ಶಿವಮೊಗ್ಗ, ಸೆಪ್ಟೆಂಬರ್ 14 : ಮಹಾನಗರಪಾಲಿಕೆ ವತಿಯಿಂದ ನಾಡ ಹಬ್ಬ ದಸರಾ 2022 ಪ್ರಯುಕ್ತ ನಗರದ ಸಾರ್ವಜನಿಕರಿಗೆ ಮಲೆನಾಡಿನ ವಿವಿಧ ಬಗೆಯ ತಿಂಡಿ ತಿನಿಸುಗಳ ಬಗ್ಗೆ ಪರಿಚಯಿಸುವುದು ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲು ಆಹಾರ ದಸರಾ ಸಮಿತಿಯ ಅಧ್ಯಕ್ಷೆ ಆಶಾ ಚಂದ್ರಪ್ಪ ಇವರ ಸೂಚನೆ ಮೇರೆಗೆ ಕೆಳಕಂಡ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಸೆ.24 ರಂದು ಮಧ್ಯಾಹ್ನ 2 ರಿಂದ 3 ಗಂಟೆವರೆಗೆ ಅಡುಗೆ ಮಾಡುವ ಸ್ಪರ್ಧೆ(ಅತ್ತೆ ಸೊಸೆ)ಹಾಗೂ ್ಲ ಸಂಜೆ 4 ರಿಂದ 5 ಗಂಟೆವರೆಗೆ ಅಡುಗೆ ಮಾಡುವ ಸ್ಪರ್ಧೆಯು (ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ) ನಗರದ ನಿಜಲಿಂಗಪ್ಪ ಸಮುದಾಯ ಭವನದಲ್ಲಿ ನಡೆಯಲಿದೆ. ಸೆ.27 ರಂದು ಬೆಳಿಗ್ಗೆ 10.30 ಗಂಟೆಗೆ ಒಂದು ನಿಮಿಷದಲ್ಲಿ ಸೇಬು ಹಣ್ಣು ತಿನ್ನುವ ಸ್ಪರ್ಧೆ(ಮಹಿಳಾ ಶಿಕ್ಷಕಿಯರಿಗೆ) ಹಾಗೂ ಮಧ್ಯಾಹ್ನ 12 ಗಂಟೆಗೆ ಒಂದು ನಿಮಿಷದಲ್ಲಿ ಮುದ್ದೆ ಬಸ್ಸಾರು ತಿನ್ನುವ ಸ್ಪರ್ಧೆ ಸಾರ್ವಜನಿಕರಿಗೆ(ಪುರುಷ ಮತ್ತು ಮಹಿಳೆಯರಿಗೆ) ಶಿವಪ್ಪನಾಯಕ ವೃತ್ತ, ಗಾಂಧಿಬಜಾರ್ ಶಿವಮೊಗ್ಗ ಇಲ್ಲಿ ನಡೆಯಲಿದೆ. ಸೆಪ್ಟೆಂಬರ್ 30 ರಿಂದ ಅಕ್ಟೋಬರ್ 05 ರವರೆಗೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ 30 ಸ್ಟಾಲ್‍ಗಳಲ್ಲಿ ಸಾಂಪ್ರದಾಯಿಕ ವಿವಿಧ ರೀತಿಯ ವಿಶಿಷ್ಟ ಅಡುಗೆಗಳ ತಯಾರಿಕೆ ಮತ್ತು ತಿನಿಸು ಅಂಗಳ-ಆಹಾರ ಮೇಳವನ್ನು ವಿನೋಬನಗರದ ಫ್ರೀಡಂ ಪಾರ್ಕ್‍ನಲ್ಲಿ ಆಯೋಜಿಸಲಾಗಿದೆ ಎಂದು ಪಾಲಿಕೆ ಆಹಾರ ದಸರಾ ಸಮಿತಿ ಅಧ್ಯಕ್ಷರು ತಿಳಿಸಿದ್ದಾರೆ.