ರಾಜ್ಯದಲ್ಲಿ ಒಣ ಬಿಸಿಲ ವಾತಾವರಣ ಹೆಚ್ಚಾಗುತ್ತಿದೆ, ಟೊಮೆಟೊ ಬೆಳೆದ ಭೂಮಿ ಮತ್ತು ಗಿಡಕ್ಕೆ ನೀರಿನ ಕೊರತೆ ಆಗದಂತೆ ಈ ಸನ್ನಿವೇಶದಲ್ಲಿ ನೋಡಿ ಕೊಳ್ಳಬೇಕು. ರೆಂಬೆ ನೆಲಕ್ಕೆ ತಾಗದಂತೆ ಬಿದರಿನ ಆಧಾರ ಕೊಡಬೇಕು. ತ್ರಿಪ್ಸ್ ನುಸಿ ಬಾದೇ ಹತೋಟಿಗೆ ಹಳದಿ ಅಂಟು ಬಲೆ ಎಕರೆ ಪ್ರದೇಶದಲ್ಲಿ 10 ರಷ್ಟು ಹಾಕ ಬೇಕು. ನೆತ್ತಿ ಸುಡು ಮುದಡಿ ರೋಗ ಕಂಡ ತಕ್ಷಣ ರೋಗ ಪೀಡಿತ ಗಿಡ ಕಿತ್ತು ನಾಶ ಮಾಡ ಬೇಕು. ಆರೋಗ್ಯ ಗಿಡ ಉಳಿಸಿ ಕೊಳ್ಳಲು ಬೇವಿನ ಎಣ್ಣೆ 2 ಮಿಲಿ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗಾಗಿ :
ಸಮೀಪದ ರೈತ ಸಂಪರ್ಕ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರ ಭೇಟಿ ಮಾಡಿ ಮಾಹಿತಿ ಪಡೆಯಬಹುದು.
ಜಹೀರ್ ಅಹಮದ್, ಸಸ್ಯ ರೋಗ ತಜ್ಞರು ಕೆ ವಿ ಕೆ. ದೂರವಾಣಿ ಸಂಖ್ಯೆ: +91 98453 00326