ಶಿವಮೊಗ್ಗ. ಜುಲೈ 03 : ಮಳೆ ಅಭಾವದಿಂದಾಗಿ ಶಿವಮೊಗ್ಗ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಗಾಜನೂರು ಆಣೆಕಟ್ಟಿನಲ್ಲಿ ನೀರಿನ ಮಟ್ಟ ಕಡಿಮೆಯಾಗಿದ್ದ ಕಾರಣ ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗುತ್ತಿತ್ತು.

ಇದೀಗ ತುಂಗಾನದಿ ಪಾತ್ರದಲ್ಲಿ ಮಳೆಯಾಗುತ್ತಿರುವುದರಿಂದ ಗಾಜನೂರು ಆಣೆಕಟ್ಟು ತುಂಬಿದ್ದು, ಸಾರ್ವಜನಿಕರಿಗೆ ಜು. 04 ರಿಂದ ಪ್ರತಿ ದಿನ ನೀರು ಪೂರೈಕೆ ಮಾಡಲಾಗುವುದೆಂದು ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

ದಿನನಿತ್ಯದ ನೀರಿನ ಬೇಡಿಕೆಗಳಿಗೆ ಸಮೀಪದಲ್ಲಿರುವ ನೀರಿನ ಮೂಲಗಳಾದ ಬೋರ್‍ವೆಲ್, ತೆರೆದ ಬಾವಿ, ಚಾನಲ್ ಇತ್ಯಾದಿಗಳನ್ನು ಬಳಕೆ ಮಾಡಿ ಪಾಲಿಕೆಯಿಂದ ಸರಬರಾಜಾಗುವ ಶುದ್ಧ ಕುಡಿಯುವ ನೀರನ್ನು ಮಿತವಾಗಿ ಬಳಸುವುದು. ಸರಬರಾಜಾಗುವ ನೀರಿನ ನಳಕ್ಕೆ ನಾನ್ ರಿಟರ್ನ್ ವಾಲ್‍ನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಸಂಪ್ ತುಂಬಿ ನೀರು ಅನವಶ್ಯಕವಾಗಿ ವ್ಯರ್ಥವಾಗುವುದನ್ನು ತಡೆಗಟ್ಟುವುದು. ವಿತರಣಾ ಕೊಳವೆ ಮಾರ್ಗದಲ್ಲಿ ನೀರು ಸೋರುವಿಕೆ ಕಂಡುಬಂದಲ್ಲಿ ಜಲಮಂಡಳಿ ನಿರ್ವಹಣಾ ಉಪವಿಭಾಗದ ದೂ.ಸಂ.: 08182-273096 ಕರೆ ಮಾಡಿ ಗಮನಕ್ಕೆ ತರುವಂತೆ ಮಹಾನಗರ ಪಾಲಿಕೆ ಮಹಾಪೌರರು ಹಾಗೂ ಆಯುಕ್ತರು ಸಾರ್ವಜನಿಕರಿಗೆ ತಿಳಿಸಿರುತ್ತಾರೆ.

error: Content is protected !!