ಶಿವಮೊಗ್ಗ, ಮಾರ್ಚ್ 15: : ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ, ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ, ಪಶು ವೈದ್ಯಕೀಯ ಕಾಲೇಜು, ಕರ್ನಾಟಕ ಪಶು ವೈದ್ಯಕೀಯ ಸಂಘ, ಶಿವಮೊಗ್ಗ ಇವರುಗಳ ಸಹಯೋಗದೊಂದಿಗೆ ಮಾ.19 ರಂದು ಬೆಳಗ್ಗೆ 9-30ಕ್ಕೆ ಶಿವಮೊಗ್ಗದ ನವುಲೆ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಈ ಪ್ರದರ್ಶನದಲ್ಲಿ ಭಾಗವಹಿಸಲು ಒಂದು ವರ್ಷ ವಯಸ್ಸಿಗಿಂತ ಮೇಲ್ಪಟ್ಟ ಶ್ವಾನಗಳಿಗೆ ಮಾತ್ರ ಪ್ರವೇಶ ಇರುತ್ತದೆ. ಗರ್ಭಿಣಿ ಮತ್ತು ಈಸ್ಟಸ್ನಲ್ಲಿರುವ ಶ್ವಾನಗಳಿಗೆ ಪ್ರವೇಶವಿಲ್ಲ. ಸ್ಪರ್ಧೆಗೆ ತಳಿ ವಿಭಾಗದಲ್ಲಿ ಕನಿಷ್ಠ 5 ತಳಿವಾರು ಶ್ವಾನಗಳಿದ್ದಲ್ಲಿ ಮಾತ್ರ ಸ್ಪರ್ಧೆಗೆ ಅವಕಾಶ ನೀಡಲಾಗುವುದು. ಭಾಗವಹಿಸುವ ಎಲ್ಲಾ ಶ್ವಾನಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಸ್ಪರ್ಧೆಯು ತಳಿವಾರು ನಡೆಯಲಿದ್ದು, ಪ್ರತಿ ತಳಿ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಪ್ರತಿ ತಳಿ ವಿಭಾಗದಲ್ಲಿ ಪ್ರಥಮ ಸ್ಪರ್ಧಿಗಳಿಗೆ ಕೊನೆಯಲ್ಲಿ ಚಾಂಪಿಯನ್ ಶ್ವಾನ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು. ಸ್ಪರ್ಧೆಯಲ್ಲಿ ಯಾವುದೇ ಕೌಶಲ್ಯ ಹಾಗೂ ಚಾಕಚಕ್ಯತೆಯ ಪ್ರದರ್ಶನಕ್ಕೆ ಅವಕಾಶವಿಲ್ಲ ಹಾಗೂ ಪರಿಗಣಿಸುವುದಿಲ್ಲ. ಆಯೋಜಕ/ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ. ಪ್ರದರ್ಶನಕ್ಕೆ ಭಾಗವಹಿಸುವ ಶ್ವಾನಗಳ ರಕ್ಷಣೆ ಮಾಲೀಕರ ಜವಾಬ್ದಾರಿಯಾಗಿರುತ್ತದೆ. ತುರ್ತು ಪಶು ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿರುತ್ತದೆ. ಯಾವುದೇ ರೋಗಗ್ರಸ್ಥ ಶ್ವಾನಗಳ ಪ್ರವೇಶ ನಿರ್ಬಂಧಿಸಲಾಗುವುದು.
ಸ್ಪರ್ಧೆಗೆ ನೋಂದಾಯಿಸಿಕೊಳ್ಳು ಮಾ.17 ಕೊನೆಯ ದಿನವಾಗಿದ್ದು, ನೋಂದಣಿ ಶುಲ್ಕ 100.ರೂ ಆಗಿರುತ್ತದೆ, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9844014063/9448318878 /9343464008/ 9449585021/ 9986339515/ 9611948135/ 6362432686 ಗಳನ್ನು ಸಂಪರ್ಕಿಸಬಹುದಾಗಿದೆ.
ವಿಶೇಷ ಸೂಚನೆ: ಅಂತಿಮವಾಗಿ ಚಾಂಪಿಯನ್ ಶ್ವಾನ ಸ್ಪರ್ಧೆಯಲ್ಲಿ ಗೆದ್ದ ಶ್ವಾನಗಳಿಗೆ 1ನೇ, 2ನೇ, ಹಾಗೂ 3ನೇ ಸ್ಥಾನಕ್ಕೆ ನಗದು ಬಹುಮಾನ ನೀಡಲಾಗುವುದು.