ತೀಕ್ಣವಾದ ಸಾಹಿತ್ಯದಿಂದ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಪ್ರಯತ್ನ ಮಾಡಿದ ವಚನಕಾರರ ಸಾಲಿನಲ್ಲಿ ಹಡಪದ ಅಪ್ಪಣ್ಣ ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾನತೆಗಾಗಿ ಹೋರಾಡಿ ಹಲವರು ಜೀವನ ಸವೆಸಿ ಹೋದ ಮೇಲೆ ಇಂದು ನಾವು ಸಮಾನತೆ, ಅಸ್ಪøಶ್ಯತೆಯ ಕುರಿರು ಮಾತನಾಡುವುದು ಕಷ್ಟದ ಕೆಲಸವಲ್ಲ. ಆದರೆ 12ನೇ ಶತಮಾನದಲ್ಲಿ ವಚನಕಾರರು ಹೋರಾಟ ಹಾಗೂ ಸಾಹಿತ್ಯದ ಕ್ರಾಂತಿಯನ್ನು ನಾವು ಪ್ರಶಂಸಿಲೇ ಬೇಕು ಎಂದು ಅವರು ಹೇಳಿದರು.
ಅನುಭವ ಮಂಟಪದ ಕಾರ್ಯಕಲಾಪಗಳಲ್ಲಿ ಬಸವಣ್ಣನವರ ಬೆನ್ನೆಲುಬಾಗಿ ನಿಂತವರು ಹಡಪದ ಅಪ್ಪಣ್ಣ ಅವರಾಗಿದ್ದರು. ಆ ಕಾರಣದಿಂದಲೇ ಅವರ P್ಫ್ರಂತಿಯಲ್ಲಿ ಯಶಸ್ಸು ಕಂಡರು. ವಚನ ಕ್ರಾಂತಿಯ 19 ವರ್ಷಗಳ ಕಾಲದ ಬೆಳವಣಿಗೆ ಸಾವಿರಾರು ವರ್ಷಗಳ ಕಾಲ ಉಳಿಯುತ್ತದೆ ಎಂದರೆ ಅಂದಿನ ಕ್ರಾಂತಿಯ ತೀವ್ರತೆಯನ್ನು ನಾವು ಅರಿಯ ಬೇಕು. ಹಾಗೂ ಆ ಚಳುವಳಿಯಿಂದ ನಾವು ಕಲಿಯುವಂತಹ ಹಲವಾರು ವಿಷಯಗಳ ಬಗ್ಗೆ ಗಮನ ಹರಿಸಬೇಕು ಎಂದು ಅವರು ಹೇಳಿದರು.
ಹಡಪದ ಅಪ್ಪಣ್ಣ ಹಾಗೂ ಬಸವಣ್ಣ ಸರಿಸಮಾನವಾದ ಚಿಂತಕರು. ಅವರ ವಚನಗಳಲ್ಲಿ ಸಾಮ್ಯತೆ ಇರುವುದನ್ನು ನಾವು ಗಮನಿಸಬಹುದು. ಅರಿಯದ ಭಾಷೆ, ಆಚರಣೆಗಳಿದ್ದ ಕಾಲದಲ್ಲಿ ಅವುಗಳನ್ನು ತ್ಯಜಿಸಿ ಶರಣರಾಗಿ ಜನರಿಗೆ ಸರಳ ಸಂದೇಶಗಳನ್ನು ಸಾರುತ್ತ ಆಧ್ಯಾತ್ಮವನ್ನು ಬಿತ್ತಿದವರು ಶರಣರು ಎಂದು ಅವರು ಹೇಳಿದರು.
ಹಿಂದುಳಿದ ವರ್ಗಗಳಿಗೆ ಸಂವಿಧಾನದಲ್ಲಿ ವಿಶೇಷ ಸವಲತ್ತಿಗೆ ಒಂದು ಅಡಿಪಾಯವಾಗಿ ನಿಂತಿರುವುದು ವಚನ ಚಳುವಳಿ. ಒಂದು ಕಾಲದಲ್ಲಿ ಹಿಂದುಳಿದ ಜನಾಂಗಗಳು ಎದುರು ಬಂದರೆ ಅಪಶಕನ ಎನ್ನುತ್ತಿದ್ದ ಜನರು ಇಂದು ಸೌಲಭ್ಯಗಳಿಗಾಗಿ ತಮ್ಮನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿ ಎಂದು ಬೇಡಿಕೆ ಇಡುವ ಕಾಲದ ಬದಲಾವಣೆಯಲ್ಲಿ ವಚನ ಕ್ರಾಂತಿಯ ಪಾತ್ರವಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಇಂದು ಪ್ರಪಂಚದ 25ಕ್ಕೂ ಹೆಚ್ಚು ಭಾಷೆಗಳಿಗೆ ವಚನಗಳುಗಳು ಭಾವಾನುವಾದಗೊಳ್ಳುತ್ತಿವೆ. ಈ ನಿಟ್ಟಿನಲ್ಲಿ ವಚನಗಳ ಮಹತ್ವವನ್ನು ವಿಶ್ವ ಅರಿಯುವತ್ತ ಮುಖ ಮಾಡುತ್ತಿದೆ. ಇದು ವಚನಕಾರರಿಗೆ ಸಲ್ಲುತ್ತಿರುವ ನಿಜವಾದ ಗೌರವ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜೀವ ವೈವಿದ್ಯ ಮಂಡಳಿ ಅಧ್ಯಕ್ಷ ಎಸ್.ಪಿ ಶೇಷಾದ್ರಿ, ಉಪ ಮೇಯರ್ ಚನ್ನಬಸಪ್ಪ, ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಆಧ್ಯಕ್ಷ ಹನುಮಂತಪ್ಪ ಮೇಲಿನ ಹನಸವಾಡಿ, ಸಮಾಜದ ತಾಲ್ಲೂಕು ಅಧ್ಯಕ್ಷ ವೀರಭದ್ರಯ್ಯ ಆಲದಹಳ್ಳಿ ಮುಂತಾದ ಗಣ್ಯರು ಹಾಜರಿದ್ದರು. ಉಪನ್ಯಾಸಕ ಕೆ. ವೀರೇಶ್ ವಚನ ಸಾಹಿತ್ಯದ ಕುರಿತು ಉಪನ್ಯಾಸ ನೀಡಿದರು ಹಾಗೂ ಕೆ.ಎಂ ಮಲ್ಲೇಶಪ್ಪ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು.

error: Content is protected !!