ಶಿವಮೊಗ್ಗ, ಮಾರ್ಚ್ 20 :
ದಿನಾಂಕ: 22-02-2023 ರಂದು ಎನ್‍ಪಿಪಿಸಿ ಕಾರ್ಯಕ್ರಮದಡಿ ಖಾಲಿ ಇರುವ ಶುಶ್ರೂಷಕಿ ಹಾಗೂ ರಿಹ್ಯಾಬಿಲಿಟೇಷನ್ ವರ್ಕರ್‍ಗಳ ನೇರ ಸಂದರ್ಶನ ಏರ್ಪಡಿಸಲಾಗಿದ್ದು, ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಿ, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಜಿಲ್ಲಾ ಎನ್‍ಸಿಡಿ ಘಟಕ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಶಿವಮೊಗ್ಗ ಇಲ್ಲಿ ಪ್ರಕಟಿಸಲಾಗಿದೆ.
ತಾತ್ಕಾಲಿಕ ಆಯ್ಕೆ ಪಟ್ಟಿ ಕುರಿತು ಏನಾದರೂ ಆಕ್ಷೇಪಣೆ ಇದ್ದಲ್ಲಿ ದಿ: 24-03-2023 ರೊಳಗಾಗಿ ಸಲ್ಲಿಸಬಹುದೆಂದು ಆಯ್ಕೆ ಸಮಿತಿ ಸದಸ್ಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

error: Content is protected !!