ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ತುಂಗಾ ನದಿ ತೀರದಲ್ಲಿ ರಾಮೇಶ್ವರ ದೇವರ ಉತ್ಸವ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ವತಿಯಿಂದ ಗಿರಿಜನ ಉತ್ಸವ ಆಯೋಜಿಸಲಾಗಿತ್ತು ಹಾಗೂ ಅಪರೂಪದ ಜಾನಪದ ಕಲಾವಿದರು ತಮ್ಮ ಕಲಾ ಪ್ರದರ್ಶನ ನೀಡಿದರು.ಕಾರ್ಯಕ್ರಮಗಳು   ಆಟಗಳು ಬುಡಕಟ್ಟು ಸಮುದಾಯದ ಕಲಾವಿದರು ತಮ್ಮ ಕಲಾ ಪ್ರದರ್ಶನ ನೀಡಿದರು  ಕುಣಿತ, ಡೊಳ್ಳು ಕುಣಿತ, ಪುಗಡಿ ನೃತ್ಯ, ವೀರಗಾಸೆ, ಕಾಸ ಬೇಡರ ಕುಣಿತ, ವೀರಗಾಸೆ, ಯಕ್ಷಗಾನ, ಸಿಡಿಮದ್ದುಗಳ ಪ್ರದರ್ಶನ ಜನಮನ ಸೆಳೆಯಿತು. ವನವಾಸಿಗಳು ಮತ್ತು ಗಿರಿಜನರ ಸಾಂಪ್ರದಾಯಿಕ ಪ್ರದರ್ಶನ ಕಲೆಗಳು ಮತ್ತು ಆರಾಧನಾ ಕಲೆಗಳು ಆಕರ್ಷಿಸಿದವು ಮೆರವಣಿಗೆಯಲ್ಲಿ ಗಾರುಡಿಗೊಂಬೆ , ತಟ್ಟಿರಾಯ, ಕೀಲುಕುದುರೆ, ಜಾನಪದ ಲೋಕವನ್ನು ಪರಿಚಯಿಸಿತು.

ಜ್ಞಾನೇಂದ್ರ ಸಚಿವರು ತುಂಗಾ ತೀರದಲ್ಲಿ ಗೃಹಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದ ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿರುವ ಉತ್ಸವ ಜನರಿಗೆ ಜಾನಪದ ಕಲೆಗಳ ಪರಿಚಯ ಮಾಡಿಕೊಡುವುದಲ್ಲದೆ ಆಸಕ್ತಿ ಮೂಡಿಸುತ್ತದೆ ತೆಪ್ಪೋತ್ಸವದ ಸಂದರ್ಭದಲ್ಲಿ ಗಿರಿಜನ ಉತ್ಸವ ಜನಮನ ಸಳೆಯುತ್ತಿದೆ ಎಂದರು


ಸಂದೇಶ ಜವಳಿ ಮಾತನಾಡಿ ಪರ್ವತಶ್ರೇಣಿಯ ವನವಾಸಿಗಳು ಅನಾವರಣಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರ ನೀಡಿ ಉತ್ಸವಕ್ಕೆ ಮೆರಗು ನೀಡಿದೆ ಎಂದರು


ಉಮೇಶ ಸಹಾಯಕ ನಿರ್ದೇಶಕರು ಕನ್ನಡ ಸಂಸ್ಕೃತಿ ಇಲಾಖೆ ಶಿವಮೊಗ್ಗ :ಮಾತನಾಡಿ ತುಂಗಾ ನದಿಯ ತೀರದಲ್ಲಿ ಆಯೋಜಿಸಿರುವುದರಿಂದ ಪ್ರವಾಸೋದ್ಯಮದ ಅಭಿವೃದ್ಧಿ ಸಹಕಾರಿಯಾಗಿದೆ ಸಂಕಷ್ಟದ ಸಂದರ್ಭದಲ್ಲಿ ಸಂಕಷ್ಟದ ಸಂದರ್ಭದಲ್ಲಿ ಕಲಾವಿದರಿಗೆ ಸಹಕರಿಸಿದಂತಹ ಆಗಿದೆ ಬುಡಕಟ್ಟು ಸಮುದಾಯದ ಕಲೆಗಳ ಅನಾವರಣಕ್ಕೆ ಪೂರಕವಾಗಿದೆ ಎಂದರು
ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ಉಪಾಧ್ಯಕ್ಷ ಜಯಪ್ರಕಾಶ್ ಶೆಟ್ಟಿ, ರಾಘವೇಂದ್ರ, ಶಾಂತವೀರ,ಇತರರು.ಹಾಜರಿದ್ದರು.

error: Content is protected !!