ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಶಿವಮೊಗ್ಗ ಜಿಲ್ಲಾ ಶಾಖೆಯ ಮೀಡಿಯಾ ಹೌಸ್ ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲಾ ಕೊರಮ ಜನಾಂಗದ ಅಧ್ಯಕ್ಷರಾದ ಕೆಪಿ ಕೃಷ್ಣಮೂರ್ತಿ 12ನೇ ಶತಮಾನದ ವಚನಕಾರ ಶಿವ ಶರಣ ಶ್ರೀನುಲಿಯ ಚಂದಯ್ಯ ಇವರ ಜಯಂತಿಯನ್ನು ಪ್ರತಿವರ್ಷ ನೂಲು ಹುಣ್ಣಿಮೆಯ ದಿನದಂದು ರಾಜ್ಯದ ಪ್ರತಿ ಜಿಲ್ಲೆ ಹಾಗೂ ಪ್ರತಿ ತಾಲೂಕುಗಳಲ್ಲಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ ಕರ್ನಾಟಕ ಸರ್ಕಾರವು ಆದೇಶದ ಮೂಲಕ ನಮ್ಮ ಜನಾಂಗದ ವಚನಕಾರ ಶಿವ ಶರಣ ಮತ್ತು ಧಾರ್ಮಿಕರಿಗೆ ಗೌರವವನ್ನು ನೀಡಿದೆ ಈ ಮೂಲಕ ನಮ್ಮ ಜನಾಂಗವನ್ನು ಸರ್ಕಾರವನ್ನು ಗುರುತಿಸಿದೆ ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮಗಳ ಮೇಲೆ ಇದೆ ಎಂದು ಹೇಳಿದರು
ಸಂಘಟನಾ ಕಾರ್ಯದರ್ಶಿ ರವೀಂದ್ರ ಕುಮಾರ್ ಕೆಆರ್ ಮಾತನಾಡಿ ನೂಲು ಹುಣ್ಣಿಮೆಯ ದಿನದಂದು ಶ್ರೀ ನುಲಿಯ ಚಂದಯ್ಯ ಜಯಂತಿಯನ್ನು ಶಿವಮೊಗ್ಗದ ಕುವೆಂಪು ರಂಗ ಮಂದಿರ ದಲ್ಲಿ ಆಚರಿಸಲಾಗುತ್ತಿದೆ ಜನಾಂಗದ ಸಮಸ್ತ ಕುಲಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಕಾಲಕ್ಕೆ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು
ಪತ್ರಿಕಾಗೋಷ್ಠಿಯಲ್ಲಿ ಶಿವಮೊಗ್ಗ ಜಿಲ್ಲಾ ಕೊರಮ ಜನಾಂಗದ ಅಧ್ಯಕ್ಷರಾದ ಕೆಪಿ ಕೃಷ್ಣಮೂರ್ತಿ ಉಪಾಧ್ಯಕ್ಷರಾದ ಪಕೀರಪ್ಪ ಭಜಂತ್ರಿ ಸಂಘದ ಮುಖಂಡರಾದ ರಾಮಣ್ಣ ಹಾಜರಿದ್ದರು