ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ೬೪ನೇ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆಯ ಅಂಗವಾಗಿ “ಕನ್ನಡ ಕವಿಗಳ ಕಾವ್ಯೋತ್ಸವ” ಗೀತ, ಸಂಗೀತ , ಚಿತ್ರ ಸಂಗ್ರಮ ಕಾಯ೯ಕ್ರಮವನ್ನು ನಗರದ ಕುಎಂಪು ರಂಗ ಮಂದಿರದಲ್ಲಿ ಆಯೋಜಿಸಲಾಗಿತ್ತು.
ಕಾಯ೯ಕ್ರಮವನ್ನು ಸಹಕಾರಿ ಧುರೀಣ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದ ಆರ್/ಎಂ. ಮಂಜುನಾಥ ಗೌಡ ಕಾಯ೯ಕ್ರಮಕ್ಕೆ ಚಾಲನೆಯನ್ನು ನೀಡಿದರು. ನಂತರ ಮಾತನಾಡಿದ ಅವರು ಈತರಹದ ವೇದಿಕೆಯನ್ನು ನಿಮಾ೯ಣ ಮಾಡಿ ಕಲಾವಿದರನ್ನು ಒಟ್ಟು ಹಾಕಿ ನೋಡುಗರನ್ನು ಹಾಗು ಕೇಳುಗರನ್ನು ಕರೆಸುವುದು ಬಹಳ ಕಷ್ಟದ ಕೆಲಸ. ಈ ತರಹದ ಪ್ರಯತ್ನ ಇನ್ನೂ ಮುಂದಿನ ದಿನಗಳಲ್ಲಿ ಚೆನ್ನಾಗಿ ನಡೆಯಲಿ, ನಿರಂತರವಾಗಿ ಮುನ್ನಡೆಸಿಕೊಂಡು ಹೋಗಿ, ಕನ್ನಡಕ್ಕಾಗಿ ಸಾಕಷ್ಟು ಒಳ್ಳೆಯ ಕಾಯ೯ಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೀರಿ . ರಾಜ್ಯದ ಹೆಸರಾಂತ ಸಾಹಿತಿಗಳ ಕವಿಗಳ ಪರಿಚಯವನ್ನು ಮಾಡಿ ಅವರ ಸಾಹಿತ್ಯವನ್ನು ಜನರಿಗೆ ಮುಟ್ಟಿಸುವ ನಿಮ್ಮ ಪ್ರಯತ್ನ ಚೆನ್ನಾಗಿ ನಡೆಯುತ್ತಾ ಬರುತ್ತಿದೆ.
ಸಾಕಷ್ಟು ಕಲಾವಿದರು ಕಲಾವಿದರ ತಂಡಗಳಿಂದ ಉತ್ತಮವಾದಂತಹ ಹಾಡು ನೃತ್ಯ ರೂಪಕಗಳನ್ನು ನಡೆಸುತ್ತಿರುವುದು ಉತ್ತಮ ಕೆಲಸ. ವಿಷೇಶವಾಗಿ ಕನ್ನಡದ ಸಾಹಿತ್ಯದ ವೈವಸ್ಥೆಗೆ ಸಾಹಿತಿಗಳ ನೆನಪನ್ನು ಮಾಡಿಕೊಡುವ ವ್ಯವಸ್ಥೆಯನ್ನು ಮಾಡಿದ್ದೀರಿ ನಿಮ್ಮಗಳ ಶ್ರಮ ಸಾಥ೯ಕವಾಗಲಿ ಎಂದು ಹೇಳಿದರು.
.
ಸಭಾ ಕಾಯ೯ಕ್ರಮದ ನಂತರ ಗೀತ ಸಂಗೀತ , ,ಚಿತ್ರ ಸಂಗ್ರಮ ಕಾಯ೯ಕ್ರಮ ನಡೆಯಿತು. ಕಾಯ೯ಕ್ರಮದಲ್ಲಿ ರಘುರಾಮ ದೇವಾಡಿಗ ಹಾಗು ಮಹದೇವ ಸ್ವಾಮಿ ಹಾಗು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಜಿಲ್ಲೆಯ ಪದಾಧಿಕಾರಿಗಳು ಭಾಗವಹಿಸಿದ್ದರು.