ಶಿವಮೊಗ್ಗ, ಮಾರ್ಚ್ 10 ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 12/03/2023 ರ ಭಾನುವಾರದಂದು 2022-23 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ದುರ್ಗಿಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎದುರು, ಶಿವಪ್ಪನಾಯಕ ಅರಮನೆ ಎದುರು ಕೋಟೆರಸ್ತೆ, ಕನಕ ವಿದ್ಯಾ ಸಂಸ್ಥೆ ಎದುರು ಆರ್.ಎಂ.ಎಲ್.ನಗರ, ಅಭಿಷ್ಟವರ ಗಣಪತಿ ದೇವಸ್ಥಾನದ ಎದುರು ಕಲ್ಲಹಳ್ಳಿ, ವಿನೋಬನಗರ, ಹಾಗೂ ಅಶೋಕನಗರ ನಂದಿನಿ ಬೂತ್ ಪೊಲೀಸ್ ಕ್ವಾಟ್ರಸ್ ಹತ್ತಿರ, ಶಿವಮೊಗ್ಗಗಳಲ್ಲಿ ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್‍ಗಳನ್ನು ತೆರೆಯಲಾಗಿದೆ.

ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!