ಬಸರಿ ಸೊಪ್ಪು ಎಂದರೆ ನಮ್ಮ ರೈತ ಭಾಂಧವರಲ್ಲಿ ಕೌತುಕ ಕಂಡು ಬರಬಹುದು. ಈ ಬಸರಿ ಸೊಪ್ಪು ನಮ್ಮ ಶಿವಮೊಗ್ಗ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆಯ ರಸ್ತೆ ಬದಿಯಲ್ಲಿ ಕಂಡುಬರುತ್ತದೆ. ಈ ಪ್ರದೇಶಗಳಲ್ಲಿ ಪ್ರತೀ 5 ಮರಗಳಲ್ಲಿ 1 ಮರ ಕಂಡು ಬರುವುದೇ ಈ ಕರೀ ಬಸರೀ ಮರ.
ಈ ಬಸರಿ ಮರದಲ್ಲಿ ಹಲವಾರು ವಿಧಗಳಿವೆ. ಇದರಲ್ಲಿರುವಂತಹ ಬಿಳಿ ಬಸರಿ, ಅಶ್ವತ, ಆಲ, ಈ ಮರಗಳೆಲ್ಲವೂ ಕೂಡ ಒಂದೇ ಜಾತಿಗೆ ಸೇರಿದಂತಹವುಗಳು. ಇದರಲ್ಲಿ ಬಹಳ ವಿಷಕಾರಿ ಗಿಡ ಎಂದರೆ ಕರಿಬಸರಿ ಗಿಡ. ಮಳೆಗಾಲದ ಸಮಯದಲ್ಲಿ ರೈತರು ತಮ್ಮ ಕೊಟ್ಟಿಗೆಗೆ ಬೇಲಿ ಹಾಕಲಿಕ್ಕೆ ಈ ಬಸರೀ ಗಿಡವನ್ನು ಕಡಿದು ಸೊಪ್ಪನ್ನು ಕೊಟ್ಟಿಗೆಗೆ ಜಾನುವಾರುಗಳ ಕಾಲು ಬುಡಕ್ಕೆ ಹಾಕುವುದು ಸಹಜ. ಆ ಸಂಧರ್ಭದಲ್ಲಿ ಆ ಕರಿ ಬಸರಿ ಸೊಪ್ಪನ್ನು ತಿಂದು ಸಾಕಷ್ಟು ವಿಷ ಭಾಧೆಗೆ ಒಳಗಾಗಿ ಸಾವಿಗೆ ಕಳೆದ 20 ವರ್ಷಗಳಿಂದ ಸಾಯುತ್ತಲಿದ್ದವು.
ಈ ಕರಿ ಬಸರಿ ಗಿಡದ ವಿಷ ಭಾಧೆ ಪಶುವೈದ್ಯಕೀಯ ಪುಸ್ತಕದಲ್ಲಿ ಇರದೇ ಇದ್ದುದರಿಂದ ಇದನ್ನು ಮೆದುಳಿನ ಕಾಯಿಲೆ ಎಂದು ಊಹೆ ಮಾಡಿ ಚಿಕೆತ್ಸೆಯನ್ನು ಮಾಡಲಾಗುತ್ತಿತ್ತು.ಆದರೆ 1996ರಿಂದ2006 ಇಸವಿಯವರೆಗೆ ನಡೆಸಿದ ಸಂಶೋಧನೆಯ ಪ್ರಕಾರ ಚಿಕೆತ್ಸೆಯನ್ನು ಕಂಡುಹಿಡಿಯಲಾಗಿದೆ.
ಕರಿ ಬಸರಿ ಸೊಪ್ಪನ್ನು ತಿಂದರೆ ಆಗುವ ಪರಿಣಾಮಗಳು: ಜಾನುವಾರುಗಳು ಉದ್ರೇಕಗೊಳ್ಳುವುದು, ಜಾನುವಾರುಗಳು ನಿಲ್ಲದ ಸ್ತಿತಿ ತಲುಪಿ ನೆಲಕ್ಕೆ ಬೀಳುವುದು, ಆಮೇಲೆನಿಂತುಕೊಳ್ಳಲಿಕ್ಕೆ ಆಗದಿರುವುದು ತುಂಬಾ ಒದ್ದಾಡುವುದು.ಮೆದುಳಿನ ಉದ್ರೇಕರಿಂದ ಕಣ್ಣುಗಳು ಕೆಂಪಾಗುವುದು. ಜಾನುವಾರುಗಳು ತನ್ನ ಮೈಯನ್ನು ತಾನು ಕಚ್ಚಿಕೊಳ್ಳುವುದು, ಜಾನುವಾರುಗಳು ಹಗ್ಗವನ್ನು ಕಚ್ಚುವುದು ಹಾಗು ಮಣ್ಣನ್ನು ತಿನ್ನುವುದು ಈ ರೀತಿಯ ಹುಚ್ಚು ಲಕ್ಷಣಗಳನ್ನು ತೋರಿಸುತ್ತದೆ.
ಪಶುವೈದ್ಯಕೀಯ ಮಹಾವಿದ್ಯಾಲಯದ ವೈದ್ಯರಾದ ಡಾ/ಶ್ರೀಧರ ಭಟ್ ಮಾಹಿತಿಯನ್ನು ನೀಡಿ ಈ ಬಸರಿ ಸೊಪ್ಪನ್ನು ತಿಂದ ಜಾನುವಾರುಗಳಿಗೆ ಔಷಧವನ್ನು ಕಂಡು ಹಿಡಿಯಲಾಗಿದೆ. ವೈದ್ಯರು ಬಂದು ಚಿಕಿತ್ಸಯನ್ನು ಮಾಡುವವರೆಗೆ ರೈತರು ಪ್ರಥಮ ಚಿಕಿತ್ಸೆಯನ್ನು ಮಾಡಬೇಕಾಗುತ್ತದೆ. ಜಾನುವಾರು ಈ ಸಮಯದಲ್ಲಿ ಒದ್ದಾಟವನ್ನು ಜಾಸ್ತಿ ಮಾಡುವುದರಿಂದ ಜಾನುವಾರುಗಳಿಗೆ ಮೈಯಲ್ಲಿ ಗಾಯವಾಗುತ್ತದೆ. ಆದ ಕಾರಣ ಸೊಪ್ಪು ಅಥವಾ ಹುಲ್ಲನ್ನು ಕೊಟ್ಟಿಗೆಯಲ್ಲಿ ಹರಡಬೇಕು. ಆದಷ್ಟು ಜಾನುವಾರುಗಳ ಹತ್ತಿರ ಚೂಪಾದ ವಸ್ತುಗಳು ಇರದಂತೆ ನೋಡಿಕೊಳ್ಳಬೇಕು. ಪಶುವೈದ್ಯರು ಬರುವವರೆಗೂ ಜಾನುವಾರುಗಳನ್ನು ಉದ್ರೇಕಗೊಳ್ಳದಂತೆ ನೋಡಿಕೊಳ್ಳಬೇಕು.
ಈ ಬಸರಿ ಸೊಪ್ಪನ್ನು ತಿಂದ ಜಾನುವಾರುಗಳಲ್ಲಿ ಮೆದುಳಿನಲ್ಲಿ ತೀವ್ರ ತರಹದ ರಕ್ತಸ್ರಾವ ಜಾಸ್ತಿಯಾಗಿರುತ್ತದೆ. ಆದ್ದರಿಂದ ಮೆದುಳಿನಲ್ಲಿರುವ ಜೀವಕೋಶಗಳಲಿ ಸೊಪ್ಪಿನಲ್ಲಿರುವ ವಿಷ ವಸ್ತು ಭಾಧೆಯನ್ನು ನೀಡುತ್ತದೆ. ರೈತರು ಮೊದಲು ಕರಿಬಸರಿ ಸೊಪ್ಪನ್ನು ಗುರುತು ಮಾಡಬೇಕು ಹಾಗು ಜಾನುವಾರುಗಳಿಗೆ ಸಿಗದಂತೆ ನೋಡಿಕೊಳ್ಳಬೇಕು. ಹಾಗು ಬಸರಿ ಸೊಪ್ಪನು ್ನಕೊಟ್ಟಿಗಗೆ ಹಾಕಿರುವ ಮತ್ತು ಜಾನುವಾರುಗಳು ತಿಂದಿರುವ ಬಗ್ಗೆ ಮಾಹಿತಿಯನ್ನು ಕೊಟ್ಟರೆ ವೈದ್ಯರು ಅದಕ್ಕೆ ಬೇಕಾಗುವ ಔಷಧಿಯನ್ನು ತರಲು ಅನುಕೂಲವಾದೀತು. ಈ ಶಿವಮೊಗ್ಗ, ಉತ್ತರಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಈ ಬಸರಿ ಸೊಪ್ಪನ್ನು ತಿಂದು ಸಾವಿಗೀಡಾಗುತ್ತಿದ್ದ 2ರಿಂದ 3 ಸಾವಿರ ಜಾನುವಾರುಗಳು ಈ ವಿಷಭಾಧೆಗೆ ಬಲಿಯಾಗುತ್ತಿದ್ದವು, ಆದರೆ ಇಂದು ಆ ಸಮಸ್ಯೆಯಿಂದ ಪರಿಹಾರ ಸಿಕ್ಕಿದೆ. ಎನ್ನುತಾರೆ.