ಯೂತ್ ಹಾಸ್ಟೆಲ್ ಅಸೋಶಿಯೇಷನ್ ಆಫ್ ಇಂಡಿಯಾ, ತರುಣೋದಯ ಘಟಕದಿಂದ ಸ್ವಾಮಿ ವಿವೇಕಾನಂದರ 158 ನೇ ಜನ್ಮ ದಿನದ ಅಂಗವಾಗಿ “ರಾಷ್ಟೀಯ ಯುವ ದಿನ” ಆಚರಿಸಲಾಯಿತು.
ಮಥುರಾ ಪ್ಯಾರಡೈಸ್ ನಲ್ಲಿ ಯೂತ್ ಹಾಸ್ಟೆಲ್ ಅಧ್ಯಕ್ಷರಾದ ಶ್ರೀಯುತ ವಾಗೇಶ್ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಧ್ಯಕ್ಷತೆ ವಹಿಸಿ ಯುವ ಹೃದಯ ಹೊಂದಿರುವವರೆಲ್ಲರೂ ಯುವಕರೆ, ವಯಸ್ಸಿನ ಬೇದವಿಲ್ಲ, ಯೂತ್ ಹಾಸ್ಟೆಲ್ ನಲ್ಲಿ ಚಾರಣ ಮಾಡುವವರು ಎಲ್ಲಾ ವಯೋಮಾನದವರು ಇರುತ್ತಾರೆ. ಆರೋಗ್ಯ ಪೂರ್ಣ ಜೀವನಕ್ಕೆ ಚಾರಣ ಸಹಕಾರಿ ಎಂದರು .
ಮಲ್ಲಿಕಾರ್ಜುನ ಕಾನೂರು ಅವರು ಎಲ್ಲರನ್ನು ಸ್ವಾಗತಿಸಿದರು. ಸುಮಾರಾಣಿ. ಕೆ. ಹೆಚ್. ಅವರು ವಿವೇಕಾನಂದರ ಸಾಧನೆ ಮತ್ತು ಅವರ ಸುಭಾಷಿತ ಗಳನ್ನು ಹೇಳುವುದರ ಮೂಲಕ ಅವರ ವಿಚಾರಧಾರೆ ಗಳನ್ನು ನೆನಪಿಸಿಕೊಂಡರು. ದಿಲೀಪ್ ನಾಡಿಗ್ ಅವರು ವಿವೇಕಾನಂದರು ಯುವಜನರಿಗೆ ಹೇಗೆ ತಮ್ಮ ಸಾಧನೆ ಮತ್ತು ಜೀವನ ಶೈಲಿಯ ಮೂಲಕ ಪ್ರೇರಣೆಯಾಗಿದ್ದಾರೆ ಎಂಬುದನ್ನು ವಿವರಿಸಿದರು. ಯೂತ್ ಹಾಸ್ಟೆಲ್ ತರುಣೋದಯದ ಘಟಕದ ಸಂಸ್ಥಾಪಕರು ಮಾಜಿ ರಾಷ್ಟೀಯ ಸದಸ್ಯರೂ ಆದಂತಹ ಅ. ನಾ. ವಿಜಯೇಂದ್ರ ರಾವ್ ಉಪಸ್ಥಿತರಿದ್ದರು. ನಿರ್ದೇಶಕರಾದ ಭಾರತೀ ಗುರುಪಾದಪ್ಪ, ನಾಗರಾಜ್ ಎಂ. ಪಿ. ಭಾಗವಹಿಸಿದ್ದರು. ಎಲ್ಲರೂ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸುವುದರ ಮೂಲಕ ಗೌರವ ಸಲ್ಲಿಸಿದರು. ಕೊನೆಯಲ್ಲಿ ಯೂತ್ ಹಾಸ್ಟೆಲ್ ಕಾರ್ಯದರ್ಶಿ ಸುರೇಶ್ ಕುಮಾರ್ ಎಲ್ಲರನ್ನು ವಂದಿಸಿದರು.