ಶಿವಮೊಗ್ಗ : ಜೂನ್ 15 : ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳವು ಶಿವಮೊಗ್ಗದಲ್ಲಿ ಕರ್ನಾಟಕ ಇನ್‍ಸ್ಟಿಟ್ಯೂಟ್ ಆಫ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿ ಸಂಸ್ಥೆಯ ಮೂಲಕ ಸಹಕಾರ ಸಂಘಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂಧಿಗಳಿಗೆ 6ತಿಂಗಳ ಅವಧಿಯ ದೂರ ಶಿಕ್ಷಣದ ಮೂಲಕ ಡಿಪ್ಲೋಮಾ ಇನ್ ಕೋ-ಆಪರೇಟಿವ್ ಮ್ಯಾನೇಜ್‍ಮೆಂಟ್ ತರಬೇತಿಯನ್ನು ಜುಲೈ ಮಾಹೆಯಿಂದ ಆರಂಭಿಸಲಿದೆ. ಈ ತರಬೇತಿಯನ್ನು ಪಡೆಯಲಿಚ್ಚಿಸುವ ಅರ್ಹ ಸಿಬ್ಬಂಧಿಗಳಿಂದ ಆಹ್ವಾನಿಸಲಾಗಿದೆ.
ದೂರ ಶಿಕ್ಷಣ ಡಿ.ಸಿ.ಎಂ., ತರಬೇತಿಯ ಅರ್ಜಿ ಮತ್ತು ಮಾಹಿತಿ ಪುಸ್ತಕವನ್ನು ಕೆ.ಐ.ಸಿ.ಎಂ. ಶಿವಮೊಗ್ಗ ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ಸಹಕಾರ ಯೂನಿಯನ್‍ಗಳಿಂದ ಪಡೆಯಬಹುದಾಗಿದೆ. ಅರ್ಜಿ ಮತ್ತು ಕೈಪಿಡಿ ಪುಸ್ತಕದ ಶುಲ್ಕ ರೂ.200/-ಗಳನ್ನು ನಗದಾಗಿ ಪಾವತಿಸಿ ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ಸಹಕಾರ ಯೂನಿಯನ್‍ನಲ್ಲಿ ಪಡೆಯಬಹುದಾಗಿದೆ.
ಅಂಚೆಯ ಮೂಲಕ ಅರ್ಜಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ರೂ.10/-ಮೌಲ್ಯದ ಸ್ಟಾಂಪ್ ಅಂಟಿಸಿದ ಸ್ವ-ವಿಳಾಸವಿರುವ ಲಕೋಟೆಯನ್ನು ರೂ.200/-ಗಳ ಡಿ.ಡಿ./ಪೋಸ್ಟಲ್ ಆರ್ಡರ್ ಜೊತೆಗೆ ಲಗತ್ತಿಸಿ, ಪ್ರಾಂಶುಪಾಲರು, ಕೆ.ಐ.ಸಿ.ಎಂ.-ಶಿವಮೊಗ್ಗ ಇವರಿಂದ ಪಡೆದು, ಜುಲೈ 06ರೊಳಗಾಗಿ ಸಲಿಸಬಹುದಾಗಿದೆ.

error: Content is protected !!