
ಶಿಕಾರಿಪುರ ತಾಲೂಕು ಕಟ್ಟಡ ಕಾರ್ಮಿಕರ ಸಂಘ ಕಾರ್ಮಿಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಕಾರ್ಮಿಕರಿಗೆ ಆರೋಗ್ಯಕ್ಕೆ ಪೂರಕವಾದ ವಿತರಣಾ ಕಾರ್ಯಕ್ರಮವನ್ನು ನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ನಡೆಸಲಾಯಿತು
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮಲೆನಾಡುಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ ಕೆ ಎಸ್ ಗುರುಮೂರ್ತಿ ಮಾತನಾಡಿ ಕಾರ್ಮಿಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯವಂತರಾಗಿ ಉತ್ತಮ ಜೀವನ ನಡೆಸುವ ಚಿಂತಿಸಬೇಕಾಗಿದೆ ಹಾಗೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಗಮನ ಹರಿಸಬೇಕಾದ ಅಗತ್ಯವಿದೆ ಸರ್ಕಾರ ಕಾರ್ಮಿಕರಿಗೂ ಹಾಗೂ ತಮ್ಮ ಮಕ್ಕಳಿಗೂ ವಿವಿಧ ರೀತಿಯ ಸೌಲತ್ತುಗಳನ್ನು ನೀಡಿದ್ದು ಅವುಗಳನ್ನು ಬಳಸಿಕೊಂಡು ತಮ್ಮ ಕುಟುಂಬಗಳನ್ನು ಆರ್ಥಿಕವಾಗಿ ಸದೃಢಗೊಳಿಸಿ ಕೊಳ್ಳುವ ಬಗ್ಗೆ ಚಿಂತಿಸುವ ಅಗತ್ಯವಿದೆ ಈ ಕುರಿತು ಕಾರ್ಮಿಕರು ನಿರ್ಲಕ್ಷ ಮಾಡದೆ ಕಾರ್ಯೋನ್ಮುಖರಾಗಿ ಎಂದು ಕರೆ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭೆಯ ಅಧ್ಯಕ್ಷರಾದ ಲಕ್ಷ್ಮಿ ಮಹಾಲಿಂಗಪ್ಪ ವಹಿಸಿದ್ದರು
ಕಾರ್ಯಕ್ರಮದಲ್ಲಿ ಸ್ಥಾಯಿಸಮಿತಿ ಅಧ್ಯಕ್ಷರಾದ ರೇಣುಕಸ್ವಾಮಿ ಪುರಸಭಾ ಸದಸ್ಯರಾದ ರಮೇಶ್ ಕಾರ್ಮಿಕ ಸಂಘದ ಅಧ್ಯಕ್ಷ ಕೆ ಗಿಡ್ಡಪ್ಪ ಗೌರವಾಧ್ಯಕ್ಷರಾದ ಮಹದೇ ವಾಚಾರ್ ಜಿಲ್ಲಾಧ್ಯಕ್ಷರಾದ ವಾಸುದೇವನ್ ಕಾರ್ಯದರ್ಶಿ ಮುರುಗನ್ ಸಹಕಾರ್ಯದರ್ಶಿ ಕೆ ಭಾಸ್ಕರ್ ಜಿಲ್ಲಾ ಜಿಲ್ಲಾ ಅಲ್ಪಸಂಖ್ಯಾತ ಮಂಡಳಿ ಉಪಾಧ್ಯಕ್ಷರಾದ ಫಯಾಜ್ ಅಹ್ಮದ್ ಗುಡದಯ್ಯ ಸೇರಿದಂತೆ ನೂರಾರು ಕಾರ್ಮಿಕ ಮುಖಂಡರು ಹಾಜರಿದ್ದರು