ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಉಪ್ಪಳ್ಳಿ ಗ್ರಾಮದ ಪ್ರಗತಿ ಪರ ಕೃಷಿಕ ಆನಂದ್‍ರವರು ದೇಸೀ ತಳಿಗಳಾದ ಮಲೆನಾಡು ಗಿಡ್ಡ ಹಾಗು ಗುಜರಾತಿನ ಗೀರ್ ತಳಿಯ ಸುಮಾರು 45 ರಿಂದ 50 ಜಾನುವಾರುಗಳನ್ನು ಕಳೆದ 11 ವರ್ಷಗಳಿಂದ ನಂದ ಗೋಕುಲ ಎಂಬ ಹೆಸರಿನಿಂದ ಗೋ ಶಾಲೆಯನ್ನು ನಡೆಸುತ್ತಿದ್ದಾರೆ.
ಇವರು ದೇಸೀ ತಳಿಯ ಜಾನುವಾರುಗಳನ್ನು ಸಾಕುತ್ತಿದ್ದು, ಹಾಲು ಹಾಗು ಗೋಮೂತ್ರದಿಂದ ಮೌಲ್ಯವರ್ಧನೆ ಕೈಗೊಂಡಿದ್ದಾರೆ. ಇಲ್ಲಿಯ ದೇಸೀ ತಳಿಯ ಹಾಲಿನ ಗೋಮೂತ್ರ ಹಾಗು ತುಪ್ಪಕ್ಕೆ ರಾಜ್ಯದಲ್ಲೆಡೆಯಿಂದ ಅಧಿಕ ಬೇಡಿಕೆಯಿದೆ. ಗೋ ಶಾಲೆಯಲ್ಲಿ ಮುಂಜಾನೆ ಸಿಗುವಂತಹ ಗೋ ಮೂತ್ರವನ್ನು ಸಂಗ್ರಹಿಸಿ ಸಂಸ್ಕರಣೆ ಮಡಿ ಆರಕವನ್ನು ತಯಾರು ಮಾಡಿ ಮಾರಾಟ ಮಡಲಾಗುತ್ತಿದೆ. ಹಾಗು ಪ್ರತೀ ದಿನ ಸಿಗುವ ಹಾಲನ್ನು ಇವರು ಮಾರಾಟ ಮಾಡುದೇ ಹಾಲಿನಿಂದ ಬೆಣ್ಣೆಯನ್ನು ತಯಾರು ಮಾಡಲಾಗುತ್ತದೆ,
ಪ್ರತೀ ದಿನ ಕರೆದ ಹಾಲನ್ನು ಮೊಸರು ಮಾಡಿ ನಂತರ ಸಂಸ್ಕರಿಸಿ ಬಂದಂತಹ ಬೆಣ್ಣೆಯನ್ನು ತಿಂಗಳಿಗೊಮ್ಮೆ ಕಾಯಿಸಿ ತುಪ್ಪವನ್ನು ಮಾಡಲಾಗುತ್ತದೆ. ಇಲ್ಲಿ ತಯಾರಾಗುವ ತುಪ್ಪಕ್ಕೆ ಅಧಿಕ ಬೇಡಿಕೆಯಿದೆ. ದೂರದ ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಇವರ ಮಾರಾಟ ವ್ಯವಸ್ತೆಯನ್ನು ಮಾಡಿಕೊಂಡಿದ್ದಾರೆ. ಪ್ರತೀ ತಿಂಗಳು ಶುದ್ದ ತುಪ್ಪವನ್ನು ಗ್ರಾಹಕರಿಗೆ ತಲುಪಿಸುವ ವ್ಯವಸ್ತೆಯನ್ನು ಮಾಡಲಾಗುತ್ತದೆ.
ಇವರಲ್ಲಿ ತಯಾರಾದ ತುಪ್ಪಕ್ಕೆ ಬೇಡಿಕೆ ಹೇಗಿದೆಯಂದರೆ ಒಂದು ವರ್ಷಕ್ಕೆ ಬೇಕಾಗುವಷ್ಟು ತುಪ್ಪದ ಹಣವನ್ನು ಗ್ರಾಹಕರು ಮುನ್ನವೇ ಇವರ ಬ್ಯಾಂಕ್ ಖಾತೆಗೆ ಜಮಾವಣೆ ಮಾಡುತ್ತಾರೆ. ಹಾಗು ಇವರಲ್ಲಿ ಸಿಗುವ ತುಪ್ಪ 2000/- ಪ್ರತೀ ಕಿ.ಗ್ರಾಂ.ಹಾಗು ಆರಕಕ್ಕೆ ಪ್ರತೀ ಲೀಟರ್ ಗೆ 100 ರೂಪಾಯಿಗಳು. ಇವರಿಗೆ ಮಾರುಕಟ್ಟೆಯ ಸಮಸ್ಯೆ ಇಲ್ಲವೇ ಇಲ್ಲ.
ಶ್ರೀಯುತ ಆನಂದರವರೇ ಹೇಳುವ ಪ್ರಕಾರ ಸುಮಾರು 30 ಲೀಟರ್ ಹಾಲಿಗೆ 1 ಕೆ.ಜಿ ತುಪ್ಪ ಬರುತ್ತದೆ. ಶುದ್ದವಾಗಿ ಸಂಸ್ಕರಣೆ ಮಾಡಿ ತಿಂಗಳಿಗೊಮ್ಮೆ ಮಾರಾಟ ಮಾಡಲಾಗುತ್ತದೆ. ನಮ್ಮಲ್ಲಿ ತಯಾರಾಗುವ ತುಪ್ಪಕ್ಕೆ ತುಂಬಾ ಬೇಡಿಕೆಯಿದೆ ಹಾಗು ನಮ್ಮಲ್ಲಿರುವ ದೇಸೀ ತಳಿಗಳ ಗೋ ಮೂತ್ರಕ್ಕೆ ಅಧಿಕ ಬೇಡಿಕೆಯಿದ್ದು, ನಮ್ಮಲ್ಲಿರುವ ಜಾನುವಾರುಗಳಿಂದ ಗೋ ಮೂತ್ರದಿಂದ ಆರಕವನ್ನು ತಯಾರು ಮಾಡುತ್ತೇವೆ.
ಇದು ಕ್ಯಾನ್ಸರ್, ಅಸಿಡಿಟಿ, ಸಕ್ಕರೆ ಖಾಯಿಲೆ, ಮೈಗ್ರೇನ್ ಈ ತರಹದ ಹಲವು ಖಾಯಿಲೆಗಳಿಗೆ ರಾಮ ಬಾಣವಾಗಿದೆ. ನಾವು ಯಾವೂದೇ ರೀತಿಯ ಪ್ರಚಾರ ಮಾಡದೆಯೇ ನಮಗೆ ಮಾರುಕಟ್ಟೆ ಸೌಲಭ್ಯವನ್ನು ಕಂಡುಕೊಂಡಿದ್ದೇವೆ. ನಮ್ಮಲ್ಲಿ ದೇಸೀ ತಳಿಯ ಗೋ ಮೂತ್ರದ ಆರಕ ಸಿಗುತ್ತದೆಯೆಂದು ಜನರ ಬಾಯಿಂದ ಬಾಯಿಗೆ ಹೋಗಿ ಮಾರು ಕಟ್ಟೆ ಸೃಷ್ಟಿಯಾಗಿದೆ. ಕಳೆದ 11 ವರುಷಗಳಿಂದ ನಿರಂತರವಾಗಿ ಗ್ರಾಹಕರನ್ನು ಉಳಿಸಿಕೊಂಡು ಬರಲಾಗಿದೆ.
ನಮ್ಮಲ್ಲಿ ತಯಾರಾಗುವ ತುಪ್ಪ ಹಾಗು ಆರಕಕ್ಕೆ ದಿನದಿಂದ ದಿನಕ್ಕೆ ಬೇಡಿಕೆ ಜಾಸ್ತಿಯಾಗುತ್ತಲೇ ಇದೆ. ಇದರಿಂದ ನಮ್ಮ ಗೋ ಶಾಲೆಯ ಆದಾಯ ತಿಂಗಳಿಗೆ ತುಪ್ಪದಿಂದ 1,00000/- ಹಾಗು ಆರಕರಿಂದ 50000/- ರೂಗಳಾಗಿದ್ದು, ಹಾಲು ಉತ್ಪಾದನೆ ಮತ್ತು ಆರಕವನ್ನು ತಯಾರು ಮಾಡುವಲ್ಲಿ ಯಶಸ್ವಿಯಾಗಿದ್ದು ಗೋವುಗಳ ನಿರ್ವಹಣೆಯನ್ನು ಆರಕದಿಂದ ಬಂದಂತಹ ಹಣದಿಂದಲೇ ನಿರ್ವಹಿಸಲಾಗುತ್ತಿದೆ ಎನ್ನುತ್ತಾರೆ ಗೋ ಶಾಲೆಯ ಮಾಲಿಕ ಆನಂದ್.
ಆನಂದ್ ರವರ ಸಂಪರ್ಕಕ್ಕೆ ದೂರವಾಣಿ ಸಂಖ್ಯೆ: 9113608576/9448204831