ಜನಸಾಮಾನ್ಯರು ಮತ್ತು ವಾಣಿಜ್ಯೋದ್ಯಮಿಗಳಿಗೆ ದಿನನಿತ್ಯದ ಹಣಕಾಸಿನ ಚಿಲ್ಲರೆ ವ್ಯಾಪಾರ-ವಹಿವಾಟು ಅಗತ್ಯವಾಗಿ ನಡೆಯುವ ಕಾರ್ಯವಾಗಿರುತ್ತದೆ. ಚಿಲ್ಲರೆ ಅಭಾವದಿಂದ ಹಲವು ಸಮಸ್ಯೆಗಳು ಉದ್ಭವವಾಗುತ್ತಿವೆ. ಮುಖ್ಯವಾಗಿ ರೂ.10 ಮತ್ತು ರೂ. 20 ನೋಟುಗಳ ಕೊರತೆ ಎದ್ದುಕಾಣುತ್ತಿದೆ. ಕೆಲವೇ ಬ್ಯಾಂಕುಗಳಲ್ಲಿ 10 ರೂಪಾಯಿ ನೋಟುಗಳ ಮುದ್ರಣವಿಲ್ಲ ಎಂದು ಹೇಳುತ್ತಾ 10 ರೂ.ಗಳ ಮತ್ತು 20.00 ರೂಗಳ ನಾಣ್ಯಗಳನ್ನು ಸ್ವಲ್ಪ ಮಟ್ಟಿಗೆ ನೀಡುತ್ತಾರೆ. ರೂ.10 ಮತ್ತು ರೂ.20 ನೋಟುಗಳು ಹೆಚ್ಚು ಚಲಾವಣೆಯಲ್ಲಿ ಇಲ್ಲದ ಕಾರಣ ಗ್ರಾಹಕರು ರೂ. 10 ಮತ್ತು ರೂ.20 ನಾಣ್ಯಗಳನ್ನು ಕೊಟ್ಟರೆ ನಿರಾಕರಿಸುತ್ತಾರೆ ಹಾಗೂ ನೋಟು ಕೊಡುವಂತೆ ಬೇಡಿಕೆ ಮಾಡುತ್ತಾರೆ.
ಆದ್ದರಿಂದ ದಿನನಿತ್ಯದ ವ್ಯವಹಾರದಲ್ಲಿ ಜನಸಾಮಾನ್ಯ ಗ್ರಾಹಕರು ರೂ.10 ಮತ್ತು 20.00 ರೂ.ಗಳ ನಾಣ್ಯಗಳನ್ನು ಸ್ವೀಕರಿಸುವಂತೆ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿ ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಹಾಗೂ ಸಾರ್ವಜನಿಕರೊಂದಿಗೆ ಹಣಕಾಸು ವ್ಯವಹಾರ ನಡೆಸುತ್ತಿರುವ ಬ್ಯಾಂಕುಗಳು/ಹಣಕಾಸು ಸಂಸ್ಥೆಗಳಿಗೆ ಮಾದ್ಯಮದ ಮೂಲಕ ಅರಿವು ಮೂಡಿಸುವ ಕಾರ್ಯ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಪ್ರಕಟಣೆಯಲ್ಲಿ ಕೋರುತ್ತದೆ.