ಶಿವಮೊಗ್ಗ, ಫೆಬ್ರವರಿ 03 : ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕರ್ನಾಟಕ ಹಾಗೂ ಹೊರರಾಜ್ಯಗಳ ಕನ್ನಡ ಬರಹಗಾರರಿಗಾಗಿ ಮಾರ್ಚ್ ಮಾಹೆಯಲ್ಲಿ ಮೂರು ದಿನಗಳ ದಕ್ಷಿಣ ಭಾರತ ಮಟ್ಟದ ಕನ್ನಡ ಕಾವ್ಯ ಕಮ್ಮಟವನ್ನು ಕಾಸರಗೋಡಿನಲ್ಲಿ ಏರ್ಪಡಿಸಲು ಉದ್ದೇಶಿಸಿದೆ.
ದಕ್ಷಿಣ ಭಾರತ(ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ ಮತ್ತು ಕೇರಳ)ದಲ್ಲಿ ಕನ್ನಡ ಕಾವ್ಯ ರಚನೆಯಲ್ಲಿ ತೊಡಗಿರುವ 20ರಿಂದ 40ವರ್ಷ ವಯೋಮಿತಿಯೊಳಗಿನ ಅರ್ಹ ಬರಹಗಾರರ ತಮ್ಮ ಪ್ರಸ್ತಾವನೆಯನ್ನು ಫೆಬ್ರವರಿ 05ರೊಳಗಾಗಿ ಸಲ್ಲಿಸಬಹುದಾಗಿದೆ. ಆಸಕ್ತರು ಮಾಹಿತಿಗಾಗಿ ಕರಿಯಪ್ಪ ಎನ್., ರಿಜಿಸ್ಟ್ರಾರ್, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-560002 ವಿಳಾಸಕ್ಕೆ ಸಲ್ಲಿಸುವಂತೆ ಅಕಾಡೆಮಿಯ ಪ್ರಕಟಣೆಯಲ್ಲಿ ತಿಳಿಸಿದೆ.
