ಶಿವಮೊಗ್ಗ, ಜನವರಿ 24 : ಶಿವಮೊಗ್ಗ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗವು ದಿ: 29/01/2023 ರ ಭಾನುವಾರದಂದು 2022-23 ನೇ ಸಾಲಿನ ನೀರಿನ ಕಂದಾಯ ಮತ್ತು ಬಾಕಿ ಕಂದಾಯ ವಸೂಲಾತಿಗಾಗಿ ನಗರದ “ಸೀಗೆಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಟಿಪ್ಪುನಗರ ಅಲ್ ಹಬೀಬ್ ಶಾಲೆ ಎದುರು, ಆದಿಚುಂಚನಗಿರಿ ಶಾಲೆ ಮುಂಭಾಗ ನರ್ಸ್ ಕ್ವಾಟ್ರಸ್ ಹತ್ತಿರ, ಕಾಶೀಪುರ ಸರ್ಕಲ್ ಕೆನರಾ ಬ್ಯಾಂಕ್ ಮುಂಭಾಗ ಹಾಗೂ ಸೂಳೇಬೈಲ್ ಗಣಪತಿ ದೇವಸ್ಥಾನದ ಹತ್ತಿರ” ವಿಶೇಷ ನೀರಿನ ಕಂದಾಯ ವಸೂಲಾತಿ ಕೌಂಟರ್‍ಗಳನ್ನು ತೆರೆಯಲಾಗಿದೆ.

ನೀರಿನ ಖಾತೆದಾರರು ಬಾಕಿ ಉಳಿಸಿಕೊಂಡಿರುವ ನೀರಿನ ಕಂದಾಯವನ್ನು ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದು ಅನಿವಾರ್ಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕರ್ನಾಟಕ ನಗರ ನೀರುಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!