ಶಿವಮೊಗ್ಗ, ಏಪ್ರಿಲ್, 13 ದೇಶವನ್ನು ಬದಲಿಸುವ ಶಕ್ತಿ ನಮ್ಮ ಮನಸ್ಸಿಗಿದ್ದು, ನಾವೆಲ್ಲ ಬದಲಾವಣೆಯನ್ನು ತರುವಲ್ಲಿ ಆಸಕ್ತಿ ವಹಿಸಬೇಕು. ಪ್ರತಿ ಒಂದು ಮತವೂ ಅಮೂಲ್ಯವಾಗಿದ್ದು ಎಲ್ಲ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಮನೋವೈದ್ಯೆ ಹಾಗೂ ಜಿಲ್ಲಾ ಚುನಾವಣಾ ಐಕಾನ್ ಡಾ.ಶುಭ್ರತ ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಸ್ವೀಪ್ ಮತ್ತು ಶಿವಮೊಗ್ಗ ನಗರ ಮಹಿಳಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಇಂದು ನಗರ ಮಹಿಳೆಯರ ಸಂಘಗಳ ಪ್ರತಿನಿಧಿಗಳಿಗೆ ಚುನಾವಣಾ ಆಯೋಗದ ಕರ್ತವ್ಯಗಳು, ಹೊಣೆಗಾರಿಕೆ, ನೀತಿ ಸಂಹಿತೆ ಮುಖ್ಯಾಂಶಗಳ ಕುರಿತು ಆಯೋಜಿಸಲಾಗಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು.
ಒಂದು ಮತ ಕೂಡ ನಿರ್ಣಾಯಕ ಪಾತ್ರ ವಹಿಸುತ್ತದೆ. ಮತದಾನದ ಮಹತ್ವ ಮತ್ತು ಒಂದು ಮತಕ್ಕಿರುವ ಶಕ್ತಿಯನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ಒಂದು ಹೆಣ್ಣಿಗೆ ಸಾಕ್ಷರತೆ ನೀಡಿದರೆ ಇಡೀ ಕುಟುಂಬವನ್ನು ಸಾಕ್ಷರನ್ನಾಗಿ ಮಾಡುವ ಶಕ್ತಿ ಆಕೆಗಿದೆ. ಅದೇ ರೀತಿ ಒಬ್ಬ ಮಹಿಳೆಗೆ ಚುನಾವಣಾ ಅರಿವು ಮೂಡಿಸಿದಲ್ಲಿ ಇಡೀ ಕುಟುಂಬಕ್ಕೆ ಆಕೆ ಅರಿವನ್ನು ಮೂಡಿಸುತ್ತಾಳೆ ಎಂದರು.
ಮತದಾನ ಮಾಡಿದರೆ ನಾವು ನಮ್ಮ ನಾಯಕರನ್ನು ಪ್ರಶ್ನಿಸುವ ನೈತಿಕತೆ ಇರುತ್ತದೆ. ಆದ್ದರಿಂದ ಮತದಾನ ಮಾಡಿ ಉತ್ತಮ ಮತ್ತು ಸಮರ್ಪಕ ನಾಯಕನನ್ನು ಆರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ನಮ್ಮ ಮತ ಶಕ್ತಿಯನ್ನು ಬದಲಾವಣೆಗಾಗಿ ಬಳಸಿಕೊಳ್ಳೋಣ ಎಂದರು. ಇದೇ ವೇಳೆ ಅವರು ಮತದಾನ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿ, ಮತದಾನದ ಮಹತ್ವದ ಬಗ್ಗೆ ತಿಳಿಸಿ, ಮತದಾನದ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗವು ಮತದಾನ ಜಾಗೃತಿ ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿದೆ. 80 ವರ್ಷ ಮೀರಿದವರು, ವಿಕಲಚೇತನರಿಗೆ ಪೋಸ್ಟಲ್ ಬ್ಯಾಲಟ್‍ಗೆ ಅವಕಾಶ ಕಲ್ಪಿಸಲಾಗಿದೆ ಎಂದ ಅವರು ಎಲ್ಲರೂ ಕಡ್ಡಾಯವಾಗಿ ತಮ್ಮ ಮತ ಕೇಂದ್ರಗಳಿಗೆ ತೆರಳಿ ಮತದಾನ ಮಾಡುವಂತೆ ತಿಳಿಸಿದರು. ಹಾಗೂ ಮಹಿಳಾ ಸಂಘಗಳ ಪ್ರತಿನಿಧಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡು ಚುನಾವಣೆ ಕುರಿತು ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಸೂಕ್ತ ಸಲಹೆ, ಸೂಚನೆಗಳನ್ನು ನೀಡಿದರು.
ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಎಸ್ ಲೋಖಂಡೆ ಮಾತನಾಡಿ, ಸಾರ್ವಜನಿಕರು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅಥವಾ ಇತರರ ಕುರಿತು ದೂರು ನೀಡುವ ಮೂಲಕ ಪಾರದರ್ಶಕ ಚುನಾವಣೆಗೆ ಸಹಕರಿಸಬಹುದು. ಆಯೋಗ ಬಿಡುಗಡೆ ಮಾಡಿರುವ ಸಿ-ವಿಜಿಲ್ ಆ್ಯಪ್‍ನ್ನು ತಮ್ಮ ಮೊಬೈಲ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಚುನಾವಣಾ ಅಕ್ರಮಗಳ ಕುರಿತು ಛಾಯಾಚಿತ್ರ ಅಥವಾ ವಿಡಿಯೋವನ್ನು ಕಳುಹಿಸಬಹುದು. ದೂರುದಾರರ ವಿಳಾಸವನ್ನು ಗೌಪ್ಯವಾಗಿಡಲಾಗುವುದು ಎಂದು ಮಾಹಿತಿ ನೀಡಿದರು.
ಸ್ವೀಪ್ ಉಪ ನೋಡಲ್ ಅಧಿಕಾರಿ ನವೀದ್ ಪರ್ವೇಜ್ ಮಹಿಳಾ ಪ್ರತಿನಿಧಿಗಳಿಗೆ ಚುನಾವಣಾ ಆಯೋಗದ ಕರ್ತವ್ಯಗಳು, ನೀತಿ ಸಂಹಿತೆ ಮುಖ್ಯಾಂಗಳು, ಸಿವಿಜಿಲ್ ಆ್ಯಪ್, ವೋಟರ್ ಹೆಲ್ಪ್‍ಲೈನ್, ಎನ್‍ವಿಎಸ್‍ಪಿ ಪೋರ್ಟಲ್ ಬಳಕೆ ಕುರಿತು ಮಾಹಿತಿ ನೀಡಿದರು.
(ಫೋಟೊ ಇದೆ)
ಶಿವಮೊಗ್ಗ, ಏಪ್ರಿಲ್, 13(ಕರ್ನಾಟಕ ವಾರ್ತೆ)
ದೇಶವನ್ನು ಬದಲಿಸುವ ಶಕ್ತಿ ನಮ್ಮ ಮನಸ್ಸಿಗಿದ್ದು, ನಾವೆಲ್ಲ ಬದಲಾವಣೆಯನ್ನು ತರುವಲ್ಲಿ ಆಸಕ್ತಿ ವಹಿಸಬೇಕು. ಪ್ರತಿ ಒಂದು ಮತವೂ ಅಮೂಲ್ಯವಾಗಿದ್ದು ಎಲ್ಲ ಅರ್ಹ ಮತದಾರರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಮನೋವೈದ್ಯೆ ಹಾಗೂ ಜಿಲ್ಲಾ ಚುನಾವಣಾ ಐಕಾನ್ ಡಾ.ಶುಭ್ರತ ತಿಳಿಸಿದರು.