧ್ಯಕ್ಷರಾಗಿ ಆಯ್ಕೆಯಾದ, ಹಿರಿಯ ಕಾಂಗ್ರೇಸ್ ಮುಖಂಡರಾದ ಶ್ರೀ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಭೇಟಿ ಮಾಡಿ ಶುಭಕೋರಿದರು
ನಂತರ News Next Kannada ದೊಂದಿಗೆ ಮಾತನಾಡಿದ ಪಲ್ಲವಿ ಶಿವಮೊಗ್ಗ ಜಿಲ್ಲಾ ವಕ್ತಾರೆ, ನಮ್ಮ ಕರ್ನಾಟಕದ ಹೆಮ್ಮೆ ಶ್ರೀ ಮಲ್ಲಿಕಾರ್ಜುನ್ ಖರ್ಗೆ ಅವರು AICC ಅಧ್ಯಕ್ಷರಾಗಿರುವುದು ನಿಜಕ್ಕೂ ಸಂತಸ ಮತ್ತು ನಾವೆಲ್ಲ ಹೆಮ್ಮೆ ಪಡುವ ವಿಷಯ. ಅವರ ಅಧ್ಯಕ್ಷತೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ದೇಶದಲ್ಲಿ ನಡೆಯಲಿದೆ ಹಾಗೂ ಅವರಿಗೆ ಬೇಕಾದ ಎಲ್ಲ ಶಕ್ತಿ ಆ ಭಗವಂತ ಅನುಗ್ರಹಿಸಲಿ ಎಂದು ಈ ಸಂದರ್ಭದಲ್ಲಿ ಪ್ರಾರ್ಥಿಸುತ್ತೇನೆ ಎಂದರು.