ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ “ತೋಟಗಾರಿಕಾ ಬೆಳೆಗಳಲ್ಲಿ ನರ್ಸರಿ ತಾಂತ್ರಿಕತೆಗಳು (Nursery Techniques in Horticultural Crops) ಕುರಿತ 25 ದಿನಗಳ ವಸತಿಯುಕ್ತ ಕೌಶಲ್ಯಾಭಿವೃದ್ಧಿ ವೃತ್ತಿಪರ ತರಬೇತಿ ಕಾರ್ಯಕ್ರಮವನ್ನು ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ದಿನಾಂಕ 23-02-2022ರೊಳಗೆ ದೂರವಾಣಿ ಮೂಲಕ ಅಥವಾ ಖುದ್ದಾಗಿ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ ಹೆಸರು ನೊಂದಾಯಿಸಬಹುದಾಗಿದೆ.

ಈ ತರಬೇತಿಯಲ್ಲಿ ಸಸಿಗಳ ಉತ್ಪಾದನೆ, ಮುಖ್ಯ ತೋಟಗಾರಿಕೆ ಬೆಳೆಗಳ ಸಸಿಗಳನ್ನು, ಹೂವಿನ ಸಸಿಗಳನ್ನು ಕಸಿ ಮಾಡುವ ಬಗ್ಗೆ ಪ್ರ್ರಾಯೋಗಿಕವಾಗಿ ತರಬೇತಿ ನೀಡಲಾಗುವುದು. ಅಲ್ಲದೆ, ನೆರಳು ಮನೆ, ಹಸಿರು ಮನೆಗಳಲ್ಲಿ ಸಸಿಗಳ ಉತ್ಪಾದನೆ ಕುರಿತು ಮಾಹಿತಿ ನೀಡಲಾಗುವುದು.

ಸೂಚನೆ:

  1. ಮೊದಲು ನೊಂದಾಯಿಸಿದ 30 ಜನರಿಗೆ ಮಾತ್ರ ಅವಕಾಶವಿರುತ್ತದೆ.
  2. ತರಬೇತಿಗೆ ಬರುವಾಗ ಕಡ್ಡಾಯವಾಗಿ ನಿಮ್ಮ ಆಧಾರ್ ಕಾರ್ಡ್ ತರಬೇಕು.
  3. ವಯಸ್ಸು 18 ರಿಂದ 35 ವರ್ಷದೊಳಗೆ ಇರಬೇಕು.

ಸಂಪರ್ಕಿಸುವ ವಿಳಾಸ:
ಕು|| ಸ್ಮಿತ ಜಿ. ಬಿ.
ವಿಜ್ಞಾನಿ (ತೋಟಗಾರಿಕೆ)
ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗ
ಮೊಬೈಲ್ : 63609 02731

error: Content is protected !!