69 ವರ್ಷದ ವೃದ್ಧನೋರ್ವ 28 ನೇ ತಾರೀಖಿನಂದು ತಡರಾತ್ರಿ ಉಸಿರಾಟದ ತೊಂದರೆ ಹೇಳಿಕೊಂಡು ನಗರದ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ ಅವರ ಗಂಟಲಿನ ದ್ರವ ತಕ್ಷಣ ಪಡೆದುಕೊಂಡು ಪರೀಕ್ಷೆಗೆ ಕಳುಹಿಸಲಾಗಿದೆ. ಕೋವಿಂದ್_19 ಇರುವುದು 29ನೇ ತಾರೀಕು ತಡರಾತ್ರಿ ದೃಡಪಟ್ಟಿದೆ ತಕ್ಷಣಕ್ಕೆ ಪ್ರಥಮ ಸಂಪರ್ಕದಲ್ಲಿ ಇರುವಂತಹ 9 ಜನರನ್ನು ಕೂಡ ಚಿಗಟೇರಿ ಜನರಲ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲ್ಪಟ್ಟಿದೆ.
ಎರಡನೇ ಪ್ರಕರಣ 38 ವರ್ಷದ ಮಹಿಳೆ ಸ್ಟಾಪ್ ನರ್ಸ್ ಇವರಿಗೆ ಕೋವಿಡ್ 19 ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇವರ ಪ್ರಥಮ ಸಂಪರ್ಕದಲ್ಲಿ ಇರುವಂತಹ 25 ಮತ್ತು ದ್ವಿತೀಯ ಸಂಪರ್ಕದಲ್ಲಿ ಇರುವಂತಹ 45 ಜನರನ್ನು ಕೂಡ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲು ಜಿಲ್ಲಾಡಳಿತ ಆದೇಶಿಸಿದೆ.
80 ಜನರನ್ನು ಪ್ರತ್ಯೇಕವಾಗಿ ಇಡಲು ಮೂರು ಲಾಡ್ಜಿಂಗ್ ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ
ಈ ಎಲ್ಲಾ ಜನರನ್ನು ನೋಡಿ ಕೊಳ್ಳುವಂತಹ ವೈದ್ಯರುಗಳು ನರ್ಸ್ ಮತ್ತು ದಾದಿಯೆಂದರೆ ಗಳನ್ನು ಮನೆಗೆ ಹೋಗದಂತೆ ಪ್ರತ್ಯೇಕವಾಗಿ ಇರಿಸಲು ಮತ್ತು ಅವರ ಊಟ ವಸತಿಗಳನ್ನು ಜಿಲ್ಲಾಡಳಿತವೇ ನೋಡಿಕೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ವರದಿ: ತಾರನಾಥ್. ದಾವಣಗೆರೆ