ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಾಲ್ಕು ದಿನಗಳ ಕಾಲ ಪ್ರಸಿದ್ಧವಾದ ಎಳ್ಳಮಾವಾಸ್ಯೆ ಜಾತ್ರೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಪರಿಶಿಷ್ಟ ಸಮುದಾಯಗಳ ಜಾನಪದ ಕಲೆಗಳನ್ನು ಅನಾವರಣಗೊಳಿಸುವ ರಾಜ್ಯ ಮಟ್ಟದ ಜನಪರ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಆಯೋಜಿಸಿದ್ದು ಉತ್ಸವವನ್ನು ಕರ್ನಾಟಕ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಉದ್ಘಾಟಿಸಿದರು
ಜಗ್ಗ ಹಲಗೆ, ಸೋಮನ ಕುಣಿತ, ಪೂಜಾ ಕುಣಿತ, ಹಗಲುವೇಷ, ಚಿಟ್ಟಿಮೇಳ, ನಗಾರಿ, ಡೊಳ್ಳು ಕುಣಿತ, ಕಂಸಾಳೆ ಕೀಲು ಕುದುರೆ, ಗರುಡಿ ಗೊಂಬೆ ಮುಂತಾದ ಕಲೆಗಳ ಭವ್ಯ ಮೆರವಣಿಗೆ ಮತ್ತು ಪ್ರದರ್ಶನವನ್ನು ಕೂಡ ಆಯೋಜಿಸಲಾಗಿತ್ತು, ಜಾತ್ರೆಯ ತೆಪ್ಪೋತ್ಸವದ ಸಂದರ್ಭದಲ್ಲಿ, ಕರ್ನಾಟಕದ ವಿಶಿಷ್ಟ ಜಾನಪದ ಕಲೆಗಳ ಅನಾವರಣ ನಡೆಯಿತು, ಸಹಸ್ರಾರು ಸಂಖ್ಯೆಯಲ್ಲಿ ಜನತೆ ಜಾನಪದದ ರಸದೌತಣವನ್ನು ಸವಿದರು.
ಆರಗ ಜ್ಞಾನೇಂದ್ರ ಗೃಹ ಸಚಿವರು ಕಾರ್ಯಕ್ರಮದಲ್ಲಿ ಮಾತನಾಡಿ ಕರ್ನಾಟಕದ ಜಾನಪದ ಪರಂಪರೆಯನ್ನು ತಲೆಮಾರಿನಿಂದ ತಲೆಮಾರಿಗೆ ತಲುಪಿಸಲು ಇಂತಹ ಕಾರ್ಯಕ್ರಮಗಳು ಪೂರಕವಾಗುತ್ತದೆ
ಗೋವಿಂದ ಸಮಸ್ಯೆ ಮತ್ತೆ ಎದುರಾಗುವ ಸಾಧ್ಯತೆಗಳಿದ್ದು ಅದು ಬಾರದಂತೆ ನಾವು ಕಡ್ಡಾಯ ಮುನ್ನೆಚ್ಚರಿಕೆ ವಹಿಸಬೇಕು.
ಅಡಿಕೆಗೆ ಸಂಕಷ್ಟ ಬಂದಿರುವ ಈ ಸಂದರ್ಭದಲ್ಲಿ ಸರ್ಕಾರ ಪೂರಕವಾಗಿ ಸ್ಪಂದಿಸಿ ಸಹಕಾರ ನೀಡಿದೆ.
ರಾಜ್ಯದ ಜನತೆಗೆ ಒಳಿತಾಗಲಿ ಎಂದರು.
ಕರ್ನಾಟಕದ ಜಾನಪದ ಪರಂಪರೆಯನ್ನು ತಲೆಮಾರಿನಿಂದ ತಲೆಮಾರಿಗೆ ತಲುಪಿಸಲು ಇಂತಹ ಕಾರ್ಯಕ್ರಮಗಳು ಪೂರಕವಾಗುತ್ತದೆ
ಗೋವಿಂದ ಸಮಸ್ಯೆ ಮತ್ತೆ ಎದುರಾಗುವ ಸಾಧ್ಯತೆಗಳಿದ್ದು ಅದು ಬಾರದಂತೆ ನಾವು ಕಡ್ಡಾಯ ಮುನ್ನೆಚ್ಚರಿಕೆ ವಹಿಸಬೇಕು.
ಅಡಿಕೆಗೆ ಸಂಕಷ್ಟ ಬಂದಿರುವ ಈ ಸಂದರ್ಭದಲ್ಲಿ ಸರ್ಕಾರ ಪೂರಕವಾಗಿ ಸ್ಪಂದಿಸಿ ಸಹಕಾರ ನೀಡಿದೆ.
ರಾಜ್ಯದ ಜನತೆಗೆ ಒಳಿತಾಗಲಿ
ಸಂದೇಶ್ ಜವಳಿ ರಂಗಾಯಣ ನಿರ್ದೇಶಕರು
ಶಿವಮೊಗ್ಗ, ಮಾತನಾಡಿ ನಮ್ಮ ತೀರ್ಥಹಳ್ಳಿಯಲ್ಲಿ ಜಾನಪದ ಕಲೆಗಳ ಅನಾವರಣ ನಡೆದಿದೆ ಜಾತ್ರೆಯ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಅಪರೂಪದ ಕಾರ್ಯಕ್ರಮವನ್ನು ನಡೆಸಿ ಜನಮನ ಸೆಳೆದಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕಲಾವಿದರಿಗೆ ನೀಡುತ್ತಿರುವ ಸಹಕಾರ ಮೆಚ್ಚುವಂಥದ್ದು. ಎಂದು ಹೇಳಿದರು
ಡಾಕ್ಟರ್ ನಾಗರತ್ನ ಶಿವಮೊಗ್ಗ ತಮ್ಮ ಅನುಭವ ಹಂಚಿಕೊಂಡು ನಮ್ಮ ಜನಪದದ ಪ್ರಾತಿನಿಧಿಕ ಕಲೆಗಳು ಅನಾವರಣಗೊಳ್ಳಬೇಕು ಇಂತಹ ಜಾತ್ರೆಗಳಲ್ಲಿ ಸರ್ಕಾರ ಜನಪದದಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಯುವಜನರಲ್ಲಿ ಆಸಕ್ತಿ ಮೂಡುವಂತೆ ಮಾಡುತ್ತಿದೆ ಇನ್ನು ಹೆಚ್ಚಿನ ಅನುಕೂಲ ಜಾನಪದ ಕಲಾವಿದರಿಗೆ ಆಗಬೇಕುನಮ್ಮ ತೀರ್ಥಹಳ್ಳಿಯಲ್ಲಿ ಜಾನಪದ ಕಲೆಗಳ ಅನಾವರಣ ನಡೆದಿದೆ ಜಾತ್ರೆಯ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಅಪರೂಪದ ಕಾರ್ಯಕ್ರಮವನ್ನು ನಡೆಸಿ ಜನಮನ ಸೆಳೆದಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕಲಾವಿದರಿಗೆ ನೀಡುತ್ತಿರುವ ಸಹಕಾರ ಮೆಚ್ಚುವಂಥದ್ದು.
ತೀರ್ಥಳ್ಳಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುಶೀಲ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಅಪರ ಜಿಲ್ಲಾಧಿಕಾರಿ ನಾಗೇಂದ್ರ ಹೊನ್ನಳ್ಳಿ, ರಾಘವೇಂದ್ರ ಸೊಪ್ಪುಗುಡ್ಡೆ ಉಪಸ್ಥಿತರಿದ್ದರು