ಸರ್ಕಾರ ರೈತರು,ಬಡವರ, ಕಾರ್ಮಿಕರು, ದುರ್ಬಲ ವರ್ಗದ ಅಭಿವೃದ್ಧಿ ಪರವಾಗಿದೆ ಎಂದು ಹೇಳಲಾಗಿದೆ ಹಾಗೂ ಇದು
ಸತ್ಯವೇ ಸರಿ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 25 ವರ್ಷಗಳ ಅಮೃತ ಕಾಲದಲ್ಲಿ ಹಾಕಿಕೊಟ್ಟ ಪ್ರಗತಿ ಪಥವನ್ನು ಯಶಸ್ವಿಯಾಗಿ
ಕ್ರಮಿಸುವ ವಿಶ್ವಾಸವಿದೆ.
ರಾಜ್ಯಪಾಲರು ಹೇಳಿರುವ ಅಭಿವೃದ್ಧಿ ಕಾರ್ಯಗಳೆಲ್ಲ ಸತ್ಯವೇ, ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯ ಹಾಗೂ ಜನಪರ ಸರ್ಕಾರ ಎಂದು ರಾಜ್ಯದ ಉನ್ನತ ಸ್ಥಾನದಲ್ಲಿರುವ ರಾಜ್ಯಪಾಲರಿಂದ ನಮಗೆ ಶಭಾಷ್ಗಿರಿ ಸಿಕ್ಕಿದೆ. ರಾಜ್ಯಪಾಲರು ಉಲ್ಲೇಖಿಸಿದಂತೆ, ನಮ್ಮ ಶಿವಮೊಗ್ಗದ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ಉತ್ತೇಜಿಸಲು ಹಾಗೂ ಹೆಚ್ಚಿಸಲು ಫೆ
27 ರಂದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನೆ ಆಗಲಿದೆ, ಇದರಿಂದ ಇಡಿ
ಮಲ್ನಾಡು ಭಾಗದ ಜನರ ಚಲನ ವಲನಕ್ಕೆ ಅನುಕೂಲವಾಗುವಂತೆ, ಹಾಗೂ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಲಿದೆ
,ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಾರಿ ಅನುಕೂಲವಾಗುವಂತೆ ಆಗಲಿದೆ.
ಇದೇ ತರ ಇನ್ನು ಮುಂದುವರೆದು ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವ ಹಾಗೂ ನಿಕಟ
ಪೂರ್ವ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಮಾರ್ಗದರ್ಶನದಂತೆ ಹಾಗೂ ಎಲ್ಲಾ ನಮ್ಮ ಹಿರಿಯ ಬಿಜೆಪಿ ನಾಯಕರ
ಮಾರ್ಗದರ್ಶನದಂತೆ ಮುಂದುವರಿಯಲಾಗುವುದು.