ಭಾರತೀಪುರ ತಿರುವು ತಪ್ಪಿಸಲು ಅತ್ಯಾಧುನಿಕ ಮೇಲ್ಸೇತುವೆ ನಿರ್ಮಾಣ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ

ಬೆಂಗಳೂರು, ಮಾರ್ಚ್ 28: ಹಲವು ಅಪಘಾತ ಗಳಿಗೆ ಹಾಗೂ ಸಾವು ನೋವುಗಳಿಗೆ ಕಾರಣವಾಗಿದ್ದ ,  ತೀರ್ಥಹಳ್ಳಿ-ಶಿವಮೊಗ್ಗ  ರಾಷ್ಟೀಯ ಹೆದ್ದಾರಿ ಯಲ್ಲಿ ಬರುವ, ಭಾರತೀಪುರ ಹೇರ್ ಪಿನ್ ತಿರುವನ್ನು ತಪ್ಪಿಸಿ, ಅತ್ಯಾಧುನಿಕ ಮೇಲ್ಸುತೇವೆ  ನಿರ್ಮಾಣ ಕಾಮಗಾರಿಗೆ , ಕೇಂದ್ರ ಸರಕಾರದ ಹೆದ್ದಾರಿ ಮಂತ್ರಾಲಯ, ಅನುಮತಿ ನೀಡಿದ್ದು,  ೫೮ ಕೋಟಿ ರೂಪಾಯಿಗಳ ವೆಚ್ಚದ ಈ ಕಾಮಗಾರಿಯನ್ನು ಸದ್ಯದಲ್ಲಿಯೇ, ಎತ್ತಿಕೊಳ್ಳಲಾಗುವುದು,ಎಂದು ಕರ್ನಾಟಕ ಗೃಹ ಸಚಿವ, ಶ್ರೀ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.  
ಮೇಲ್ಸೇತುವೆ ನಿರ್ಮಾಣದ ಅಗತ್ಯದ ಕುರಿತು, ಈ ಹಿಂದೆ ಸಲ್ಲಿಸಿದ ಮನವಿಗೆ ಸ್ಪಂದಿಸಿ ಅನುದಾನ ಬಿಡುಗಡೆಯಾಗಿದ್ದು, ಶಿವಮೊಗ್ಗ ಲೋಕಸಭಾ ಸದಸ್ಯ ಬಿ ವೈ ರಾಘವೇಂದ್ರ ರವರೂ ಸಹ ಮೇಲ್ಸೇತುವೆ ಅಗತ್ಯದ ಬಗ್ಗೆ ಕೇಂದ್ರ ಸಚಿವರ ಜತೆ ಸಮಾಲೋಚಿಸಿದ್ದರು, ಹಾಗೂ ಯೋಜನೆಯನ್ನು ಕಾರ್ಯಗತಗೊಳಿಸಲು ಕೋರಿದ್ದರು,  ಎಂದೂ ಗೃಹ ಸಚಿವರು ಹೇಳಿದ್ದಾರೆ. 
ಭಾರತೀಪುರ ಮೇಲ್ಸೇತುವೆ ನಿರ್ಮಾಣ ಕಾಮಗಾರಿ, ಅಲ್ಲದೆ, ಕೇಂದ್ರ ಹೆದ್ದಾರಿ ಮಂತ್ರಲಾಯ,  ತೀರ್ಥಹಳ್ಳಿ ತಾಲೂಕು ಮೇಗರವಳ್ಳಿಯಿಂದ, ಆಗುಂಬೆ ವರೆಗೆ, ೧೪. ೭೭ ಕಿಲೊಮೀಟರ್  ರಾಷ್ಟ್ರೀಯ ಹೆದ್ದಾರಿ  ೧೬೯-A ಗೆ ದ್ವಿಪಥ ಪಿ ಎಸ, (೧೦ ಮೀಟರ್) ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲು  ರೂ ೯೬. ೨೦ ಕೋಟಿ ಗೆ  ಅನುಮೋದನೆ ಸಹ ನೀಡಲಾಗಿದ್ದು, ಕಾಮಗಾರಿ ಚುರುಕಿಗೆ, ಸಹಾಯವಾಗುವುದು, ಎಂದೂ ಸಚಿವರು ತಿಳಿಸಿದ್ದಾರೆ. 
ಇಂದಿಲ್ಲಿ, ಸುದ್ದಿಗಾರರಿಗೆ ಮಾಹಿತಿ ನೀಡಿದ ಸಚಿವರು,  ಈ ಎರಡೂ ಕಾಮಗಾರಿಗಳಿಗೆ,  ಅನುಮತಿ ನೀಡಿ ಅನುದಾನ ಬಿಡುಗಡೆ ಮಾಡಿರುವ, ನೆಚ್ಚಿನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಜಿ, ಕೇಂದ್ರ ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿಯವರಿಗೆ, ಹಾಗೂ ಶಿವಮೊಗ್ಗ ಲೋಕಸಭಾ ಸದಸ್ಯ, ಶ್ರೀ ಬಿ ವೈ ರಾಘವೇಂದ್ರ, ಅವರಿಗೆ, ಧನ್ಯವಾದ ತಿಳಿಸಿದ್ದಾರೆ.

error: Content is protected !!